ಸಿನಿಮಾದಲ್ಲಿ ಅವಕಾಶ ಸಿಗದಿದ್ರೆ ಚಹಾ ಅಂಗಡಿ ತೆರೆಯುತ್ತಾರಂತೆ ಮಿಲನ ಬೆಡಗಿ ಪಾರ್ವತಿ

First Published | Aug 7, 2024, 5:34 PM IST

ಮಿಲನ ಮತ್ತು ಪೃಥ್ವಿ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿದ್ದ ಮಲಯಾಳಿ ಬೆಡಗಿ ಪಾರ್ವತಿ ತಿರುವೋತು ತಮ್ಮ ಪ್ಲಾನ್ ಬಿ ಬಗ್ಗೆ ರಿವೀಲ್ ಮಾಡಿದ್ದಾರೆ. 
 

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಮಿಲನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ‌ ಮೂಲಕ ಕನ್ನಡಿಗರ ಮನ‌ ಗೆದ್ದ ಮಲಯಾಳಿ ಬೆಡಗಿ ಪಾರ್ವತಿ ತಿರುವೋತು (Parvathy Thiruvothu). ಇಂದಿಗೂ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾದ್ರೆ ಜನ ಹೊಸ ಸಿನಿಮಾ ನೋಡಿದಂತೆ ಮತ್ತೆ ಮತ್ತೆ ನೊಡೋದಕ್ಕೆ ತಯಾರಿರ್ತಾರೆ ಅಂತಹ ಮೋಡಿ‌ ಮಾಡುವ ಸಿನಿಮಾ ಇದು. 

ಮೊದಲ ಕನ್ನಡ ಚಿತ್ರದಲ್ಲಿ ಜನಪ್ರಿಯತೆ ಗಳಿಸಿದ ನಟಿ ಪಾರ್ವತಿ ಮತ್ತೆ ಪುನೀತ್ ಜೊತೆ ಪೃಥ್ವಿ ಸಿನಿಮಾದಲ್ಲೂ ನಟಿಸೋ‌‌ ಮೂಲಕ ಮೋಡಿ‌ ಮಾಡಿದ್ದರು. ಅದಲ್ಲದೆ ಶ್ರೀನಗರ ಕಿಟ್ಟಿ ಜೊತೆ ಮಳೆ ಬರಲಿ, ಮಂಜು ಇರಲಿ, ಶಿವರಾಜ್ ಕುಮಾರ್ ಜೊತೆ ಅಂದರ್ ಬಾಹರ್ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದರು. 
 

Tap to resize

ಸದ್ಯಕ್ಕಂತೂ ನಟಿ ಪಾರ್ವತಿ ತಮಿಳು ಮತ್ತು ಮಲಯಾಲಂ ಸಿನಿಮಾಗಳಲ್ಲಿ (malayalam cinema) ಬ್ಯುಸಿಯಾಗಿದ್ದಾರೆ. ಮನೋರಾತಂಗಲ್, ರಾತಂಗಲ್, ಹರ್ ಎನ್ನುವ ಮೂರು ಸಿನಿಮಾಗಳಲ್ಲಿ ಪಾರ್ವತಿ  ಕೈಯಲ್ಲಿದೆ. 

ಇತ್ತೀಚೆಗೆ ಉಲ್ಲೋಝುಕ್ಕು ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿರುವ ಪಾರ್ವತಿ ತಿರುವೋತು, ಪ್ರಸ್ತುತ ಚಿಯಾನ್ ವಿಕ್ರಮ್ ಮತ್ತು ಮಾಳವಿಕಾ ಮೋಹನ್ ಅವರೊಂದಿಗೆ ನಟಿಸುತ್ತಿರುವ ತಮ್ಮ ಮುಂದಿನ ಚಿತ್ರ ತಂಗಲಾನ್ ಅನ್ನು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 

ಇದೆಲ್ಲದರ ನಡುವೆ ಪಾರ್ವತಿ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ನಟಿ ಚಹಾ ಅಂಗಡಿ (tea shop) ಇಡುವ ಬಗ್ಗೆ ಮಾತನಾಡಿದ್ದು ಹೆಚ್ಚು ಸದ್ದು ಮಾಡ್ತಿದೆ. 

ಇಂಟರ್ವ್ಯೂ ಒಂದರಲ್ಲಿ ನಿರೂಪಕಿ ನೀವು ಸಿನಿಮಾ ನಟಿ ಆಗದೇ ಇದ್ರೆ, ನಿಮ್ಮ ಸಿನಿಮಾ ಹಿಟ್ ಆಗದೇ ಇದ್ರೆ, ಪ್ರಶಸ್ತಿಗಳು ಬರದೇ ಇರ್ತಿದ್ರೆ ನೀವು ಏನಾಗ್ತಿದ್ರಿ ಎಂದು ಕೇಳಿದ್ದಾರೆ. ಅದಕ್ಕೆ ಪಾರ್ವತಿ ನಾನು ಯಾವಾಗ್ಲೂ ಪ್ಲಾನ್ ಬಿ ಇಟ್ಟುಕೊಂಡಿರ್ತೇನೆ ಎನ್ನುತ್ತಾ, ಚಹಾ ಅಂಗಡಿ ಇಟ್ಟುಕೊಳ್ತಿದ್ದೆ ಎಂದಿದ್ದಾರೆ. 
 

ಹೌದು, ನನಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದರೆ ಅಥವಾ ಅವಕಾಶಗಳೇ ಇಲ್ಲಾ ಅಂತಂದ್ರೆ ನನ್ನ ಹತ್ರ ಪ್ಲ್ಯಾನ್ ಬಿ ಇದೆ. ಸಿನಿಮಾ ಇಲ್ಲಾಂದ್ರೆ ಟೀ ಕಡ ಅಂದ್ರೆ ಚಹಾ ಅಂಗಡಿ ಇಡೋದು ಅಂತ ನಾನು ಪ್ಲ್ಯಾನ್ ಮಾಡಿರೋದಾಗಿ ನಟಿ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಪ್ರಪಂಚದ ಪ್ರತಿಯೊಂದೂ ಕೆಲಸಕ್ಕೂ ತನ್ನದೇ ಆದ ಘನತೆ ಇದೆ ಮತ್ತು ಯಾವುದೇ ಒಂದು ಕೆಲಸಕ್ಕೆ ಯಾರೂ ಹೆಚ್ಚು ಅಂಟಿಕೊಳ್ಳಬಾರದು ಎಂದು ಚಹಾ ಅಂಗಡಿ ಇಡುವ ಕುರಿತು ಬಿಂದಾಸ್ ಆಗಿ ಹೇಳಿಕೆ ನೀಡಿದ್ದಾರೆ ನಟಿ. 
 

Latest Videos

click me!