‘ಸವ್ಯಸಾಚಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ನಟಿ ಪ್ರೇಮಾ. ಅವರ ಎರಡನೇ ಚಿತ್ರ ‘ಓಂ’ ಬ್ಲಾಕ್ ಬಸ್ಟರ್ ಹಿಟ್ ಆಗೋ ಜೊತೆಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿತು.
ಪ್ರೇಮಾ ಸಿನಿಮಾ ಜಗತ್ತಿಗೆ ಅಡಿಯಿಟ್ಟು 25 ವರ್ಷಗಳಾದ ಹಿನ್ನೆಲೆಯಲ್ಲಿ ಉಪೇಂದ್ರ ಅವರನ್ನು ಅಭಿನಂದಿಸಿದ್ದಾರೆ. ‘ಕನ್ನಡ ಚಿತ್ರರಂಗದ ಖ್ಯಾತ ಅಭಿನೇತ್ರಿ ಪ್ರೇಮಾ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದಿದೆ. ಅಭಿನಂದನೆಗಳು'
'ಓಂ ಸಿನಿಮಾದ ನಿಮ್ಮ ಅದ್ಭುತ ಅಭಿನಯದಿಂದ ಎಷ್ಟೋ ಅಭಿಮಾನಿಗಳ ಮನಸೂರೆಗೊಂಡಿದ್ದೀರಿ. ಆ ಬಳಿಕ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿ ಚಿತ್ರರಸಿಕರ ಮನಸೂರೆಗೊಂಡಿದ್ದೀರಿ. ನಿಮ್ಮ ಸಿನಿ ಪಯಣಕ್ಕೆ ಶುಭ ಹಾರೈಕೆಗಳು’ ಎಂದು ಉಪೇಂದ್ರ ಹಾರೈಸಿದ್ದಾರೆ.
ಪ್ರೇಮಾ ಇದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಅನುಪ್ರಭಾಕರ್ ಅವರೂ ಪ್ರೇಮಾಗೆ ಶುಭ ಕೋರಿದ್ದಾರೆ.
2006ರಲ್ಲಿ ಪ್ರೇಮಾ 6 ಸಿನಿಮಾಗಳು ರಿಲೀಸ್ ಆಗಿದೆ. ಬ್ಯಾಕ್ ಬ್ಯಾಕ್ ಹಿಟ್ ಕೊಡುವ ಮೂಲಕ ಬ್ಯುಸಿ ನಟಿಯಾಗಿ ಗುರುತಿಸಿಕೊಂಡರು. ಯಜಮಾನ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ನೀಡಿತ್ತು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾ ರಂಗದಿಂದ ಸ್ವಲ್ಪ ದೂರ ಉಳಿದಿದ್ದರು. 2017ರಲ್ಲಿ ಉಪೇಂದ್ರ ಮತ್ತೆ ಬಂದಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದರು.
1996ರಲ್ಲಿ ಓಂ ಚಿತ್ರಕ್ಕೆ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಬೆಸ್ಟ್ ನಟಿ ಪಡೆದುಕೊಂಡರು, 2001ರಲ್ಲಿ ಕನಸುಗಾರ ಚಿತ್ರದಕ್ಕೆ ದಕ್ಷಿಣ ಭಾರತ ಫಿಲ್ಮಂಫೇರ್ ಅವಾರ್ಡ್ ಬೆಸ್ಟ್ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡರು.
ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2022ರಲ್ಲಿ ವೆಡ್ಡಿಂಗ್ ಗಿಫ್ಟ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯಿತ್ತು.