ರಾಮ್‌ಕುಮಾರ್ ಸರ್‌ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!

First Published | Oct 23, 2024, 5:08 PM IST

ಧನ್ಯಾ ಮತ್ತು ಧಿರೇನ್ ಅಪ್ಲೋಡ್ ಮಾಡುವ ಫೋಟೋಗಳನ್ನು ನೋಡಿ ರಾಮ್‌ಕುಮಾರ್ ಕಮ್‌ಬ್ಯಾಕ್ ಮಾಡಬೇಕು ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು.....
 

ಗೆಜ್ಜೆ ನಾದ, ತಾಳಿಯ ಸೌಭಾಗ್ಯ, ತಾಯಿ ಇಲ್ಲದ ತವರು,ಹೊದ ಬದುಕು, ಸೂರ್ಯ ಪುತ್ರ, ಸ್ನೇಹಲೋಕ, ಕುಶಲವೇ ಕ್ಷೇಮವೇ, ಶ್ರೀ ನಾಗ ಶಕ್ತಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ನಟ ರಾಮ್‌ಕುಮಾರ್.

ಡಾ.ರಾಜ್‌ಕುಮಾರ್ ಅವರ ಮುದ್ದಿನ ಮಗಳು ಪೂರ್ಣಿಮಾರನ್ನು ಮದುವೆ ಮಾಂಡಿಕೊಂಡರು. ಧನ್ಯಾ ರಾಮ್‌ಕುಮಾರ್ ಮತ್ತು ಧಿರೇನ್ ಎಂದು ಇಬ್ಬರು ಮುದ್ದಾಗ ಮಕ್ಕಳಿದ್ದಾರೆ. 

Tap to resize

ಹಲವು ವರ್ಷಗಳಿಂದ ರಾಜ್‌ಕುಮಾರ್ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ಮಕ್ಕಳ ಸಿನಿಮಾ ಪ್ರೆಸ್‌ಮೀಟ್ ಮತ್ತು ಪ್ರೀಮಿಯರ್ ಶೂಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಮತ್ತು ಬಣ್ಣದ ಪ್ರಪಂಚದಿಂದ ದೂರ ಉಳಿದಿರುವ ರಾಮ್‌ಕುಮಾರ್ ಮತ್ತೆ ಕಮ್‌ಬ್ಯಾಕ್ ಮಾಡಬೇಕು ಎಂದು ಸಿನಿಮಾ ಪ್ರೇಮಿಗಳು ಆಶೀಸುತ್ತಿದ್ದಾರೆ. ಮಕ್ಕಳ ಸಿನಿಮಾದಲ್ಲಿ ತಂದೆಯ ಪಾತ್ರ ಆದರೂ ಮಾಡಬೇಕು ಎಂದಿ ಡಿಮ್ಯಾಂಡ್ ಇಟ್ಟಿದ್ದಾರೆ.

ಫಾದರ್ಸ್ ಡೇ ಅಥವಾ ಹುಟ್ಟುಹಬ್ಬದ ದಿನ ಪುತ್ರಿ ಧನ್ಯಾ ಮತ್ತು ಪುತ್ರ ಧಿರೇನ್ ಹಂಚಿಕೊಳ್ಳುವ ಫೋಟೋಗಳಲ್ಲಿ ಮಾತ್ರ ರಾಮ್‌ಕುಮಾರ್ ಸರ್ ಕಾಣಿಸಿಕೊಳ್ಳುವುದು. ಜನರಿಗೆ ಹತ್ತಿರವಾಗಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.

ನಿರ್ಮಾಪಕರ ಪುತ್ರನಾಗಿರುವ ರಾಜ್‌ಕುಮಾರ್‌ಗೆ ಸಿನಿಮಾಗಳು ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಚಿಕ್ಕ ವಯಸ್ಸಿನಿಂದಲೂ ತುಂಬಾ ಸಿನಿಮಾಗಳನ್ನು ನೋಡುತ್ತಿದ್ದ ಕಾರಣ ನಟಿಸುವ ಒಲವು ಹೆಚ್ಚಾಗಿತ್ತು.

2021ರಲ್ಲಿ ಶ್ರೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂಬ ಚಿತ್ರದ ಮೂಲಕ ರಾಮ್‌ಕುಮಾರ್ ಕಮ್‌ಬ್ಯಾಕ್ ಮಾಡಿದ್ದರು. ಪ್ರವೀನ್ ಚಂಗಪ್ಪ ನಿರ್ದೇಶನದಲ್ಲಿ ಪ್ರೊಫೆಸರ್‌ ಕೃಷ್ಣಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Latest Videos

click me!