ಮೂಗುತಿ ಸುಂದರಿ ಸಪ್ತಮಿ ಗೌಡ ಟ್ರೆಂಡಿ ಫೋಟೊಗೆ ನೀವೆ ಕ್ಯಾಪ್ಶನ್ ಕೊಡಬೇಕಂತೆ… ಏನ್ ಕೊಡ್ತೀರಾ?

First Published | Oct 23, 2024, 12:28 PM IST

ಕಾಂತಾರ ಖ್ಯಾತಿಯ ಮೂಗುತಿ ಸುಂದರಿ ಸಪ್ತಮಿ ಗೌಡ ಹೊಸ ಫೋಟೊ ಶೇರ್ ಮಾಡಿದ್ದು, ಕ್ಯಾಪ್ಶನ್ ಕೊಡೋದಕ್ಕೆ ಸಹಾಯ ಮಾಡಿ ಅಂದಿದ್ದಾರೆ. 
 

ಸ್ಯಾಂಡಲ್ ವುಡ್ ನಟಿ ಸಪ್ತಮಿ ಗೌಡ (Sapthami Gowda) ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಎಂಟ್ರಿ ಕೊಟ್ಟರೂ ಸಹ ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಲೀಲಾ ಪಾತ್ರದ ಮೂಲಕ ಜನಪ್ರಿಯತೆ ಪಡೆದರು. ಸದ್ಯ ತಮ್ಮ ಫೋಟೊ ಶೂಟ್ ಗಳಿಂದಲೇ ಮಿಂಚುತ್ತಿದ್ದಾರೆ ನಟಿ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಪ್ತಮಿ ಇದೀಗ ತಮ್ಮ ಹೊಸ ಫೋಟೊ ಶೂಟ್ (photoshoot) ಹಂಚಿಕೊಂಡಿದ್ದು, ಕ್ಯಾಪ್ಶನ್ ಕೊಡೋದಕ್ಕೆ ಸಹಾಯ ಮಾಡಿ ಎಂದಿದ್ದಾರೆ. ನಟಿ ಫೋಟೊ ನೋಡಿ ಅಭಿಮಾನಿಗಳು ಅಭಿಮಾನದ ಜೊತೆಗೆ, ಪ್ರೀತಿಯನ್ನು ಹರಿಸಿದ್ದಾರೆ. 
 

Tap to resize

ಸಿಲ್ವರ್, ವೈಟ್, ಗೋಲ್ಡನ್ ಬಣ್ಣ ಹೊಂದಿರುವ ಟ್ಯೂಬ್ ಬ್ಲೌಸ್ ಧರಿಸಿರುವ ಸಪ್ತಮಿ ಗೌಡ, ಅದರ ಜೊತೆಗೆ ಗೋಲ್ಡನ್ ಬಣ್ಣದ ಸೀರೆ ಧರಿಸಿದ್ದಾರೆ. ಜೊತೆಗೆ ಮನಸ್ಸು ಬಿಚ್ಚಿ ನಗುತ್ತಾ ಸಪ್ತಮಿ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. 
 

ಸಪ್ತಮಿ ಗೌಡ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ಫೋಟೊಗಳಿಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಗಳು ಕೂಡ ಬಂದಿವೆ. ಯುವರಾಣಿ, ಸುಂದರಿ, ಕ್ರಶ್, ಹಾಟ್, ಏಂಜಲ್, ಸೆಕ್ಸಿ ಎಂದು ಕಾಮೆಂಟ್ ಮಾಡಿ, ಹಾರ್ಟ್ ಇಮೋಜಿಗಳ ಸುರಿಮಳೆ ಸುರಿಸಿದ್ದಾರೆ. 
 

ಅಷ್ಟೇ ನಿಮ್ಮ ನಗು ತುಂಬಾನೆ ಚೆನ್ನಾಗಿದೆ, ನಿಮ್ಮ ಕಣ್ಣುಗಳು ನನ್ನನ್ನ ತುಂಬಾನೆ ಸೆಳೆಯುತ್ತಿವೆ , ನಿಮ್ಮ ಫೋಟೊಗೆ ಕ್ಯಾಪ್ಶನ್ ಅಗತ್ಯಾನೆ ಇಲ್ಲ ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ನಮ್ಮ ಕನಕಪುರದ ಬೆಡಗಿ ತುಂಬಾನೆ ಸೂಪರ್, ಚಾರ್ಮಿಂಗ್ ಬ್ಯೂಟಿ, ಸ್ಯಾಂಡಲ್ ವುಡ್ ಕ್ವೀನ್ ಅಂತ ಕೂಡ ಕಾಮೆಂಟ್ ಮಾಡಿದ್ದಾರೆ. 
 

ನಿಮ್ಮ ಆಂದವನ್ನು ವರ್ಣಿಸಲು ಕಾಪ್ಷನ್ ಗಳೇ ಇಲ್ಲ, ಏನಂತೀರಾ? ಬೆಣ್ಣೆ ತರ ಇದೀರಾ, ನನ್ನ ಹೃದಯ ಕದ್ದು ಬಿಟ್ಟಿದ್ದೀರಿ ಅಂದ್ರೆ, ಮತ್ತೆ ಕೆಲವರು ನಿಮಗೆ ಸರಿಯಾಗಿ ಬ್ಲೌಸ್ ಹಾಕಿ, ಸೀರೆ ಉಡೋದಕ್ಕೆ ಬರಲ್ವಾ? ನಮ್ಮ ಸಂಸ್ಕೃತಿಯನ್ನು ಉಳಿಸಿ, ಹಾಳು ಮಾಡ್ಬೇಡಿ ಅಂದಿದ್ದಾರೆ. ಇನ್ನೂ ಕೆಲವರು ಕಾಳಜಿ ವಹಿಸಿ, ಮೇಡಂ ಯಾಕೆ ಇಷ್ಟು ವೀಕ ಆಗಿದ್ದೀರಿ ಅಂತಾನೂ ಕೇಳಿದ್ದಾರೆ. 
 

ಕಾಂತಾರ ಸಿನಿಮಾದ (Kantara Film) ಮೂಲಕ ಪ್ಯಾನ್ ಇಂಡಿಯಾ ನಟಿಯಾದ ಸಪ್ತಮಿ,  ಯುವ ಸಿನಿಮಾಲ್ಲೂ ಮಿಂಚಿದರು ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಕಾಲಿಟ್ಟರು. ಸದ್ಯ ಕಾಂತಾರಾ ಅಧ್ಯಾಯ 1ರ ಜೊತೆ ತೆಲಗು ಸಿನಿಮಾ ತಮ್ಮುಡುವಿನಲ್ಲಿ ಕೂಡ ನಟ ನಿತಿನ್ ಜೊತೆಗೆ ಸಪ್ತಮಿ ನಟಿಸುತ್ತಿದ್ದಾರೆ. 
 

Latest Videos

click me!