ಇತ್ತೀಚೆಗೆ ನಿಧನರಾದ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಸಂತಾಪ ಕೋರಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು, ಅವರೊಂದಿಗೆ ಕಳೆದ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ಶಂಭು ನಟಿ.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಚಿನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
26
ನಟಿ ಮಾನ್ಯಾ ನಾಯ್ಡು ಸಂತಾಪ
ನಟಿ ಮಾನ್ಯಾ ನಾಯ್ಡು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಯಮ್ಮ ಹಾಗೂ ಶ್ರೀಮುರಳಿ ಕುಟುಂಬದ ಜೊತೆಗಿನ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ಅವರೊಂದಿಗೆ ಕಳೆದ ಸಮಯ, ಅವರು ತೋರಿದ ಪ್ರೀತಿ ಹಾಗೂ ಅವರು ಮಾಡಿಕೊಟ್ಟ ಆಹಾರವನ್ನು ಸಹ ನೆನಪಿಸಿಕೊಂಡು ಭಾವುಕರಾಗಿದ್ದಾರೆ.
36
ನಟಿಯ ಭಾವನಾತ್ಮಕ ಪೋಸ್ಟ್
"ಪ್ರೀತಿಯ ಅಮ್ಮಾ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.ನಿಮ್ಮನ್ನು ಮತ್ತು ನಿಮ್ಮ ಸುಂದರ ನಗುವನ್ನು ನಾವು ಸದಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಶಂಭು ಸಿನಿಮಾ ಸಂದರ್ಭವನ್ನೂ ಸಹ ನೆನಪಿಸಿಕೊಂಡಿದ್ದಾರೆ ಮಾನ್ಯಾ.
ಮಾನ್ಯಾ ಶ್ರೀಮುರಳಿ ಜೊತೆ 'ಶಂಭು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಮಾನ್ಯ, "ನಾನು ಇನ್ನೂ ಆ ಸೊಪ್ಪಿನ ಸಾರು ಮತ್ತು ರಾಗಿ ಮುದ್ದೆಯನ್ನು ನೆನಪಿಸಿಕೊಳ್ಳುತ್ತೇನೆ. ಶಂಭು ಚಿತ್ರದ ಶೂಟಿಂಗ್ ವೇಳೆ ನೀವು ಪ್ರೀತಿಯಿಂದ ಲೊಕೇಶನ್‌ಗೆ ಕಳುಹಿಸುತ್ತಿದ್ದ ಆ ಊಟವನ್ನು ಮರೆಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
56
ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಬೇಡಿಕೊಂಡ ನಟಿ
ಅಲ್ಲದೆ ಚಿನ್ನೇಗೌಡ, ಶ್ರೀಮುರಳಿ, ವಿದ್ಯಾ, ಪ್ರಿನ್ಸ್, ಅವ ತಲ್ಲಿ, ರಾಗು, ಶೌರ್ಯ ಸೇರಿದಂತೆ ಇಡೀ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮಾನ್ಯಾ, ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮಾನ್ಯಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸಿನಿರಂಗದ ಹಲವರು ಪ್ರತಿಕ್ರಿಯೆ ನೀಡಿ ಜಯಮ್ಮ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
66
ಶ್ರೀಮುರಳಿ ಕುಟುಂಬದ ಜೊತೆ ನಂಟು
ನಟಿ ಮಾನ್ಯಾ ನಾಯ್ಡು ಶ್ರೀಮುರಳಿ ಜೊತೆ ‘ಶಂಭು’ಸಿನಿಮಾದಲ್ಲಿ 20 ವರ್ಷಗಳ ಹಿಂದೆ ನಟಿಸಿದ್ದರು. ಅಂದಿನಿಂದ ಇಲ್ಲಿವರೆಗೆ ಶ್ರೀಮುರಳಿ ಕುಟುಂಬದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಸದ್ಯ ಸಿನಿಮಾ ಬಿಟ್ಟು ನ್ಯೂಯಾರ್ಕ್ ನಲ್ಲಿ ನೆಲೆಸಿರುವ ನಟಿ ಭಾರತಕ್ಕೆ ಬಂದಾಗ ಶ್ರೀಮುರಳಿ ಕುಟುಂಬವನ್ನು ಭೇಟಿಯಾಗುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.