ಹೊಸ ಸಿನಿಮಾ ಇಲ್ಲ, ಅಪ್‌ಡೇಟ್ ಇಲ್ಲ, ಫೋನ್ ಸ್ವಿಚ್ಆಫ್: ಶೆಟ್ರೇ.. ಎಲ್ಲಿದ್ದೀರಿ?

Published : Jun 07, 2025, 05:44 PM IST

ರಕ್ಷಿತ್‌ ಶೆಟ್ಟಿ ಯೋಗಿಯಾಗಿದ್ದಾರಾ ಅಥವಾ ನಿವೃತ್ತರಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೂ ಅವರ ಫೋನ್ ಸ್ವಿಚಾಫ್ ಆಗಿದೆ.

PREV
15

ಇದು ರಕ್ಷಿತ್‌ ಶೆಟ್ಟಿ ಜನ್ಮದಿನದಂದು ಅವರ ಅಭಿಮಾನಿಗಳ ಉದ್ಗಾರ. ಹುಟ್ಟುಹಬ್ಬದಂದು ಹೊಸ ಸಿನಿಮಾ ಅಪ್‌ಡೇಟ್‌ಗೆ ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ರಕ್ಷಿತ್‌ ಹೊಸ ಸಿನಿಮಾದ ಯಾವೊಂದು ಅಪ್‌ಡೇಟ್‌ ಸಹ ಹೊರಬೀಳದಿರುವ ಬಗ್ಗೆ ಟ್ರೋಲ್‌, ಚರ್ಚೆ ಜೋರಾಗಿವೆ.

25

2023ರಲ್ಲಿ ಬಂದ ‘ಸಪ್ತಸಾಗರದಾಚೆ ಎಲ್ಲೋ ಸೈಡ್‌ ಎ’ ಹಾಗೂ ‘ಸೈಡ್‌ ಬಿ’ ಬಳಿಕ ರಕ್ಷಿತ್‌ ಸಿನಿಮಾ ಸೆಟ್ಟೇರಿಲ್ಲ. ‘ರಿಚರ್ಡ್‌ ಆ್ಯಂಟನಿ’ ಸ್ಕ್ರಿಪ್ಟ್‌ ವರ್ಕ್‌ ಇನ್ನೂ ಸಂಪೂರ್ಣಗೊಂಡಂತಿಲ್ಲ. ಪುಣ್ಯಕೋಟಿ ಚಿತ್ರದ ಸುದ್ದಿಯಿಲ್ಲ. ಹೊಸಬರ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿಲ್ಲ. ಯಾವುದೇ ಸಮಾರಂಭದಲ್ಲೂ ಭಾಗವಹಿಸುತ್ತಿಲ್ಲ.

35

ರಕ್ಷಿತ್ ಯೋಗಿಯಾಗಿದ್ದಾರಾ ಅಥವಾ ನಿವೃತ್ತರಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೂ ಅವರ ಫೋನ್ ಸ್ವಿಚಾಫ್ ಆಗಿದೆ. ಪ್ರಮೋದ್‌ ಶೆಟ್ಟಿ, ‘ನಾನು ರಕ್ಷಿತ್‌ ಶೆಟ್ಟಿ ಅವರಿಗೆ ವಿಶ್‌ ಮಾಡಲು ಕಾಲ್‌ ಮಾಡಿದ್ದೆ. ಸ್ವಿಚಾಫ್‌ ಬಂತು. ಅವರ ಹೊಸ ಸಿನಿಮಾದಲ್ಲಿ ನಾನು ನಟಿಸಬೇಕಿದೆ. ಆ ಸಿನಿಮಾದ ಅಪ್‌ಡೇಟ್‌ ನನಗೂ ಸಿಕ್ಕಿಲ್ಲ’ ಎಂದಿದ್ದಾರೆ.

45

ರಿಷಬ್‌ ಹಾರೈಕೆ ಟ್ರೆಂಡಿಂಗ್‌: ಸ್ನೇಹಿತ ರಕ್ಷಿತ್‌ಗೆ ತಮ್ಮಿಬ್ಬರ ಗಿಬ್ಲಿ ಆರ್ಟ್‌ ಫೋಟೋ ಅಪ್‌ಲೋಡ್‌ ಮಾಡಿ ರಿಷಬ್‌ ಶೆಟ್ಟಿ ಶುಭ ಹಾರೈಸಿದ್ದಾರೆ. ‘ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು.

55

ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗಾ’ ಎಂದು ಹಾರೈಸಿದ್ದಾರೆ.

Read more Photos on
click me!

Recommended Stories