ಸಂಬಂಧಗಳಿಗೆ ಬೆಲೆ ಕೊಡಿ, ಕುಟುಂಬದಲ್ಲಿ ಜಗಳ ಬೇಡ; ಮನವಿ ಮಾಡಿಕೊಂಡ ಧ್ರುವ ಸರ್ಜಾ

Published : Feb 27, 2023, 01:56 PM IST

ಸಂಬಂಧಗಳ ಮಹತ್ವ ಸಾರಿದ ಧ್ರುವ ಸರ್ಜಾ. ಮನಸ್ತಾಪ ಅಥವಾ ಜಗಳ ಏನೇ ಇದ್ದರೂ ನಿಲ್ಲಿಸುವಂತೆ ಜನರಿಗೆ ಕಿವಿ ಮಾತು ಹೇಳಿದ ಆಕ್ಷನ್ ಪ್ರಿನ್ಸ್‌....   

PREV
16
ಸಂಬಂಧಗಳಿಗೆ ಬೆಲೆ ಕೊಡಿ, ಕುಟುಂಬದಲ್ಲಿ ಜಗಳ ಬೇಡ; ಮನವಿ ಮಾಡಿಕೊಂಡ ಧ್ರುವ ಸರ್ಜಾ

SN dhruva sarja Chiranjeevi sarjaaಕೆಲವು ದಿನಗಳ ಹಿಂದೆ ನಡೆದ ಕರುನಾಡ ಸಂಭ್ರಮ ಕಾರ್ಯಕ್ರವನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧ್ರುವ ಸರ್ಜಾ ಸಂಬಂಧಗಳ ಮಹತ್ವವನ್ನು ಸಾರಿದ್ದಾರೆ. 

26

ವೇದಿಕೆ ಮೇಲೆ ಆಗಮಿಸಿದ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾರನ್ನು ನೆನೆದು ಭಾವುಕರಾಗಿದ್ದಾರೆ. ಈಗ ಬೇಕು ಮಾತನಾಡಬೇಕು ಅಂದ್ರೂ ಜೊತೆಗಿಲ್ಲ ಎಂದು ಭಾವುಕರಾಗಿದ್ದಾರೆ. 
 

36

'ಬೆಳಗ್ಗೆ ಇರುವವರು ಸಂಜೆ ಆಗುವಷ್ಟರಲ್ಲಿ ಮಣ್ಣಾಗಿಬಿಡುತ್ತಾರೆ. ರಿಲೇಷನ್‌ಶಿಪ್‌ ಇರುವಾಗ ಜೊತೆಯಲ್ಲಿ ಟೈಂ ಸ್ಪೆಂಡ್ ಮಾಡಿ.  ಯಾವ ಟೈಂನಲ್ಲಿ ಯಾರಿಗೆ ಏನಾಗುತ್ತದೆ ಎಂದು ಗೊತ್ತಾಗುವುದಿಲ್ಲ. ಗ್ಯಾಡ್ಜೆಟ್‌ಗಳ (ಮೊಬೈಲ್/ಟಿವಿ/ಟ್ಯಾಬ್) ಜೊತೆ ಯಾವಾಗ ಬೇಕಿದ್ದರೂ ಸಮಯ ಕಳೆಯಬಹುದು' ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

46

'ರಿಲೇಷನ್‌ಶಿಪ್‌ಗೆ ಮರ್ಯಾದೆ ಕೊಡಿ. ಫ್ಯಾಮಿಲಿ ವಿಚಾರದಲ್ಲಿ ಯಾರೂ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ ಅವನು ಹಾಗೆ ಹೇಳಿದ ಅದಿಕ್ಕೆ ಮಾತು ಬಿಟ್ಟೆ ಇವನು ಹೀಗೆ ಮಾಡಿದ ಅದಿಕ್ಕೆ ಮಾತು ಬಿಟ್ಟಿ ಎನ್ನಬೇಡಿ.'

56

'ಫ್ಯಾಮಿಲಿಗಳಲ್ಲಿ ಜಗಳ ಅಥವಾ ಮನಸ್ತಾಪಗಳಾಗಿದ್ದರೆ ದಯವಿಟ್ಟು ಅದನ್ನು ನಿಲ್ಲಿಸಿ ನಾನು ಮನವಿ ಮಾಡಿಕೊಳ್ಳುತ್ತೀನಿ. ನಾನು ಈಗ ಮಾತನಾಡಬೇಕು ಅಂದ್ರೂ ಮಾತಿಗೆ ಸಿಗುವುದಿಲ್ಲ'

66

'ಹೀಗಾಗಿ ಮೊದಲು ಫ್ಯಾಮಿಲಿಗೆ ಗೌರವ ಕೊಡಿ. ನಿಮ್ಮ ಮನೆಗಳಲ್ಲಿ ಹೀರೋ ಇದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಹೀರೋ ಇದ್ದಾರೆ. ಫಸ್ಟ್‌ ಅವರುಗಳು ಆಮೇಲೆ ತೆರೆ ಮೇಲೆ ಬರುವ ಹೀರೋಗಳು' ಎಂದಿದ್ದಾರೆ ಧ್ರುವ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories