ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶೇಕ್ ಇಟ್ ಪುಷ್ಪವತಿ’ ಖ್ಯಾತಿಯ ನಟಿ ನಿಮಿಕಾ ರತ್ನಾಕರ್

Published : Apr 08, 2026, 08:32 PM IST

Nimika Ratnakar: ದರ್ಶನ್ ತೂಗುದೀಪ್ ಜೊತೆ ‘ಕ್ರಾಂತಿ’ ಸಿನಿಮಾದ ಶೇಕ್ ಇಟ್ ಪುಷ್ಫವತಿ ಹಾಡಿನ ಮೂಲಕ ಕನ್ನಡಿಗರು ಹುಚ್ಚೆದ್ದು ಕುಣಿಯುವಂತೆ ಮಾಡಿದ ನಟಿ ನಿಮಿಕಾ ರತ್ನಾಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಯ ಸುಂದರ ಫೊಟೋಗಳು ಇಲ್ಲಿವೆ. 

PREV
16
ನಿಮಿಕಾ ರತ್ನಾಕರ್

ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನಿಮಾಗಳಲ್ಲಿ ಮಿಂಚಿ ‘ಶೇಕ್ ಇಟ್ ಪುಷ್ಪವತಿ’ ಹಾಡಿನ ಮೂಲಕ ಗಮನ ಸೆಳೆದ ನಟಿ ನಿಮಿಕಾ ರತ್ಮಾಕರ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಮಾರಂಭದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

26
ಮಂಗಳೂರು ಬೆಡಗಿ

ಮೂಲತಃ ಮಂಗಳೂರು ಬೆಡಗಿಯಾಗಿರುವ ನಿಮಿಕಾ, ಹುಟ್ಟೂರಾದ ಮಂಗಳೂರಿನಲ್ಲಿಯೇ ಅದ್ಧೂರಿ ಸಮಾರಂಭದಲ್ಲಿ ಆಶೀಶ್ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಶೀಶ್ ಮುಂಬೈ ಮೂಲದ ಉದ್ಯಮಿ ಎನ್ನಲಾಗುತ್ತಿದೆ, ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಗುರುಹಿರಿಯರು, ಆಪ್ತರ, ಸ್ನೇಹಿತರ ಸಮ್ಮುಖದ ಮದುವೆ ಅದ್ಧೂರಿಯಾಗಿ ನಡೆದಿದೆ.

36
ಮದುವೆಯ ಸಂಭ್ರಮ

ತಮ್ಮ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಮದುವೆಯ ಸುಂದರ ಫೋಟೊಗಳನ್ನು ಹಂಚಿಕೊಂಡಿರುವ ನಿಮಿಕಾ, ಮಲ್ಲಿಗೆ ಪರಿಮಳ, ನಾದಸ್ವರದ ಧ್ವನಿ ಮತ್ತು ಸಾವಿರ ಆಶೀರ್ವಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ. ಮದುವೆ ಸಾಂಪ್ರಾದಾಯಿಕ ಶೈಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ.

46
ಪುಷ್ಪವತಿಯಾಗಿ ಮಿಂಚಿದ ನಿಮಿಕಾ

ನಿಮಿಕಾ ರತ್ನಾಕರ್ ಕನ್ನಡ ಸಿನಿಮಾಗಳಲ್ಲಿ ಕೆಲವು ವರ್ಷಗಳಿಂದ ನಟಿಸಿಕೊಂಡು ಬಂದಿದ್ದಾರೆ. ದರ್ಶನ್ ತೂಗುದೀಪ್ ಜೊತೆಗೆ 'ಕ್ರಾಂತಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ 'ಶೇಕ್ ಇಟ್ ಪುಷ್ಪವತಿ' ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುವ ಮೂಲಕ ಕನ್ನಡಿಗರ ಮನೆಮಾತಾಗಿದ್ದರು.

56
ನಿಮಿಕಾ ನಟಿಸಿದ ಸಿನಿಮಾಗಳು

‘ಕ್ರಾಂತಿ’ ಸಿನಿಮಾ ಮಾತ್ರವಲ್ಲದೇ, ನಿಮಿಕಾ ‘ರಾಮಧ್ಯಾನ’, 'ಅಬ್ಬರ', 'ಮಿಸ್ಟರ್ ಬ್ಯಾಚುಲರ್' ಹಾಗೂ 'ಫ್ಲರ್ಟ್' ಮೊದಲಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ‘ಫೀನಿಕ್ಸ್’ ಮತ್ತು ‘ಗೆರಿಲ್ಲಾ ವಾರ್’ ಸಿನಿಮಾಗಳಲ್ಲೂ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಈ ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

66
ಮಾಡೆಲ್ ಆಗಿದ್ದ ನಿಮಿಕಾ

ನಿಮಿಕಾ ರತ್ನಾಕರ್ ನಟಿಯಾಗುವುದಕ್ಕೂ ಮುನ್ನ ಮಾಡೆಲ್ ಕರಿಯರ್ ಆರಂಭಿಸಿದ್ದರು. ಆ ಬಳಿಕ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಹಿನ್ನೆಲೆ ಗಾಯಕಿ ಕೂಡ ಹೌದು, ತುಳು ಸಿನಿಮಾ ಮದಿಪುನಲ್ಲಿ ಹಾಡು ಹಾಡಿದ್ದರು. ನಿಮಿಕಾ ನಟಿಸಿದ ಮೊದಲ ಕನ್ನಡ ಸಿನಿಮಾ 'ರಾಮಧಾನ್ಯ'. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ ನಿಮಿಕಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories