Late ಆದ್ರೂ Latest ಆಗಿ ಬಂದ್ರು… ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮನೆಯ ದೀಪಾವಳಿ ಸಂಭ್ರಮ ಹೀಗಿತ್ತು

Published : Oct 25, 2025, 03:04 PM IST

ಕಾಂತಾರ ಚಾಪ್ಟರ್ 1 ಮೂಲಕ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಎಲ್ಲಾ ಪ್ರಚಾರ ಕಾರ್ಯಗಳನ್ನು ಮುಗಿಸಿ, ಕುಟುಂಬದ ಜೊತೆಗೆ ಅದ್ಧೂರಿಯಾಗಿ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಿಸಿದ್ದಾರೆ.

PREV
18
ರಿಷಬ್ ಶೆಟ್ಟಿ

ಕಾಂತಾರ ಚಾಪ್ಟರ್ 1 ಮೂಲಕ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ನಟ ರಿಷಬ್ ಶೆಟ್ಟಿ ಇದೀಗ ತಮ್ಮ ಪ್ರಚಾರ ಕಾರ್ಯಗಳಿಗೆ ಬ್ರೇಕ್ ಕೊಟ್ಟು ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.

28
ದೀಪಾವಳಿ ಸಂಭ್ರಮ ಬಲು ಜೋರು

ಸಿನಿಮಾ ಶೂಟಿಂಗ್ ಆರಂಭವಾಗಿ, ಬಿಡುಗಡೆಯಾಗಿ, ಪ್ರೊಮೋಷನ್, ಥಿಯೇಟರ್ ವಿಸಿಟ್ ಎಂದು ಪೂರ್ತಿಯಾಗಿ ಬ್ಯುಸಿಯಾಗಿದ್ದ ರಿಷಬ್ ಇದೀಗ ಫ್ಯಾಮಿಲಿ ಜೊತೆ ದೀಪಾವಳಿ ಸಂಭ್ರಮಿಸಿದ್ದಾರೆ.

38
ಬೆಳಕಿನ ಹಬ್ಬದ ಸುಂದರ ಕ್ಷಣಗಳು

ದೀಪಾವಳಿ ಹಬ್ಬದಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ, ದೀಪ ಹಚ್ಚಿ, ಪಟಾಕಿ ಹಚ್ಚಿ ಸಂಭ್ರಮಿಸುತ್ತಿರುವ ರಿಷಬ್ ಶೆಟ್ಟಿ ಬೆಳಕಿನ ಈ ಹಬ್ಬ, ಪ್ರೀತಿ ಹಂಚುವ ಸುಂದರ ಕ್ಷಣಗಳು.. ಎಂದು ಕ್ಯಾಪ್ಶನ್ ಬರೆದು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

48
ಟ್ರೆಡಿಶನಲ್ ಲುಕ್

ರಿಷಬ್ ಎಂದಿನಂತೆ ಪಂಚೆ ಧರಿಸಿ, ಬ್ರೌನ್ ಬಣ್ಣದ ಕುರ್ತಾ ಧರಿಸಿದರೆ, ಪತ್ನಿ ಪ್ರಗತಿ ಶೆಟ್ಟಿ ಕೇಸರಿ ಮತ್ತು ಬ್ರೌನ್ ಬಣ್ಣದ ಸೀರೆ ಧರಿಸಿದ್ದಾರೆ. ಮಕ್ಕಳು ಕೂಡ ಪಂಚೆ, ಶರ್ಟ್, ಲಂಗ ಬ್ಲೌಸ್ ನಲ್ಲಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ.

58
ಈ ವರ್ಷ ದೀಪಾವಳಿ ಸೂಪರ್ ಸ್ಪೆಷಲ್

ಈ ವರ್ಷ ರಿಷಬ್ ಶೆಟ್ಟಿ ದೀಪಾವಳಿ ಹಬ್ಬದ ಸಂಭ್ರಮ ತುಂಬಾನೆ ಜೋರಾಗಿದೆ. ಜೊತೆಗೆ ವಿಶೇಷವಾಗಿಯೂ ಇದೆ. ಕಾಂತಾರಾ ಚಾಪ್ಟರ್ 1ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಿರುವುದರಿಂದ ಹಬ್ಬದ ಸಡಗರ ಕೂಡ ಜೋರಾಗಿದೆ.

68
ಅಭಿಮಾನಿಗಳು ಫುಲ್ ಖುಷ್

ಸದ್ಯ ರಿಷ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋದರಿಂದ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ, ಹಾಗಾಗಿ ರಿಷಬ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ, ಪೂರ್ತಿ ಕುಟುಂಬವನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

78
ತಂದೆಯ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ರಿಷಬ್

ಇತ್ತೀಚೆಗೆ ರಿಷಬ್ ಶೆಟ್ಟಿ ತಮ್ಮ ತಂದೆಯವರ 84ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದೊಂದಿದೆ ಆಚರಿಸಿದ್ದರು. ಫೋಟೊಗಳನ್ನು ಹಂಚಿಕೊಂಡು ನನ್ನಪ್ಪನೇ ನನ್ನ ಹೀರೋ ಎಂದು ಹೇಳಿದ್ದರು.

88
ರಿಷಬ್ ಗೆ ರಾಜಯೋಗ

ಸದ್ಯ ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆಯುತ್ತಿರುವ ನಟ ರಿಷಬ್ ಶೆಟ್ಟಿ ತಮ್ಮ ಸಿನಿಮಾದಿಂದ ಇದುವರೆಗೆ 600 ಅಧಿಕ ಕೋಟಿ ಗಳಿಕೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ತಂದೆಯವರು ಮಾತನಾಡಿ ರಿಷಬ್ ಗೆ ಇನ್ನು ಕೆಲವು ವರ್ಷಗಳ ಕಾಲ ರಾಜಯೋಗ ಇದೆ ಹೇಳಿದ್ದರು. ಅಂದರೆ ಇನ್ನು ಮುಂದೆಯೂ ದೊಡ್ಡ ಮಟ್ಟದ ಸಿನಿಮಾಗಳು ರಿಷಬ್ ನಟನೆ-ನಿರ್ದೇಶನದಲ್ಲಿ ಬರುತ್ತೆ ಅಂತಾಯ್ತು.

Read more Photos on
click me!

Recommended Stories