ಆರಾಧನಾ ರಾಮ್ ಗ್ಲಾಮರಸ್ ಲುಕ್ ವೈರಲ್… ಫೋಟೋ ನೋಡಿ ಕಿಡಿ ಕಾರಿದ ದರ್ಶನ್ ಅಭಿಮಾನಿಗಳು

First Published | Jul 27, 2024, 2:07 PM IST

ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಇತ್ತೀಚಿನ ದಿನಗಳಲ್ಲಿ ಸಖತ್ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. 
 

ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರಾಧನಾ ರಾಮ್ (Aradhana Ram) ಮೊದಲ ಚಿತ್ರದಲ್ಲೇ ಅಭಿಮಾನಿಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 

ಚಂದನವನದ ಕನಸಿನರಾಣಿ ಮಾಲಾಶ್ರೀ (Malashree) ಮತ್ತು ರಾಮು ಅವರ ಮಗಳಾದ ಆರಾಧನಾ ಮೊದಲ ಸಿನಿಮಾ ಮೂಲಕವೇ ಭರವಸೆ ಹುಟ್ಟಿಸಿದ್ದರು. ಇದೀಗ ಕಾಟೇರ ಬಳಿಕ ಫೋಟೋ ಶೂಟ್ ನಲ್ಲೆ ಬ್ಯುಸಿಯಾಗಿದ್ದಾರೆ ನಟಿ. 
 

Tap to resize

ಹೌದು ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಆರಾಧನಾ ರಾಮ್ ಇತ್ತೀಚಿನ ದಿನಗಳಲ್ಲಿ ತಮ್ಮ ಫೋಟೋ ಶೂಟ್ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಇವರ ಗ್ಲಾಮರಸ್ ಲುಕ್ ಸಖತ್ ವೈರಲ್ ಆಗುತ್ತಿದೆ. 
 

ಕಳೆದ ಕೆಲವು ದಿನಗಳಿಂದ ಸಖತ್ ಬೋಲ್ಡ್ (bold photoshoot)ಆಗಿರುವ ಫೋಟೋಗಳನ್ನೇ ಆರಾಧನಾ ಶೇರ್ ಮಾಡುತ್ತಿದ್ದು, ಒಂದರಲ್ಲಿ ಶಾರ್ಟ್ ಮಿನಿ ಸ್ಕರ್ಟ್ ಮತ್ತು ಟ್ಯೂಬ್ ಟಾಪ್ ಧರಿಸಿ ಬೇರೆ ಬೇರೆ ಪೋಸ್ ಕೊಟ್ಟಿದ್ರೆ, ಇನ್ನೊಂದರಲ್ಲಿ ಜೀನ್ಸ್ ಮತ್ತು ಲೆಪರ್ಡ್ ಪ್ರಿಂಟ್ ಕ್ರಾಪ್ ಟಾಪ್ ಧರಿಸಿ ಕಾರಿನ ಮುಂದೆ ಪೋಸ್ ನೀಡಿದ್ದಾರೆ. 
 

ಆರಾಧನಾ ಫೋಟೋ ನೋಡಿದ ಅಭಿಮಾನಿಗಳು, ಗ್ಲಾಮರಸ್, ಸುಂದರಿ, ಮಾಡರ್ನ್ ಡ್ರೆಸ್ ನಲ್ಲಿ ನೀವು ಚೆನ್ನಾಗಿ ಕಾಣಿಸ್ತೀರಿ ಎಂದಿದ್ದಾರೆ. ಮತ್ತೊಬ್ಬರು ನೀವೇನಾ ಕಾಟೇರ ಸಿನಿಮಾದಲ್ಲಿ ನಟಿಸಿದ್ದು ಎಂದು ಸಹ ಕಾಮೆಂಟ್ ಮಾಡಿ ಕೇಳಿದ್ದಾರೆ. 
 

ಇನ್ನು ದರ್ಶನ್ ಅಭಿಮಾನಿಗಳು ಮಾತ್ರ ಆರಾಧನಾ ವಿರುದ್ಧ ಕಿಡಿ ಕಾರಿದ್ದು, ದರ್ಶನ್ ಜೈಲು ಸೇರಿರುವ ಬಗ್ಗೆ ಕಾಮೆಂಟ್ ಮಾಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಳೆಸಿದವರ ಮರೆತು ಬಿಟ್ಟಿದ್ದಾರೆ, ಇನ್ನೂ ನೀವು ಉದ್ಧಾರ ಆಗಲ್ಲ ಎಂದು ಕಿಡಿ ಕಾರಿದ್ದಾರೆ. 
 

ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದರು. ಚಂದನವನದಲ್ಲಿ ಮಿಂಚಿದ ಮಾಲಾಶ್ರೀ ಅವರ ಪುತ್ರಿ ಅಂದದಲ್ಲಿ ಅಮ್ಮನಿಗಿಂತಲೂ ಸೌಂದರ್ಯವತಿ. ಸಖತ್ ಮಾಡರ್ನ್ ಆಗಿರುವ ಆರಾಧನಾ, ಮತ್ತಷ್ಟು ಸಿನಿಮಾಗಳಲ್ಲಿ ಮಿಂಚಬೇಕು ಅನ್ನೋದು ಅಭಿಮಾನಿಗಳ ಆಗ್ರಹ. 
 

Latest Videos

click me!