ಫೆ.10ಕ್ಕೆ For Registration ತೆರೆಗೆ: ಮಿಲನಾ - ಪೃಥ್ವಿ ಕಾಂಬಿನೇಷನ್ ಸಿನಿಮಾವಿದು!

Published : Nov 03, 2022, 09:56 AM IST

ಸಂಬಂಧಗಳನ್ನು ನೋಂದಣಿ ಮಾಡಿಸುವ ಕತೆ. ದಿಯಾ ಪೃಥ್ವಿ ಆಂಡ್ ಲವ್ ಮಾಕ್ಟೇಲ್ ನಿಧಿಮಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು...  

PREV
18
ಫೆ.10ಕ್ಕೆ For Registration ತೆರೆಗೆ: ಮಿಲನಾ - ಪೃಥ್ವಿ ಕಾಂಬಿನೇಷನ್ ಸಿನಿಮಾವಿದು!

 ಪೃಥ್ವಿ ಅಂಬಾರ್‌ ಹಾಗೂ ಮಿಲನ ನಾಗರಾಜ್‌ ನಟನೆಯ ‘ಫಾರ್‌ ರಿಜಿಸ್ಪ್ರೇಷನ್‌’ ಸಿನಿಮಾ ಮುಂದಿನ ವರ್ಷ ಫೆ.10ಕ್ಕೆ ತೆರೆ ಮೇಲೆ ಮೂಡಲಿದೆ. ಸಿನಿಮಾ ಬಿಡುಗಡೆ ದಿನಾಂಕ ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. 

28

 ನವೀನ್‌ ದ್ವಾರಕನಾಥ್‌ ನಿರ್ದೇಶನ, ಎನ್‌ ನವೀನ್‌ ರಾವ್‌ ನಿರ್ಮಾಣದ ಸಿನಿಮಾ ಇದಾಗಿದೆ. ಸಿನಿಮಾ ಬಿಡುಗಡೆ ದಿನಾಂಕದ ಜತೆಗೆ ಚಿತ್ರದ ಮೆಲೋಡಿ ಹಾಡಿನ ದೃಶ್ಯಗಳ ಪ್ರದರ್ಶನ ಕೂಡ ಮಾಡಲಾಯಿತು. 

38

‘ನಮ್ಮದು ಎಂಬುದು ರಿಜಿಸ್ಪ್ರೇಷನ್‌ ಮಾಡಿಕೊಳ್ಳುತ್ತೇವೆ. ಅಂದರೆ ನಮ್ಮ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳುತ್ತೇವೆ. ಕಾರು, ಆಸ್ತಿ, ಮನೆ ಹೀಗೆ ಎಲ್ಲವನ್ನು ನಮ್ಮ ಹೆಸರುಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವ ಹಂತದಲ್ಲಿ, ಸಂಬಂಧಗಳನ್ನೂ ನೋಂದಣಿ ಮಾಡಿಸಿಕೊಂಡರೆ ಹೇಗೆ ಮತ್ತು ಯಾವ ರೀತಿ ನೋಂದಣಿ ಮಾಡಲಾಗುತ್ತದೆ. 

48

ಅದರಿಂದ ಮುಂದೇನು ಎಂಬುದನ್ನು ಹೇಳುವ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದು ಚಿತ್ರದ ಕುರಿತು ನಿರ್ದೇಶಕರು ಹೇಳಿಕೊಂಡರು.

58

 ರವಿಶಂಕರ್‌, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲಾ ನಾಣಿ, ರಮೇಶ್‌ ಭಟ್‌, ಸಿಹಿ ಕಹಿ ಚಂದ್ರು, ಅರವಿಂದ ಬೋಳಾರ್‌ ಮುಂತಾದವರು ಚಿತ್ರದಲ್ಲಿ ಅಭಿನಯಸಿದ್ದಾರೆ.

68

‘ನಾನು ಈ ಕತೆಯನ್ನು ಕೇಳಿದ್ದು, ಚಿತ್ರದ ಟೈಟಲ್‌ಗಾಗಿ. ಕುತೂಹಲಕಾರಿ ಕತೆಯನ್ನು ಕೇಳಿದ ಅನುಬವ ಆಯಿತು. ಕತೆ ಇಷ್ಟವಾಗಿ ಸಿನಿಮಾ ಒಪ್ಪಿಕೊಂಡೆ’ಎಂದರು ಮಿಲನ ನಾಗರಾಜ್‌. ಇನ್ನೂ ಚಿತ್ರದ ನಾಯಕಿ ಪೃಥ್ವಿ ಅಂಬಾರ್‌ ಅವರು ಮಿಲನಾ ಅವರ ಜತೆಗೆ ನಟಿಸುವ ತುಂಬಾ ನರವಸ್‌ ಆಗಿದ್ದರಂತೆ.

78

‘ಮಿಲನಾ ಅವರು ಪ್ರತಿಭಾವಂತ ನಟಿ. ಅವರ ಜತೆಗೆ ನಟಿಸುವುದು ಹೇಗೆಂದು ಭಯ ಆಗಿತ್ತು. ಆ ಮೇಲೆ ಎಲ್ಲವೂ ಸರಿ ಹೋಯಿತು. ಇಬ್ಬರ ಪಾತ್ರಗಳು ತೆರೆ ಮೇಲೆ ತುಂಬಾ ಚೆನ್ನಾಗಿ ಮೂಡಿ ಬಂದಿವೆ’ ಎಂದು ಪೃಥ್ವಿ ಅಂಬಾರ್‌ ಹೇಳಿಕೊಂಡರು. 

88

ಆರ್‌ ಕೆ ಹರೀಶ್‌ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಜಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಹಾಡುಗಳನ್ನು ಕೇಳಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories