ಸಿನಿಮಾ ಛಾಯಾಗ್ರಾಹಕ ಭುವನ್ ಗೌಡ ಅವರ ವಿವಾಹವು ಅದ್ದೂರಿಯಾಗಿ ನಡೆದಿದ್ದು, ರಾಕಿಂಗ್ ಸ್ಟಾರ್ ಯಶ್ ಕೂಡ ಮದುವೆಗೆ ಆಗಮಿಸಿದ್ದರು. ಇದರ ಜೊತೆಗೆ ಮಿಸ್ ದಿವಾ ಸೂಪರ್ ನ್ಯಾಷನಲ್ ವಿಜೇತರಾದ ಆಶಾ ಭಟ್ ಮತ್ತು ಶ್ರೀನಿಧಿ ಶೆಟ್ಟಿ ಕೂಡ ಮದುವೆಯಲ್ಲಿ ಮಿಂಚಿದ್ದರು.
ಕನ್ನಡದ ಬ್ಲಾಕ್ ಬಸ್ಟರ್ 'ಕೆಜಿಎಫ್' ಸಿನಿಮಾದ ಖ್ಯಾತ ಛಾಯಾಗ್ರಾಹಕ (Cinematographer) ಭುವನ್ ಗೌಡ (Bhuvan Gowda) ಅವರ ಮದುವೆ ಅದ್ದೂರಿಯಾಗಿ ನಡೆದಿದ್ದು, ಮದುವೆಗೆ ಕೆಜಿಎಫ್ ಮತ್ತು ರಾಬರ್ಟ್ ಬ್ಯೂಟಿಯರು ಕೂಡ ಆಗಮಿಸಿದ್ದು, ಫೋಟೊಗಳನ್ನು ಶೇರ್ ಮಾಡಿದ್ದಾರೆ.
27
ಮಿಸ್ ದಿವಾ ಸೂಪರ್ ನ್ಯಾಷನಲ್ ಸುಂದರಿಯರು
ರಾಬರ್ಟ್ ಸಿನಿಮಾ ನಾಯಕಿಆಶಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಶ್ರೀನಿಧಿ ಶೆಟ್ಟಿ ಜೊತೆ ಕೂಡ ಫೋಟೊ ಶೇರ್ ಮಾಡಿದ್ದು, ಈ ಇಬ್ಬರು ಕೂಡ ಮಿಸ್ ದಿವಾ ಸೂಪರ್ ನ್ಯಾಷನಲ್ ವಿಜೇತರಾಗಿದ್ದಾರೆ.
37
ಆಶಾ ಭಟ್
ಭದ್ರಾವತಿಯ ಹುಡುಗಿ ಆಶಾ ಭಟ್ ಅವರು ಮಿಸ್ ದಿವಾ ಸೂಪರ್ ನ್ಯಾಷನಲ್ 2014ರ ವಿಜೇತರು ಆಗಿದ್ದು, ಇವರು ಜಂಗ್ಲೀ, ರಾಬರ್ಟ್ ಮತ್ತು ಒರೇ ದೇವುಡಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾವು ಭೇಟಿಯಾಗಲು ಸಮಯ ಸಿಗದಿರುವುದು ಹುಚ್ಚುತನ... ಆದರೆ ಮದುವೆಯ ಸೀಸನ್ ಬಂದರೆ, ಒಳ್ಳೆಯ ಜನರು, ಒಳ್ಳೆಯ ನಗು, ತುಂಬಿದ ಹೃದಯಗಳು ಇರುವ ದಾರಿಯನ್ನು ನಾವು ಕಂಡುಕೊಳ್ಳುತ್ತೇವೆ ಎನ್ನುವ ಕ್ಯಾಪ್ಶನ್ ಬರೆದಿದ್ದಾರೆ ನಟಿ.
57
ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿಯವರು ಮಿಸ್ ದಿವಾ ಸೂಪರ್ ನ್ಯಾಷನಲ್ 2016 ವಿಜೇತರಾಗಿದ್ದರು. ಕೆಜಿಎಪ್ಫ಼್ ಚಾಪ್ಟರ್ 1, ಚಾಪ್ಟರ್ 2, ಕೋಬ್ರಾ, ಹಿಟ್ ಜೊತೆಗೆ ತೆಲುಸು ಕಾದ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮದುವೆ ಮನೆಯನ್ನು ಶೆಟ್ರು ಮತ್ತು ಭಟ್ರನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
67
ಯಾರು ಭುವನ್ ಗೌಡ
ಭವನ್ ಗೌಡ ಅವರು ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’, ‘ಕೆಜಿಎಫ್’, ‘ಕೆಜಿಎಫ್ 2’ ಮೊದಲಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಿನಿಮ್ಯಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ನಿಖಿತಾ ಎಂಬುವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
77
ಸಿನಿಮಾ ತಾರೆಯರು ಭಾಗಿ
ಅಕ್ಟೋಬರ್ 24 ರಂದು ಭುವನ್ ಗೌಡ - ನಿಖಿತಾ ಮದುವೆ ನಡೆದಿದ್ದು, ವಿವಾಹ ಸಮಾರಂಭಕ್ಕೆ ‘ಕೆಜಿಎಫ್’ ನಾಯಕಿ ಶ್ರೀನಿಧಿ ಶೆಟ್ಟಿ, ಹಾಗೂ ರಾಬರ್ಟ್ ಬೆಡಗಿ ಆಶಾ ಭಟ್ ಅಲ್ಲದೇ ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀಲೀಲಾ, ಲವ್ಲಿ ಸ್ಟಾರ್ ಪ್ರೇಮ್, ನಟಿ ಅರ್ಚನಾ ಜೋಯಿಸ್, ನಿರ್ದೇಶಕ ಪ್ರಶಾಂತ್ ನೀಲ್, ನಟ ಗರುಡ ರಾಮ್ ಮೊದಲದವರು ಆಗಮಿಸಿದ್ದರು.