ಶೂಟಿಂಗ್ ಇದ್ದಾಗ ದರ್ಶನ್ ಅವರು ಬೆನ್ನು ನೋವಿದ್ದರೂ ಸತತ 24 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡು ತುಂಬಾ ಸಹಕಾರ ನೀಡಿದ್ದಾರೆ. ಅದ್ದೂರಿ ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀಗೆ ಹೇಳಿದ್ದು ಮಿಲನ ಪ್ರಕಾಶ್.
‘ದರ್ಶನ್ ಇದುವರೆಗೆ ಮಾಡಿರದ ಪಾತ್ರವನ್ನು ‘ಡೆವಿಲ್’ ಸಿನಿಮಾದಲ್ಲಿ ಮಾಡಿದ್ದಾರೆ. ಪ್ರೇಕ್ಷಕರು ಇಲ್ಲಿ ದರ್ಶನ್ ಅವರನ್ನು ವಿಭಿನ್ನ ಪಾತ್ರದಲ್ಲಿ ನೋಡಬಹುದು. ದರ್ಶನ್ ಅವರಿಗೇ ಇದೊಂದು ವಿಶಿಷ್ಟ ಸಿನಿಮಾ ಆಗಲಿದೆ’. ಹೀಗೆ ಹೇಳಿದ್ದು ಮಿಲನ ಪ್ರಕಾಶ್.
26
ಡಿ.11ರಂದು ಡೆವಿಲ್ ಬಿಡುಗಡೆ
ಅವರು ನಿರ್ದೇಶಿಸಿರುವ ‘ಡೆವಿಲ್’ ಸಿನಿಮಾ ಡಿ.11ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಅದಕ್ಕಾಗಿ ಅಂತಿಮ ಹಂತದ ತಯಾರಿಯಲ್ಲಿದೆ. ಈ ಕುರಿತು ಮಾಹಿತಿ ನೀಡುವ ಪ್ರಕಾಶ್, ಇದೊಂದು ಮಾಸ್ ಎಂಟರ್‌ಟೇನರ್. ಅದ್ದೂರಿ ತಾರಾಗಣವಿದೆ.
36
ಪ್ರಮುಖ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್
ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಶೂಟಿಂಗ್ ಇದ್ದಾಗ ದರ್ಶನ್ ಅವರು ಬೆನ್ನು ನೋವಿದ್ದರೂ ಸತತ 24 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡು ತುಂಬಾ ಸಹಕಾರ ನೀಡಿದ್ದಾರೆ. ಅದ್ದೂರಿ ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡಿದ್ದೇವೆ.
ಆಕರ್ಷಕ ಸೆಟ್‌ಗಳನ್ನು ಹಾಕಿದ್ದೇವೆ. ದರ್ಶನ್ ಅವರು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಮುಂದಿನ ವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ.
56
ದೊಡ್ಡ ಬಜೆಟ್‌ನ ಸಿನಿಮಾ
ಚಿತ್ರತಂಡ ಭರದ ಪ್ರಚಾರಕ್ಕೆ ಸಿದ್ಧವಾಗಿದೆ. ಈ ದೊಡ್ಡ ಬಜೆಟ್‌ನ ಸಿನಿಮಾಗೆ ಚಿತ್ರಮಂದಿರಗಳು ಕಾಯುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ವಿಶೇಷವಾಗಿ ದರ್ಶನ್ ಅವರು ಪತ್ರಿಕೆಗಳನ್ನು ಗಮನಿಸುತ್ತಿದ್ದು, ಡೆವಿಲ್ ಬಿಡುಗಡೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.
66
ನಾಯಕಿಯಾಗಿ ರಚನಾ ರೈ
ಹೊಸ ಗೆಟಪ್‌ನಲ್ಲಿ ಇರುವುದರಿಂದ ಈ ಗೆಟಪ್ ಅನ್ನು ಜನ ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಚನಾ ರೈ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಹುಲಿ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ಅಭಿಯಿಸಿದ್ದಾರೆ. ಉಳಿದ ತಾರಾಗಣ ಇನ್ನಷ್ಟೇ ಘೋಷಣೆಯಾಗಬೇಕಿದೆ.