ಗಟ್ಟಿಮೇಳ ಮತ್ತು ಅಣ್ಣಯ್ಯ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಹೊಸದೊಂದು ಸಿನಿಮಾದಲ್ಲಿ ನಾಯಕ ಪೃಥ್ವಿ ಅಂಬಾರ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿಶಾ ಅದೃಷ್ಟ ಬದಲಾಗುತ್ತಾ ಕಾದು ನೋಡಬೇಕು.
ಕನ್ನಡ ಕಿರುತೆರೆಯಲ್ಲಿ ತಮ್ಮ ರೌಡಿ ಬೇಬಿ ಲುಕ್, ಡೈಲಾಗ್ ಗಳಿಂದ ಹಾಗೂ ಸಖತ್ ಆಗಿರುವ ಅಭಿನಯದಿಂದ ಜನಪ್ರಿಯತೆ ಪಡೆದ ಬೆಡಗಿ ನಿಶಾ ರವಿಕೃಷ್ಣನ್ ಇದೀಗ ಮತ್ತೊಮ್ಮೆ ಚಂದನವನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಸಿದ್ಧವಾಗಿ ನಿಂತಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದ ನಾಯಕಿಯಾಗಿ ಮತ್ತಷ್ಟು ಸದ್ದು ಮಾಡಲಿದ್ದಾರೆ ನಿಶಾ.
25
ಹೊಸ ಸಿನಿಮಾಗೆ ನಾಯಕಿ
ನಿಶಾ ರವಿಕೃಷ್ಣನ್ ಆರಂಭದಲ್ಲಿ ಬಾಲ ನಟಿಯಾಗಿ, ಬಳಿಕ ಸೈಡ್ ರೋಲ್ ಗಳಲ್ಲಿ ನಟಿಸಿ, ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿಯಾಗಿ ಮೋಡಿ ಮಾಡಿದರು. ಗಟ್ಟಿಮೇಳ ಮುಗಿಯುತ್ತಿದ್ದಂತೆ, ತೆಲುಗು ಸೀರಿಯಲ್ ನಲ್ಲಿ ಮಿಂಚಿದ ನಿಶಾ ಬಳಿಕ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಪಾರು ಪಾತ್ರದ ಮೂಲಕ ಮನೆಮಾತಾಗಿದ್ದರು. ಇದೀಗ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ.
35
ಹಾರರ್ ಕಾಮಿಡಿ ಸಿನಿಮಾದಲ್ಲಿ ನಿಶಾ
ಹೌದು ನಿಶಾ ರವಿಕೃಷ್ಣನ್ ‘ದರ್ಶನ’ ಎನ್ನುವ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ನಾಯಕನಾಗಿ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಕೆಲ ದಿನಗಳ ಹಿಂದಷ್ಟೇ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ.
ಪೃಥ್ವಿ ಅಂಬಾರ್, ನಿಶಾ ರವಿಕೃಷ್ಣನ್, ತಬಲಾ ನಾಣಿ, ಗೌರವ್ ಶೆಟ್ಟಿ, ಆದಿತ್ಯಾ ಆಶ್ರೀ, ತುಕಾಲಿ ಸಂತೋಷ್, ವರ್ಷಾ ದಿಗ್ರಾಜೆ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸ್ವಸ್ತಿಕ್ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಅರುಣ್ ಕುಮಾರ್ ಎನ್ನುವವರು ಮ್ಯಾಟ್ರಿಕ್ಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
55
ನಿಶಾ ರವಿಕೃಷ್ಣನ್ ನಟಿಸಿರುವ ಸಿನಿಮಾಗಳು
ನಿಶಾ ಈಗಾಗಲೇ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಂಶು’ ಎನ್ನುವ ಫಿಮೇಲ್ ಒರಿಯೇಂಟೆಡ್ ಸಿನಿಮಾದ ಮೂಲಕ ನಿಶಾ ಚಂದನವನಕ್ಕೆ ಕಾಲಿಟ್ಟಿದ್ದರು, ಬಳಿಕ ಅಂದೊಂದಿತ್ತು ಕಾಲ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಗೆ ಜೋಡಿಯಾಗಿ ಕೂಡ ನಟಿಸಿದ್ದರು. ಇದೀಗ ‘ದರ್ಶನ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.