Children's Day; ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್

Published : Nov 14, 2022, 05:44 PM IST

ಮಕ್ಕಳ ದಿನಾಚರಣೆ ಅಂಗವಾಗಿ ನಿಖಿಲ್ ಕುಮಾರ್ ಮಗನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಿಖಿಲ್ ಪುತ್ರನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

PREV
16
Children's Day; ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್

ಸ್ಯಾಂಡಲ್ ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರ್ ಪತ್ನಿ, ಮಗನ ಜೊತೆ ಸಮಯ ಕಳೆಯುತ್ತಿದ್ದಾರೆ. ನಿಖಿಲ್ ಕುಮಾರ್ ಮತ್ತು ರೇವತಿ ದಂಪತಿ ಪುತ್ರನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಿದ್ದಾರೆ.  ಇತ್ತೀಚಿಗಷ್ಟೆ ಒಂದು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅವ್ಯಾನ್ ಫೋಟೋಗಳು ವೈರಲ್ ಆಗಿತ್ತು.

26

ನಿಖಿಲ್ ಪುತ್ರ ಅವ್ಯಾನ್ ದೇವ್ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ನಿಖಿಲ್ ಮಕ್ಕಳ ದಿನಾಚರಣೆ ಅಂಗವಾಗಿ ಮತ್ತಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಿಖಿಲ್ ಪುತ್ರನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

36

ನವೆಂಬರ್ 14 ಮಕ್ಕಳ ದಿನಾಚರಣೆ. ಇಂದಿನ ವಿಶೇಷವಾಗಿ ನಿಖಿಲ್ ದಂಪತಿ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗಳು ಮತ್ತು ಪತ್ನಿ ರೇವತಿ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

46

ಬಿಳಿ ಬಣ್ಣದ ಶರ್ಟ್ ಮತ್ತು ಡೆನಿಮ್‌ನಲ್ಲಿ ನಿಕಿಲ್ ಪುತ್ರ ಕಂಗೊಳಿಸಿದ್ದಾನೆ. ನಿಖಿಲ್ ಮತ್ತು ಪತ್ನಿ ರೇವತಿ ಕೂಡ ಬಿಳಿ ಬಣ್ಣದ ಡ್ರೆಸ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಸುಂದರ ಕುಟುಂಬದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಫೋಟೋಗಳನ್ನು ಶೇರ್ ಮಾಡ ನಿಖಿಲ್ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. 

56

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ 2020 ಏಪ್ರಿಲ್‌ನಲ್ಲಿ ಹಸೆಮಣೆ ಏರಿದರು. ನಿಖಿಲ್ ಮತ್ತು ರೇವತಿ ಮದುವೆಗೆ ಲಾಕ್ ಡೌನ್ ಅಡ್ಡಿಯಾಗಿತ್ತು. ಭೀಕರ ಲಾಕ್ ಡೌನ್ ಸಮಯದಲ್ಲೇ ರಾಮನಗರದಲ್ಲಿ ಕುಮಾರಸ್ವಾಮಿ ಪುತ್ರನ ಮದುವೆ ನೆರವೇರಿತು. 

66
nikhil kumar son

ಮದುವೆಯಾಗಿ ಒಂದು ವರ್ಷದ ಬಳಿಕ ಅಂದರೆ 2021 ಸೆಪ್ಟಂಬರ್ 24ರಂದು ರೇವತಿ ಗಂಡು ಮಗನಿಗೆ ಜನ್ಮ ನೀಡಿದರು.  9 ತಿಂಗಳ ಬಳಿಕ ಮಗನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಿದರು. ನಾಮಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories