ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು ಸೆನ್ಸೇಶನ್ ಮೂಡಿಸಿದ ಚೆಲುವೆ ಮೇಘಾ ಶೆಟ್ಟಿ.
ಸದ್ಯ ಮೇಘಾ ಶೆಟ್ಟಿ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ನಾಲ್ಕು ಸಿನಿಮಾಗಳಲ್ಲಿ ಮೇಘಾ ನಟಿಸುತ್ತಿದ್ದು, ಯಾವ ಸಿನಿಮಾಗಳು ಸಹ ಸದ್ಯ ಬಿಡುಗಡೆ ಕಾಣುತ್ತಿಲ್ಲ.
ಇದೀಗ ದೀಪಾವಳಿಯ ಸಂಭ್ರಮದಲ್ಲಿರುವ ಮೇಘಾ ಶೆಟ್ಟಿ ತಮ್ಮ ಮನೆ ಮಂದಿಯೊಂದಿಗೆ ಅದ್ಧೂರಿಯಾಗಿ ದೀಪಾವಳಿ ಪೂಜೆ ಮಾಡಿ ಸಂಭ್ರಮಿಸಿದಾರೆ.
ಮೇಘಾ ಶೆಟ್ಟಿ ತಮ್ಮ ಅಕ್ಕ, ತಂಗಿಯರು, ತಂದೆ-ತಾಯಿ ಅಜ್ಜಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡಿ, ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ನಟಿ ಮೇಘಾ ಆಕಾಶ ನೀಲಿ ಬಣ್ಣದ ಮೈಸೂರ್ ಸಿಲ್ಕ್ ಸೀರೆಯುಟ್ಟಿದ್ದು, ಅದರ ಜೊತೆಗೆ ಸ್ಲೀವ್ ಲೆಸ್ ನೀಲಿ ಬಣ್ಣದ ಬ್ಲೌಸ್ ಧರಿಸಿದ್ದಾರೆ.
ನಟಿ ಹೆಚ್ಚೇನೂ ಮೇಕಪ್ ಮಾಡದೇ, ಹೆವಿ ಜ್ಯುವೆಲ್ಲರಿ ಧರಿಸದೆ ಸಿಂಪಲ್ ಆಗಿರುವ ನೆಕ್ಲೆಸ್ ಮತ್ತು ಕಿವಿಯೋಲೆ ಧರಿಸಿ ಮುದ್ದಾಗಿ ಕಾಣಿಸುತ್ತಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಮೇಘಾ ಶೆಟ್ಟಿಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ದಿಲ್ ಪಸಂದ್, ಕೈವಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಮೇಘಾ ಆಪ್ಟರ್ ಆಪರೇಷನ್ ಲಂಡನ್ ಕೆಫೆ, ಚೀತಾ ಮತ್ತು ಗ್ರಾಮಾಯಣ ಸಿನಿಮಾದಲ್ಲಿ ನಟಿಸಿದ್ದಾರೆ. ಯಾವಾಗ ಬಿಡುಗಡೆ ಅನ್ನೋದು ತಿಳಿದು ಬಂದಿಲ್ಲ.
ಇಷ್ಟೇ ಅಲ್ಲ ಮೇಘಾ ಶೆಟ್ಟಿ ಎಸ್ ಮಹೇಂದರ್ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಿದೆ.
ಮೇಘಾ ಶೆಟ್ಟಿ ಟ್ರಾವೆಲ್ ಪ್ರಿಯೆಯಾಗಿದ್ದು, ಇವರು ದೇಶ, ವಿದೇಶ ಸುತ್ತುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.
Bigg Boss: ಕರಿಮಣಿ ನಾಯಕಿ ಸ್ಪಂದನಾಗೆ ಸುದೀಪ್ ನೀಡಿದ್ರು ಬಿರುದು
ಟೀಕೆಗಳನ್ನು ಎದುರಿಸಿದ ಗಟ್ಟಿಗಿತ್ತಿ ಸುಹಾನಾ ಸೈಯದ್ ಎಲ್ಲಿಯವರು? ಓದಿದ್ದೇನು?
ಮೊದಲ ರಾತ್ರಿಯಲ್ಲಿ ಬೆವರಿದ ಸುಬ್ಬು; ನೋಡ ನೋಡ್ತಿದ್ದಂತೆ ಕರೆಂಟ್ ಹೋಗಿ ಬಿಡ್ತು!
ಬಿಗ್ ಬಾಸ್ ಮನೆಯಲ್ಲಿ 'ಕಂಟೆಂಟ್ ಮೇಕರ್ ರಾಣಿ' ಆದ ಅನುಮೋಲ್