ಹಸಿರು ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ ತುಂಬು ಗರ್ಭಿಣಿ ಮಿಲನಾ ನಾಗರಾಜ್

Published : Jul 28, 2024, 11:22 AM IST

ಇದೇ ಸೆಪ್ಟೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಲಿರುವ ತುಂಬು ಗರ್ಭಿಣಿ ನಟಿ ಮಿಲನಾ ನಾಗರಾಜ್ ಇದೀಗ ತಮ್ಮ ಪತಿ ಕೃಷ್ಣನೊಂದಿಗೆ ಮುದ್ದಾದ ಫೋಟೋ ಶೂಟ್ ಮಾಡಿದ್ದಾರೆ.   

PREV
17
ಹಸಿರು ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ ತುಂಬು ಗರ್ಭಿಣಿ ಮಿಲನಾ ನಾಗರಾಜ್

ಸ್ಯಾಂಡಲ್ ವುಡ್ ನ ಸೆಲೆಬ್ರಿಟಿ ಜೋಡಿಗಳಾದ ಮಿಲನಾ ನಾಗರಾಜ್ (Milana Nagaraj) ಮತ್ತು ಡಾರ್ಲಿಂಗ್ ಕೃಷ್ಣ ಈ ವರ್ಷದ ಆರಂಭದಲ್ಲಿ ತಾವು ಪೋಷಕರಾಗುತ್ತಿರುವ ಬಗ್ಗೆ ಸಂಭ್ರಮದ ಮಾಹಿತಿ ಹಂಚಿಕೊಂಡಿದ್ದರು. ಇದೇ ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿ ಪೋಷಕರಾಗಲಿದ್ದಾರೆ. 

27

ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ಈ ಮುದ್ದಾದ ಜೋಡಿ ತಮ್ಮ ಪ್ರೆಗ್ನೆನ್ಸಿ ಫೋಟೋ ಶೂಟ್ (Pregnancy photoshoot) ಮಾಡಿಸಿಕೊಂಡಿದ್ದು, ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ಜೋಡಿಯ ಮುದ್ದಾದ ಫೋಟೋ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. 
 

37

ಮಿಲನಾ ತಿಳಿ ಹಸಿರು ಬಣ್ಣದ ರೇಷ್ಮೆ ಸೀರೆ ಧರಿಸಿ, ಅದಕ್ಕೊಪ್ಪುವ ಡೈಮಂಟ್ ಇಯರಿಂಗ್ಸ್ ಮತ್ತು ನೆಕ್ ಪೀಸ್ ಧರಿಸಿ ತಮ್ಮ ಬೇಬಿ ಬಂಪ್ ಮೇಲೆ ಕೈ ಇಟ್ಟು ಫೋಟೋಗಳಿಗೆ ಪೋಸ್ ಕೊಟ್ಟರೆ, ಕೃಷ್ಣ (Darling Krishna) ಹೆಂಡತಿಗೆ ಸಾತ್ ನೀಡಿ ಡಾರ್ಕ್ ಗ್ರೀನ್ ಶರ್ಟ್ ಮತ್ತು ಕಪ್ಪು ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

47

ಇಬ್ಬರು ಜೋಡಿ ನೋಡಿ ಅಭಿಮಾನಿಗಳು ಹುಷಾರಾಗಿರಿ ಮೇಡಂ, ನಿಧಿಮಾ ಮುದ್ದಾಗಿ ಕಾಣಿಸುತ್ತಿದ್ದೀರಿ, ನಿಮ್ಮನ್ನ ನೋಡಿದ್ರೆ ನಮ್ಮ ಕನ್ನಡದ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಅನಿಸುತ್ತೆ, ಎಲ್ಲಾ ಒಳ್ಳೆಯದು ಆಗಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ, ಏಂಜಲ್ ತರ ಕಾಣಿಸ್ತಿದ್ದಿರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಜನ. 
 

57

ಅಷ್ಟೇ ಅಲ್ಲ ನಿಮ್ಮ ಜೋಡಿ ತುಂಬಾನೆ ಸುಂದರವಾಗಿದೆ, ನೂರು ವರ್ಷ ಕಾಲ ಸುಖವಾಗಿ ನೆಮ್ಮದಿಯಿಂದ ಬಾಳಿ , ಸೂಪರ್ ಜೋಡಿ, ನಿಮ್ಮ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಮತ್ತು ಬೇಬಿ ಬಂಪ್ ತುಂಬಾನೆ ಮುದ್ದಾಗಿ ಕಾಣಿಸ್ತಿದೆ,  ಪೋಷಕರಾಗಿ ಭಡ್ತಿ ಪಡೆಯಲಿರುವ ಜೋಡಿಗೆ ಅಭಿನಂದನೆ ಎಂದು ವಿಶ್ ಕೂಡ ಮಾಡಿದ್ದಾರೆ ಜನ. 
 

67

ಮಿಲನಾ ಮತ್ತು ಕೃಷ್ಣ ಇಬ್ಬರು ಪ್ರೀತಿಸಿ ಮದುವೆಯಾದ ಜೋಡಿ. ಲವ್ ಮಾಕ್ಟೇಲ್ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಈ ಜೋಡಿ ಹಸಿಮಣೆ ಏರಿದ್ದರು. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಈ ಜೋಡಿ ಒಂದಾಗಿರಲಿಲ್ಲ, ಆದ್ರೆ ನಿಜ ಜೀವನದಲ್ಲಿ ಇವರು ಒಂದಾಗಿರೋದು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. 
 

77

ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಮಿಲನಾ ಕೊನೆಯದಾಗಿ ಫಾರ್ ರಿಜಿಸ್ಟ್ರೇಶನ್ ನಲ್ಲಿ ನಟಿಸಿದ್ದರು, ಇವರು ನಟಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಸದ್ಯಕ್ಕಂತೂ ನಟಿ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ, ತಮ್ಮ ಮಗುವಿನ ಆರೈಕೆಗೆ ಸಮಯ ಮೀಸಲಿಡಲಿದ್ದಾರೆ ನಟಿ. 
 

Read more Photos on
click me!

Recommended Stories