ಗೋಲ್ಡನ್ ಗರ್ಲ್ ನಭಾ… ಪಟಾಕ ಪೋರಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ

Published : Aug 08, 2024, 03:03 PM IST

ಸದ್ಯ ತೆಲುಗಿನಲ್ಲಿ ಮಿಂಚುತ್ತಿರುವ ಪಟಾಕ ಪೋರಿ ನಭಾ ನಟೇಶ್ ಇದೀಗ ಎರಡು ವರ್ಷದ ಬ್ರೇಕ್ ನಂತರ ಸಿನಿಮಾಗೆ ಮತ್ತೆ ಎಂಟ್ರಿ ಕೊಟ್ಟಿದ್ದು, ತಮ್ಮ ಹೊಸ ಲುಕ್ ಮೂಲಕ ಸದ್ದು ಮಾಡ್ತಿದ್ದಾರೆ.   

PREV
17
ಗೋಲ್ಡನ್ ಗರ್ಲ್ ನಭಾ… ಪಟಾಕ ಪೋರಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ

ವಜ್ರಕಾಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಪಟಾಕ ಪಾರ್ವತಿಯಾಗಿ ಮಿಂಚಿದ ನಟಿ ನಭಾ ನಟೇಶ್ (Nabha Natesh), ಸದ್ಯ ತೆಲುಗು ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.  
 

27

ಕನ್ನಡಲ್ಲಿ ಶಿವರಾಜ್ ಕುಮಾರ್ (Shivaraj Kumar) ಜೊತೆ ವಜ್ರಕಾಯ, ಲೀ ಮತ್ತು ಸಾಹೀಬಾ ಸಿನಿಮಾಗಳಲ್ಲಿ ನಟಿಸಿರುವ ನಭಾ ನಂತರ ಅದೃಷ್ಟ ಪರೀಕ್ಷಿಸಿ ಹೊರಟಿದ್ದು ತೆಲುಗು ಚಿತ್ರರಂಗಕ್ಕೆ, ಅಲ್ಲಿ ನಟಿಯ ಅದೃಷ್ಟ ಖುಲಾಯಿಸಿ, ಸದ್ಯಕ್ಕಂತೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
 

37

ತೆಲುಗಿನಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಕನ್ನಡದ ಪಟಾಕ ಪೋರಿ ನಭಾ 2022 ರಲ್ಲಿ ನಡೆ ಆಕ್ಸಿಡೆಂಟ್ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಇದೀಗ ಎರಡು ವರ್ಷದ ಬಳಿಕ ಡಾರ್ಲಿಂಗ್ ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ. 
 

47

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ತೆಲುಗಿನ  ಡಾರ್ಲಿಂಗ್ ಚಿತ್ರದಲ್ಲಿ ನಟಿಸಿದ್ದು,  ನಟ ಪ್ರಿಯದರ್ಶಿ ಪುಲಿಕೊಂಡಗೆ ನಾಯಕಿಯಾಗಿ ನಭಾ ಅಭಿನಯಿಸಿದ್ದಾರೆ. ಸದ್ಯಕ್ಕಂತೂ ಅಭಿಮಾನಿಗಳು ನಭಾ ಕಂ ಬ್ಯಾಕ್ ನಿಂದ ಸಖತ್ ಖುಷಿಯಾಗಿದ್ದಾರೆ. 
 

57

ತಮ್ಮ ಸಿನಿಮಾಗಳಿಗಿಂತಲೂ ಫೋಟೋ ಶೂಟ್ (photo shoot) ಮೂಲಕವೇ ಹೆಚ್ಚು ಸುದ್ದಿ ಮಾಡುವ ನಭಾ, ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗೋಲ್ಡನ್ ಬಣ್ಣದ ಸೀರೆಯುಟ್ಟ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದು, ತುಂಬಾ ವೈರಲ್ ಆಗುತ್ತಿವೆ. 
 

67

ನಭಾ ಗೋಲ್ಡನ್ ಬಣ್ಣದ ಥೈ ಹೈ ಫ್ರಂಟ್ ಸ್ಲಿಟ್ ಇರುವ ರೆಡಿಮೆಡ್ ಸೀರೆ ಧರಿಸಿದ್ದು, ಅದಕ್ಕೆ ಮ್ಯಾಚಿಂಗ್ ಆಗುವಂತ ಗೋಲ್ಡನ್ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. ಅದಕ್ಕೆ ಡೈಮಂಡ್ ಜ್ಯುವೆಲ್ಲರಿ ಧರಿಸಿದ್ದು, ತುಂಬಾ ಸುಂದರವಾಗಿ ಕಾಣಿಸ್ತಿದ್ದಾರೆ. 
 

77

ಈ ಫೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರು ನೀವು ಚೆನ್ನಾಗಿದ್ದಿರೋ ಅಥವಾ ಆ ಸೀರೆ ಚೆನ್ನಾಗಿದೆಯೋ ಗೊತ್ತಾಗ್ತಿಲ್ಲ, ನಿಮ್ಮ ಫೋಟೋಕ್ಕಾಗಿ ಕಾಯುತ್ತಿದ್ದೆ, ಗಾರ್ಜಿಯಸ್, ಪ್ರೆಟಿ, ಹಾಟ್, ಗೋಲ್ಡನ್ ಗರ್ಲ್, ಗೋಲ್ಡ್ ಫಿಶ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories