ನಾನು ಹಾಕೋ ಬಟ್ಟೆಗೂ ಕಾಮೆಂಟ್ ಮಾಡ್ತಾರೆ, ದುಡ್ಡಿಗೆ ಆ ಕೆಲಸ ಮಾಡಲ್ಲ: ನಮ್ರತಾ ಗೌಡ
ನಾಗಿಣಿ ಹಿಂದೆ ಬಿದ್ದಿದ್ದಾರೆ ಟ್ರೋಲ್ ಪೇಜ್‌ಗಳು. ಯಾಕೆ ಪದೇ ಪದೇ ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದು? ಉತ್ತರ ಇಲ್ಲಿದೆ.....
ನಾಗಿಣಿ ಹಿಂದೆ ಬಿದ್ದಿದ್ದಾರೆ ಟ್ರೋಲ್ ಪೇಜ್‌ಗಳು. ಯಾಕೆ ಪದೇ ಪದೇ ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದು? ಉತ್ತರ ಇಲ್ಲಿದೆ.....
ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಇತ್ತೀಚಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾನ್ಯವಾಗಿ ನಾನು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒಂದೊಂದು ವಿಡಿಯೋ ನೋವು ಮಾಡುತ್ತದೆ. ನನಗೆ ಅವಕಾಶಗಳು ಸಿಗುತ್ತಿಲ್ಲ ಹೀಗಾಗಿ ರೀಲ್ಸ್ ಮಾಡುತ್ತಿರುವೆ ಎಂದು ಮಾತನಾಡುತ್ತಿದ್ದಾರೆ.
ನಾನು ತುಂಬಾ ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇರುವ ಜನರಿಗೆ ನನ್ನ ಪರಿಸ್ಥಿತಿ ಏನೂ ನಾನು ಹೇಗೆ ಅನ್ನೋದು ಚೆನ್ನಾಗಿ ಅರ್ಥವಾಗಿದೆ. ಆದರೆ ಯಾರಿಗೆ ನನ್ನ ಬಗ್ಗೆ ಗೊತ್ತಿಲ್ಲದೆ ಕಾಮೆಂಟ್ ಮಾಡುತ್ತಿದ್ದಾರೆ ಅವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ.
ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಪೋಸ್ಟ್ ಮಾಡುತ್ತಿರುತ್ತೀನಿ. ನನಗೆ ದಿಢೀರ್ ಸಕ್ಸಸ್ ಸಿಕ್ಕಿಲ್ಲ ನಾನು ಹಲವು ವರ್ಷಗಳಿಂದ ಕಷ್ಟ ಪಟ್ಟಿದ್ದೀನಿ.
ಕಿಶನ್ ಮತ್ತು ನನ್ನ ಬಗ್ಗೆ ಹಬ್ಬಿಸುವ ಗಾಸಿಪ್ ನಿಜಕ್ಕೂ ಬೇಸ್‌ಲೆಸ್. ನಾನು ಯಾರೊಟ್ಟಿಗೆ ಮಾತನಾಡಿದ್ದರೂ ಕನೆಕ್ಷನ್ ಸೃಷ್ಟಿ ಮಾಡುತ್ತಾರೆ.
ಕಿಶನ್ ಒಳ್ಳೆಯ ಡ್ಯಾನ್ಸರ್....ಅಲ್ಲದೆ ನಮ್ಮ ಜೊತೆ ಹಲವರು ಕೊಲಾಬೋರೇಟ್ ಮಾಡಿಕೊಳ್ಳುತ್ತಾರೆ ಇಲ್ಲಿ ರೀಲ್ಸ್ ಮಾಡಲು ನಾವು ದುಡ್ಡು ವೇಸ್ಟ್ ಮಾಡುತ್ತಿಲ್ಲ ಹಾಗೆ ದುಡಿಯುತ್ತಿಲ್ಲ..ನಮ್ಮಿಂದ ಮತ್ತೊಬ್ಬರಿಗೆ ಸಹಾಯ ಆಗುತ್ತಿದೆ.
ನಾವು ಕಲಾವಿದರಾಗಿ ಕೆಲಸವನ್ನು ಎಂಜಾಯ್ ಮಾಡುತ್ತಿದ್ದೀವಿ.ಸೋಷಿಯಲ್ ಮೀಡಿಯಾ ತುಂಬಾ ನೆಗೆಟಿವ್ ಕಾಮೆಂಟ್‌ಗಳು ಇದೆ...ನಾನು ಧರಿಸುವ ಬಟ್ಟೆಯಿಂದ ಹಿಡಿದು ಕಾಮೆಂಟ್ ಮಾಡುತ್ತಾರೆ.
ಬಿಗ್ ಬಾಸ್ ನಂತರ ಸಾಕಷ್ಟು ಆಫರ್‌ಗಳು ಬಂದರೂ ನಾನು ರಿಜೆಕ್ಟ್ ಮಾಡಿದ್ದೀನಿ. ಬಿಗ್ ಬಾಸ್‌ನಲ್ಲಿ ನಡೆದ ಘಟನೆಗಳನ್ನು ಸಂಪೂರ್ಣವಾಗಿ ಡಾಕ್ಯೂಮೆಂಟ್ ಮಾಡಲಾಗಿದೆ ಅಲ್ಲದೆ ಕೆಲಸ ಮತ್ತು ವೈಯಕ್ತಿಕ ನಿರ್ಧಾರಗಳು ನನ್ನ ಕೈಯಲ್ಲಿ ಇರುತ್ತದೆ. ಸುಳ್ಳು ಸುದ್ದಿಗಳಿಗೆ ನಾನು ಕವಿ ಕೊಡುವುದಿಲ್ಲ ಎಂದಿದ್ದಾರೆ ನಮ್ರತಾ.