ಅಪ್ಪುಗೆ ಕರ್ನಾಟಕ ರತ್ನ; ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಅದ್ದೂರಿ ಸ್ವಾಗತ

Published : Nov 01, 2022, 01:45 PM IST

ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದ  ರಜನಿಕಾಂತ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ.   

PREV
17
ಅಪ್ಪುಗೆ ಕರ್ನಾಟಕ ರತ್ನ; ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಅದ್ದೂರಿ ಸ್ವಾಗತ

ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇಂದು (ನವೆಂಬರ್ 1) ಸಂಜೆ 4 ಗಂಟೆಗೆ ವಿಧಾನ ಸೌಧದ ಮುಂಭಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ  ಸಮಾರಂಭ  ನಡೆಯುತ್ತಿದೆ.

27

ಈ ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಹಾಜರಿರುತ್ತಾರೆ. ರಾಜಕೀಯ ಮತ್ತು ಸಿನಿಮಾ ಗಣ್ಯರು ಅಪ್ಪುಗೆ ಕರ್ನಾಟಕ ರತ್ನ ಪ್ರದಾನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ವಿಶೇಷ ಎಂದರೆ ಈ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ವಿಶೇಷ ಅತಿಥಿಗಲಾಗಿದ್ದಾರೆ. 

37

ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. 

47

ತಲೈವಾರನ್ನು ಆರೋಗ್ಯ ಸಚಿವ ಸುಧಾಕರ್, ಮುನಿರತ್ನ ಸೇರಿದಂತೆ ಅನೇಕರು ಅದ್ದೂರಿಯಾಗಿ ಬರಮಾಡಿಕೊಂಡರು. ಹೂ ಗುಚ್ಛ ನೀಡಿ ಸ್ವಾಗತಿಸಿದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

57

ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಸ್ವೀಕರಿಸಲಿದ್ದಾರೆ. ಈ ಸಮಯದಲ್ಲಿ ಇಡೀ ರಾಜ್ ಕುಟುಂಬ ಹಾಜರಿರಲಿದೆ. 

67

ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಬಳಿಕ 5.30ರಿಂದ 6.30ರವರೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.

77

ಇಂದು ಸಂಜೆ 4 ಗಂಟೆಗೆ ತೆಲುಗು ಸ್ಟಾರ್ ಜೂ ಎನ್ ಟಿ ಆರ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರಜನಿಕಾಂತ್, ಜೂ.ಎನ್‌ಟಿಆರ್ ಮತ್ತು ಸುಧಾ ಮೂರ್ತಿ ಈ ವಿಶೇಷ ಕ್ಷಣಕ್ಕೆ ವಿಶೇಷ ಅತಿಥಿಗಳಾಗಿ ಸಾಕ್ಷಿಯಾಗುತ್ತಿದ್ದಾರೆ. 
 

Read more Photos on
click me!

Recommended Stories