Meghana Raj ಮದುವೆ ಆಗೋನು ರಾಯನ್‌ನ ಮಗ ಅಂತ ನೋಡ್ತಾನಾ? 2ನೇ ಮದುವೆ ಬಗ್ಗೆ‌ ತಂದೆ ಸುಂದರ್‌ ರಾಜ್ ಏನಂದ್ರು?

Published : Nov 27, 2025, 01:44 PM IST

Actress Meghana Raj: ಮೇಘನಾ ರಾಜ್‌ ಅವರು ಚಿರಂಜೀವಿ ಸರ್ಜಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಚಿರು ನಿಧನದ ಬಳಿಕ ಮೇಘನಾ ಅವರು ಎರಡನೇ ಮದುವೆ ಆಗ್ತಾರಾ ಎನ್ನುವ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ತಂದೆ ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. 

PREV
16
ಮಗನಿಗೋಸ್ಕರ ಗಟ್ಟಿ ನಿಂತರು

ಮೇಘನಾ ರಾಜ್‌ ಮದುವೆಯಾಗಿ ಎರಡು ವರ್ಷಕ್ಕೆ ಚಿರಂಜೀವಿ ಅವರು ಹೃದಯಾಘಾತದಿಂದ ನಿಧನರಾದರು. ಆ ವೇಳೆ ಮೇಘನಾ ಹೊಟ್ಟೆಯಲ್ಲಿ ಮಗು ಇತ್ತು. ಒಂದು ಕಡೆ ಪ್ರೀತಿಸಿ ಮದುವೆಯಾದ ಪತಿ ಇನ್ನಿಲ್ಲ, ಇನ್ನೊಂದು ಕಡೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು. ನಾಳೆ ಅಪ್ಪ ಎಲ್ಲಿ ಎಂದು ಕೇಳಿದಾಗ ಆ ಪುಟ್ಟ ಮಗುವಿಗೆ ವಾಸ್ತವ ಅರ್ಥ ಮಾಡಿಸಬೇಕಾದ ಪರಿಸ್ಥಿತಿ. ಮೇಘನಾಗೆ ಇದೆಲ್ಲವೂ ಸುಲಭ ಆಗಿರಲಿಲ್ಲ, ಆದರೆ ಇದನ್ನು ಅವರು ಚೆನ್ನಾಗಿ ಬ್ಯಾಲೆನ್ಸ್‌ ಮಾಡಿ, ಮಗನಿಗೋಸ್ಕರ ಗಟ್ಟಿಯಾಗಿ ನಿಂತರು.

26
ಮಗಳು ಒಂಟಿಯಾಗಬಾರದು ಎನ್ನೋದಿದೆ

ಮೇಘನಾ ತಾಯಿ ಪ್ರಮೀಳಾ ಜೋಶಾಯ್‌ ಕೂಡ, ಮಗಳು ಒಬ್ಬಂಟಿಯಾಗ್ತಾಳೆ, ಅವಳಿಗೆ ಗಂಡ ಬೇಕು, ಮದುವೆ ಆಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ನಾವು ತಂದೆ-ತಾಯಿ, ನಮಗೂ ವಯಸ್ಸಾಗುತ್ತದೆ, ಮಗಳ ಜೊತೆ ಸಂಗಾತಿ ಇರಬೇಕು ಎಂದು ಅವರು ಬಯಸೋದು ಅಕ್ಷರಶಃ ಸಹಜ, ಅದರ ಅಗತ್ಯತೆಯೂ ಇದೆ.

36
ಎರಡನೇ ಮದುವೆ ಬಗ್ಗೆ ಮೇಘನಾ ರಾಜ್‌ ಏನಂದ್ರು?

ಮೇಘನಾ ರಾಜ್‌ ಕೂಡ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ನನ್ನ ಮಗನಿಗೆ ಅಪ್ಪ ಇದ್ದಾನೆ, ಚಿರಂಜೀವಿ ಮನಸ್ಸು ಮಾಡಿದಾಗ, ಅವರು ಬಯಸಿದಾಗ ನಾನು ಮದುವೆ ಆಗ್ತೀನಿ. ನನ್ನ ಎರಡನೇ ಮದುವೆ ಆಗೋ ನಿರ್ಧಾರ ಚಿರು ಕೈಯಲ್ಲಿದೆ” ಎಂದು ಹೇಳಿದ್ದರು.

