ಬಾಲಿಯಲ್ಲಿ ಹರ್ಷಿಕಾ ಪೂಣಚ್ಚ ಬ್ಯಾಚುಲರೇಟ್‌ ಪಾರ್ಟಿ; ಫೋಟೋ ವೈರಲ್!

Published : Aug 10, 2023, 09:53 AM IST

ಸೋಷಿಯಲ್ ಮೀಡಿಯಾದಲ್ಲಿ ಬಾಲಿ ಟ್ರಿಪ್ ಫೋಟೋ ಅಪ್ಲೋಡ್ ಮಾಡಿದ ಹರ್ಷಿಕಾ. ಬ್ಯಾಚುಲರೇಟ್ ಪಾರ್ಟಿ ಹೇಗಿದೆ ಎಂದ ನೆಟ್ಟಿಗರು....

PREV
15
ಬಾಲಿಯಲ್ಲಿ ಹರ್ಷಿಕಾ ಪೂಣಚ್ಚ ಬ್ಯಾಚುಲರೇಟ್‌ ಪಾರ್ಟಿ; ಫೋಟೋ ವೈರಲ್!

ಕಲಾವಿದ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ ಆ.23 ಮತ್ತು 24ರಂದು ಕೊಡಗಿನ ವಿರಾಜಪೇಟೆಯಲ್ಲಿ ವಿವಾಹ ಆಗುತ್ತಿದ್ದಾರೆ. 

25

ಈ ಹಿನ್ನೆಲೆಯಲ್ಲಿ ಹರ್ಷಿಕಾ ಪೂಣಚ್ಚ ತಮ್ಮ ಸ್ನೇಹಿತೆಯರ ಬಳಗದೊಂದಿಗೆ ಇಂಡೋನೇಷ್ಯಾದ ಬಾಲಿಯಲ್ಲಿ ಬ್ಯಾಚುಲರೇಟ್‌ ಪಾರ್ಟಿ ಆಚರಿಸಿದ್ದಾರೆ.

35

ಬಾಲಿಯ ಸ್ಫಟಿಕ ಶುಭ್ರ ಸಮುದ್ರ ತೀರದಲ್ಲಿ ಹರ್ಷಿಕಾ ಮತ್ತು ಗ್ಯಾಂಗ್ ಸಂಭ್ರಮದ ಕ್ಷಣಗಳನ್ನು ಕಳೆದುಬಂದಿದೆ. ಇದೀಗ ಈ ಜೋಡಿ ಖುಷಿಯಿಂದ ಹಸೆಮಣೆ ಏರಲು ಸಜ್ಜಾಗಿದ್ದಾರೆ.

45

ಈ ಮಧ್ಯೆ ಭುವನ್‌ ಪೊನ್ನಣ್ಣ ತನ್ನ ಬ್ಯಾಚುಲರ್‌ ಪಾರ್ಟಿ ಆಚರಿಸಲು ಗೆಳೆಯರೊಂದಿಗೆ ರಷ್ಯಾಗೆ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಅವರು ದುಬೈಗೂ ಹೋಗಿ ಸಿಂಗಲ್ ಲೈಫನ್ನು ಆನಂದಿಸಲಿದ್ದಾರೆ.

55

ಈ ಜೋಡಿ ಬಹಳ ಹಿಂದಿನಿಂದಲೇ ಪ್ರೇಮಿಗಳಾಗಿ ಗುರುತಿಸಿಕೊಂಡಿದ್ದರು. ದರೆ ಕರಿಯರ್‌ ಕಾರಣದಿಂದಾಗಿ ಮದುವೆಯನ್ನು ಸಾಧ್ಯವಾದಷ್ಟು ಮುಂದೂಡುತ್ತಾ ಬಂದಿದ್ದರು.  ಕುಟುಂಬ ವರ್ಗ, ಚಿತ್ರರಂಗದ ಬಂಧುಗಳ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories