ಬರ್ತಡೇ ಪಾರ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಆಂಡ್ ಫ್ಯಾಮಿಲಿ; ಫೋಟೋ ವೈರಲ್!

First Published Aug 10, 2023, 5:02 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ನಿಖಿಲ್ ಕುಮಾರ್ ಫ್ಯಾಮಿಲಿ ಫೋಟೋ. ಎಲ್ಲಿದ್ದೀರಾ ಎಂದ ನಿಖಿಲ್.... 

ಕನ್ನಡ ಚಿತ್ರರಂಗದ ಯುವ ರಾಜ್ ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ  ಸ್ನೇಹಿತರೊಂದಿಗೆ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್ ಆಗಿದೆ. ಇಡೀ ಫ್ಯಾಮಿಲಿಯನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Latest Videos


ಬ್ಲ್ಯಾಕ್ ಆಂಡ್ ವೈಟ್ ಮ್ಯಾಕ್ಸಿಯಲ್ಲಿ ರೇವತಿ, ಬ್ಲ್ಯಾಕ್ ಆಂಡ್ ವೈಟ್ ಔಟ್‌ಫಿಟ್‌ನಲ್ಲಿ ಅವ್ಯಾನ್ ದೇವ್, ಬ್ಲೂ ಆಂಡ್‌ ಬ್ಲ್ಯಾಕ್ ಪ್ಯಾಂಟ್‌ನಲ್ಲಿ ನಿಖಿಲ್ ಮಿಂಚಿದ್ದಾರೆ.

ಫೋಟೋ ನೋಡಿದರೆ ಇದು ಸ್ನೇಹಿತನ ಬರ್ತಡೇ ಪಾರ್ಟಿ ಅನಿಸುತ್ತದೆ. ಪುಟ್ಟ ಹುಡುಗ ಕೇಕ್ ಕಟ್ ಮಾಡುತ್ತಿದ್ದಾರೆ, ಅವ್ಯಾನ್ ಎಂಜಾಯ್ ಮಾಡುತ್ತಿದ್ದಾನೆ.

ಕೆಲವು ದಿನಗಳಿಂದ ನಿಖಿಲ್ ತಮ್ಮ ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಮಾಡುತ್ತಿದ್ದರು. ಟ್ರಿಪ್‌ ಮುಗಿಸಿಕೊಂಡು ಬರುತ್ತಿದ್ದಂತೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

click me!