ರಶ್ಮಿಕಾಗೆ ಮಾತ್ರವಲ್ಲ, ಸುಧಾರಾಣಿಗೂ ಇನ್ಸ್ಟಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋಯರ್ಸ್!

Published : Nov 01, 2022, 01:19 PM IST

12ನೇ ವಯಸ್ಸಿಗೆ ಬಣ್ಣ ಹಚ್ಚಿದ ನಟಿ ಸುಧಾರಾಣಿ. ಮಿಲಿಯನ್ ಫಾಲೋರ್ಸ್‌ಗೆ ಗ್ರೇಟ್ ಎಂದ ನೆಟ್ಟಿಗರು....

PREV
110
ರಶ್ಮಿಕಾಗೆ ಮಾತ್ರವಲ್ಲ, ಸುಧಾರಾಣಿಗೂ ಇನ್ಸ್ಟಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋಯರ್ಸ್!

 ಮೂರನೇ ವಯಸ್ಸಿಗೆ ಮಾಡಲಿಂಗ್ ಶುರು ಮಾಡಿದ ಸುಧಾರಾಣಿ, 5 ವರ್ಷ ಇದ್ದಾಗಲೇ ನೃತ್ಯಕ್ಕೆ ಸೇರಿಕೊಳ್ಳುತ್ತಾರೆ. 7 ವರ್ಷವಿದ್ದಾಗ ಮೊದಲ ಶಾರ್ಟ್‌ ಫಿಲ್ಮಂ ಚಿತ್ರೀಕರಣ ಮಾಡಿದ್ದರು.

210

ಡಾ.ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಮೂಲಕ ಆನಂದ್ ಚಿತ್ರಕ್ಕೆ ನಾಯಕಿಯಾಗಿ ಕಾಲಿಟ್ಟರು. 12ನೇ ವಯಸ್ಸಿಗೆ ನಾಯಕಿಯಾಗಿ ಸೂಪರ್ ಹಿಟ್‌ ಸಿನಿಮಾಗಳನ್ನು ಕೊಟ್ಟರು. 

310

ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸುಧಾರಾಣಿ ಇನ್‌ಸ್ಟಾಗ್ರಾಂನಲ್ಲಿ 2.2 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

410

ತಮ್ಮದೇ ವಿಭಿನ್ನ ಪೋಸ್ಟ್‌ಗಳ ಮೂಲಕ ವೀಕ್ಷಕರನ್ನು ಎಂಗೇಜ್ ಆಗಿಟ್ಟುಕೊಂಡಿದ್ದಾರೆ. ಸಿನಿಮಾ,ಫ್ಯಾಮಿಲಿ, ಅಡುಗೆ, ನಾಯಿಗಳು ಮತ್ತು ಫ್ಯಾಷನ್‌ ಬಗ್ಗೆ ಹೆಚ್ಚಾಗಿ ಪೋಸ್ಟ್‌ ಮಾಡುತ್ತಾರೆ.

510

ಹಾಟ್ ಹಾಟ್ ಫೋಟೋ ಹಾಕೋದು, ಹಣ ಮಾಡಬೇಕೆಂದು ಯಾವ್ ಯಾವ್ದೋ ಜಾಹೀತಾರುಗಳನ್ನು ಒಪ್ಪಿಕೊಳ್ಳುವ ಜನರ ನಡುವೆ ಮನೆ ಮಗಳಂತೆ ಇದ್ದು 2.2 ಮಿಲಿಯನ್ ಸಂಪಾನ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

610

ಪಂಚಮ ವೇದ ಮತ್ತು ಮೈಸೂರು ಮಲ್ಲಿಗೆ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಸ್ಪರ್ಶ -ಮೈಸೂರು ಮಲ್ಲಿಗೆ ಮತ್ತು ವಾಸ್ತು ಪ್ರಕಾರ ಚಿತ್ರಕ್ಕೆ ಫಿಲ್ಮಂ ಫೇರ್ ಸೌತ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

710

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವುದು. 

810

ಅವತಾರ ಪುರುಷ, ಯುವರತ್ನ, ಮಾಯಾಬಜಾರ್, ಪಡ್ಡೆ ಹುಲಿ, ಕನ್ನಡ ಗೊತ್ತಿಲ್ಲ, ಅಮರ್, ಪ್ರೀಮಿಯರ್ ಪದ್ಮಿನಿ, ಭರ್ಜರಿ, ವಿಸ್ಮಯ, ಹ್ಯಾಪಿ ನ್ಯೂ ಇಯರ್, ಲವ್ ಯು ಅಲಿಯಾ, ವಾಸ್ತು ಪ್ರಕಾರ ಸೇರಿದಂತೆ ಹಲವು ಇತ್ತೀಚಿನ ಸಿಮಾಗಳು ವೈರಲ್ ಆಗಿತ್ತು.

910

ಕೆಜಿಎಫ್ ಚಾಪ್ಟರ್ 2, ಮಾಣಿಕ್ಯಾ, ಪ್ರಸಾದ್, ಮೋನಾಲಿಸಾ, ಮೌರ್ಯ, ಸಿಂಹಾದ್ರಿಯ ಸಿಂಹ, ಪ್ರೇಮೋತ್ಸವ ಚಿತ್ರಗಳಿಗೆ ವಾಯ್ಸ್‌ ನೀಡಿದ್ದಾರೆ. 

1010

90ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಈಗ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಂಖ್ಯೆ ಬಹಳ ಕಡಿಮೆ. ಸುಧಾರಾಣಿ ಬೇಗ ಕನ್ನಡಿಗರಿಗೆ ನೆಕ್ಟ್‌ ಆಗುತ್ತಾರೆ ಹೀಗಾಗಿ ಮುಂಬರುವ ದಿನಗಳಲ್ಲಿ ಫಾಲೋವರ್ಸ್‌ ಹೆಚ್ಚಾದರೂ ಆಗಬಹುದು. 

Read more Photos on
click me!

Recommended Stories