Doddanna: ಶಂಕರ್‌ನಾಗ್‌ಗೆ ಟೆನ್ಷನ್‌, ರಾಜ್‌ಕುಮಾರ್‌ಗೆ ಶಿಸ್ತು: ದೊಡ್ಡಣ್ಣ ಹೇಳಿದ ರಹಸ್ಯ ಘಟನೆ ವೈರಲ್‌!

Published : Jun 17, 2026, 04:23 PM IST

Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್‌ಕುಮಾರ್‌ ಮತ್ತು ಶಂಕರ್ ನಾಗ್‌ ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್‌ ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.

PREV
14
ನಂದು ಫುಲ್‌ ಮೀಲ್ಸ್‌

ನಾನು 160 ಕೆಜಿ ಇದ್ದೀನಿ, ಇತ್ತೀಚೆಗೆ 47 ಕೆಜಿ ಕಡಿಮೆ ಮಾಡಿದ್ದೀನಿ. ನಾನ್ಯಾಕೆ ತೆಳ್ಳಗಾಗಲು ಒದ್ದಾಡಬೇಕು, ನಂದು ಫುಲ್‌ ಮೀಲ್ಸ್‌. ಸುಂದರ್‌ರಾಜ್‌, ರಾಮಕೃಷ್ಣ ಮೊದಲಾದವರೆಲ್ಲ ಮಧ್ಯರಾತ್ರಿವರೆಗೆ ಕೂತರೂ ಮರುದಿನ ಬೆಳಗ್ಗೆ ಬೇಗ ಎದ್ದು ಓಡೋದು ನೋಡಿದ್ರೆ ಏನು ಹೇಳೋದೋ ಗೊತ್ತಾಗಲ್ಲ.

24
ಶಿಸ್ತು ನೆನಪಿಸಿಕೊಂಡ ದೊಡ್ಡಣ್ಣ

ಇದು ಹಿರಿಯ ಪೋಷಕ ನಟ ದೊಡ್ಡಣ್ಣ ಮಾತು. ಸುದ್ದಿಗೋಷ್ಠಿಯೊಂದರಲ್ಲಿ ತನ್ನ ತೂಕದ ಬಗ್ಗೆ ಮಾತನಾಡುತ್ತಲೇ ಡಾ.ರಾಜ್‌ಕುಮಾರ್‌, ಶಂಕರ್‌ನಾಗ್‌ ಅವರ ಶಿಸ್ತಿನ ಬಗ್ಗೆಯೂ ದೊಡ್ಡಣ್ಣ ಮಾತನಾಡಿದರು. ಒಂದು ಮುತ್ತಿನ ಕಥೆ ಸಿನಿಮಾದ ಶೂಟಿಂಗ್‌.

34
ಅವರಿಗೆ ಪೇಚಾಟ

ಆ ದಿನ ಶೂಟಿಂಗ್‌ ಮುಗಿದಾಗ ಬಹಳ ಲೇಟ್‌ ಆಗಿತ್ತು. ಡಾ.ರಾಜ್‌ಕುಮಾರ್‌ ಬೆಳಗಿನ ಜಾವ ಎರಡು ಗಂಟೆ ಆದರೂ ಅಭಿಮಾನಿಗಳೊಂದಿಗೆ ಮಾತನಾಡುತ್ತಲೇ ಇದ್ದರು. ಆ ಸಿನಿಮಾದ ನಿರ್ದೇಶಕರಾಗಿದ್ದ ಶಂಕರ್‌ನಾಗ್‌ ಅವರಿಗೆ ಪೇಚಾಟ. ಮರುದಿನ ಆರು ಗಂಟೆಗೆ ಶೂಟಿಂಗ್‌ ಇತ್ತು.

44
ಫುಲ್‌ ರೆಡಿ

ನನ್ನನ್ನು ಐದಕ್ಕೆ ಎಬ್ಬಿಸಿದರು. ಇಷ್ಟೊತ್ತಿಗೆ ಯಾರೂ ಬಂದಿರಲ್ಲ ಎಂದು ನಾನು ಬೈದುಕೊಳ್ಳುತ್ತ ಸೆಟ್‌ಗೆ ಬಂದರೆ ಅಲ್ಲಾಗಲೇ ರಾಜ್‌ಕುಮಾರ್‌ ಫುಲ್‌ ರೆಡಿಯಾಗಿ ಮೇಕಪ್‌ ಹಾಕಿಸಿಕೊಳ್ಳುತ್ತಿದ್ದರು ಎಂದು ದೊಡ್ಡಣ್ಣ ವಿವರಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories