Gramayana ಚಿತ್ರದ ‘ಏನೇ ಹೇಳು ಕುಸುಮ’ ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್‌ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಸಿನಿಮಾ ಆಯ್ಕೆ ವೇಳೆ ಯಾವತ್ತೂ ನನ್ನ ಗಮನ ಕಥೆಯ ಮೇಲಿರುತ್ತದೆ. ಗ್ಲಾಮರ್‌ಗಿಂತ ನನಗೆ ಕಥೆ ಮುಖ್ಯವಾಗುತ್ತದೆ. ಇದು ನಟಿ ಮೇಘಾ ಶೆಟ್ಟಿ ಮಾತು.
25
ಜುಲೈ 3ರಂದು ತೆರೆಗೆ
ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರ ಜುಲೈ 3ರಂದು ತೆರೆಗೆ ಬರುತ್ತಿದೆ. ಈ ಚಿತ್ರ ‘ಏನೇ ಹೇಳು ಕುಸುಮ’ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
35
ಬಹಳ ಕನೆಕ್ಟ್ ಆಯ್ತು
‘ನನ್ನ ಅಕ್ಕನ ಹೆಸರು ಕುಸುಮಾ. ಅವಳ ಹೆಸರಿನಲ್ಲೇ ಈ ಚಿತ್ರದ ಹಾಡಿದೆ. ಹೀಗಾಗಿ ನನಗೆ ಬಹಳ ಕನೆಕ್ಟ್ ಆಯ್ತು. ಒಂದೇ ದಿನದಲ್ಲಿ ಈ ಹಾಡಿನ ಶೂಟಿಂಗ್ ನಡೆದಿತ್ತು’ ಎಂದೂ ಮೇಘಾ ಶೆಟ್ಟಿ ಹೇಳಿದರು.
ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ತಿಳಿಸಿದರು.
55
ದೇವನೂರು ಚಂದ್ರ ನಿರ್ದೇಶನ
ವಿನಯ್ ರಾಜ್‌ಕುಮಾರ್ ಈ ಚಿತ್ರದ ನಾಯಕ. ಇದು ನಾನು ನಾಯಕನಾಗಿ ನಟಿಸಿರುವ 9ನೇ ಚಿತ್ರ ಎಂದರು. ದೇವನೂರು ಚಂದ್ರ ನಿರ್ದೇಶನವಿದೆ. ಲಹರಿ ಸಂಸ್ಥೆ ಚಿತ್ರ ನಿರ್ಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.