Nishvika Naidu: ಬರ್ತ್ ಡೇ ಸಂಭ್ರಮ… ನಟಿಗೆ ಹೆಚ್ಚಾಗಿದ್ದು ವಯಸ್ಸಲ್ಲ… ಆಕೆಯ ಹಾಟ್ನೆಸ್

Published : May 20, 2025, 11:22 AM ISTUpdated : May 20, 2025, 11:28 AM IST

ಚಂದನವನದ ಬ್ಯೂಟಿ ನಿಶ್ವಿಕಾ ನಾಯ್ಡು ಮೇ 19ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿದ ನಟಿ, ತಮಗೆ ವಯಸ್ಸು ಹೆಚ್ಚಾಗಿದ್ದಲ್ಲ, ಆದ್ರೆ ಹಾಟರ್ ಆಗಿರೋದಂತು ನಿಜಾ ಎಂದು ಬರೆದಿದ್ದಾರೆ.   

PREV
18
Nishvika Naidu: ಬರ್ತ್ ಡೇ ಸಂಭ್ರಮ… ನಟಿಗೆ ಹೆಚ್ಚಾಗಿದ್ದು ವಯಸ್ಸಲ್ಲ… ಆಕೆಯ ಹಾಟ್ನೆಸ್

ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸ್ಥಿಗ್ಧ ಸುಂದರಿ ನಿಶ್ವಿಕಾ ನಾಯ್ದು (Nishvika Naidu) ನಟಿಸಿದ್ದು 8 ಸಿನಿಮಾಗಳಲ್ಲಿ ಆದರೂ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದಿದ್ದಾರೆ ಈ ಬ್ಯೂಟಿ. 
 

28

ನಿಶ್ವಿಕಾ ನಟಿ ಮಾತ್ರ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದು, ಹಿತ್ತಲಕ ಕರಿಬ್ಯಾಡ ಮಾವ, ಹೊಡಿರಲೆ ಹಲಗಿ ಹಾಡುಗಳ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ ಚೆಲುವೆ ಕೂಡ ಇವರು. ಜೊತೆ ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು ಎನ್ನುವ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಹೆಣ್ಮಕ್ಕಳು ಹೆಜ್ಜೆ ಹಾಕುವಂತೆ ಮಾಡಿದ್ದರು. 
 

38

ಇದೀಗ ನಿಶ್ವಿಕಾ ನಾಯ್ಡು ಮೇ 19 ರಂದು ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ (birthday celebration) ನಟಿ, ಬರ್ತ್ ಡೇ ಸೆಲೆಬ್ರೇಷನ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದರ ಜೊತೆಗೆ Like my cake says …..a year hotter ಎಂದು ಬರೆದು ಕೊಂಡಿದ್ದಾರೆ. 
 

48

ಸೆಲೆಬ್ರೇಶನ್ ಮೋಡ್ ನಲ್ಲಿರುವ ನಿಶ್ವಿಕಾ, ಬಿಳಿ ಬಣ್ಣದ ತುಂಬಾನೆ ಕ್ಯೂಟ್ ಆಗಿರುವ ಗೌನ್ ಧರಿಸಿದ್ದು, ಕೈಯಲ್ಲಿ ಚೀಸ್ ಕೇಕ್ ಹಿಡಿದು, ಕೇಕ್ ತಿನ್ನುತ್ತಾ ತಮ್ಮ ಹುಟ್ಟುಹಬ್ಬವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ದಾರೆ. ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದ್ರೂ ನಿಶ್ವಿಕಾ ಅಂತೂ ಪೂರ್ತಿ ಕೇಕ್ ತಾವೇ ತಿಂದು ಖಾಲಿ ಮಾಡಿದಂತೆ ಪೋಸ್ ಕೊಟ್ಟಿದ್ದಾರೆ. 
 

58

ಇನ್ನು ನಿಶ್ವಿಕಾ ಬರ್ತ್ ಡೇ ಸಂಭ್ರಮದ ಪುಟ್ಟ ಕೇಕ್ ಮೇಲೆ A year older ಎಂದು ಮೊದಲಿಗೆ ಬರೆದಿದ್ದು, ಬಳಿಕ Older ಮೇಲೊಂದು ಗೆರೆ ಹಾಕಿ, ಕೆಳಗಡೆ Hotter ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮಗೆ ವಯಸ್ಸಾಗಿಲ್ಲ, ಆದರೆ ಹಾಟ್ ಆಗಿದ್ದಂತೂ ನಿಜಾ ಎಂದು ತಿಳಿಸಿದ್ದಾರೆ. 
 

68

ನಿಶ್ವಿಕಾ ನಾಯ್ಡು ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಹ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ. ಹ್ಯಾಪಿ ಬರ್ಟ್ ಡೇ ಕ್ವೀನ್, ಹ್ಯಾಪಿ ಬರ್ತ್ ಡೇ ಬೇಬಿ ಲವ್ ಎಂದೆಲ್ಲಾ ಫೇವರಿಟ್ ನಟಿಗೆ ಶುಭಾಶಯ ಕೋರಿದ್ದಾರೆ. 
 

78

ನಿಶ್ವಿಕಾ ಕರಿಯರ್ ಬಗ್ಗೆ ಹೇಳೋದಾದ್ರೆ ನಟಿ ಅಮ್ಮ ಐ ಲವ್ ಯೂ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಪಡ್ಡೆ ಹುಲಿ, ಜೆಂಟಲ್ ಮ್ಯಾನ್, ರಾಮಾರ್ಜುನ, ಸಖತ್, ಗುರು ಶಿಷ್ಯರು (Guru Shishyaru), ದಿಲ್ ಪಸಂದ್, ಕರಟಕ ದಮನಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

88

ಕರಟಕ ದಮನಕ ನಿಶ್ವಿಕಾ ಕೊನೆಯದಾಗಿ ನಟಿಸಿದ ಚಿತ್ರ, ಇದಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ನಿಶ್ವಿಕಾ ಕಾಣಿಸಿಕೊಂಡಿಲ್ಲ, ಆದ್ರೆ ಮಹಾನಟಿ ರಿಯಾಲಿಟಿ ಶೋ (Mahanati Reality Show) ಜಡ್ಜ್ ಆಗಿ ನಿಶ್ವಿಕಾ ನಾಯ್ಡು ಆಯ್ಕೆಯಾಗಿದ್ದರು. 
 

Read more Photos on
click me!

Recommended Stories