46
ಮೇಘನಾಗೆ ಅಷ್ಟು ವಯಸ್ಸಾಗಿಲ್ಲ

ಮಗಳ ಎರಡನೇ ಮದುವೆ ಪ್ರಶ್ನೆ ಬಂದಾಗ ಸುಂದರ್‌ ರಾಜ್‌ ಅವರು, “ಮೈನಸ್‌ ಇದ್ದಾಗ, ಪ್ಲಸ್‌ ಮಾಡಿಕೊಳ್ಳಿ ಎಂದು ನಾನು ಹೇಳುತ್ತೇನೆ. ಮೇಘನಾ ರಾಜ್‌ಗೆ ಮದುವೆಯಾಗಿ ಎರಡು ವರ್ಷಕ್ಕೆ ಚಿರಂಜೀವಿ ಸರ್ಜಾ ತೀರಿಕೊಂಡಿದ್ದಾನೆ. ಮೇಘನಾಗೆ ಅಷ್ಟು ವಯಸ್ಸಾಗಿಲ್ಲ. ಅವಳ ವಯಸ್ಸಿನವರು ಇನ್ನೂ ಮದುವೆಯೇ ಆಗಿಲ್ಲ. ಹೀಗಾಗಿ ಅವಳಿಗೆ ಅಷ್ಟು ವಯಸ್ಸು ಕೂಡ ಆಗಿಲ್ಲ” ಎಂದು ಸುಂದರ್‌ ರಾಜ್‌ ಹೇಳಿದ್ದಾರೆ.

56
ರಾಯನ್‌ನನ್ನು ಮಗ ಅಂತ ನೋಡ್ತಾನಾ?

“ಮದುವೆ ಎನ್ನೋದು ಪವಿತ್ರ ಸಂಬಂಧ. ಮೇಘನಾ ಒಂಟಿಯಾಗಿದ್ದರೆ ಎರಡನೇ ಮದುವೆ ಅಷ್ಟು ಕಾಂಪ್ಲಿಕೇಟ್‌ ಎನಿಸುತ್ತಿರಲಿಲ್ಲ.ಈಗ ಮೇಘನಾಗೆ ಮಗ ಇದ್ದಾನೆ. ಇನ್ನೊಂದು ಮದುವೆಯಾದವನು ರಾಯನ್‌ನನ್ನು ಮಗ ಎಂದು ನೋಡುತ್ತಾನಾ ಎನ್ನುವ ಪ್ರಶ್ನೆ ಬರುತ್ತದೆ. ನನಗೆ ರಾಯನ್‌ ಮೊಮ್ಮಗ, ಆ ಭಾವನೆ ಬೇರೆ ಇರುತ್ತದೆ” ಎಂದಿದ್ದಾರೆ.

66
ಮದುವೆಯಾದವನು ಇನ್ನೊಂದು ಮಗು ಬಯಸಿದರೆ?

“ಮೇಘನಾ ಮದುವೆಯಾದವನು ಇನ್ನೊಂದು ಮಗು ಬಯುಸುತ್ತಾನೆ, ಆಗ ಗಂಡು ಮಗ ಆದರೆ ಹೇಗೆ? ಹೆಣ್ಣಾದರೆ ಹೇಗೆ ನೋಡಬಹುದು? ಎನ್ನುವ ಪ್ರಶ್ನೆ ಬರುತ್ತದೆ. ಇದೆಲ್ಲವೂ ತಿಳಿದುಕೊಂಡಷ್ಟು ಸುಲಭ ಇಲ್ಲ. ಇದನ್ನು ನಾನು ಮೇಘನಾಗೆ ಬಿಡುತ್ತೇನೆ, ಇದು ಅವಳ ನಿರ್ಧಾರ” ಎಂದಿದ್ದಾರೆ.

Read more Photos on
click me!

Recommended Stories