ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟ ರಾಮ್ ಕುಮಾರ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು 57 ಆಗಿದ್ದರೂ ಯಂಗ್ ಆಗಿರುವ ಮುದ್ದಿನ ಅಪ್ಪನಿಗೆ ಧನ್ಯಾ ರಾಮ್ ಕುಮಾರ್ ಸ್ಪೆಷಲ್ ಆಗಿ ಶುಭಾಶಯ ಕೋರಿದ್ದಾರೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಮೋಡಿ ಮಾಡಿ, ಹಲವು ಹೆಂಗಳೆಯರ ಹೃದಯ ಕದ್ದ ನಟ ರಾಮ್ ಕುಮಾರ್. ರಾಮ್ ಕುಮಾರ್ ತಮ್ಮ 57 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
26
ಮುದ್ದಿನ ಮಗಳಿಂದ ಮುದ್ದಾದ ವಿಶ್
ರಾಮ್ ಕುಮಾರ್ ಮುದ್ದಿನ ಮಗಳು ಧನ್ಯಾ ರಾಮ್ ಕುಮಾರ್ ಅಪ್ಪನ ಜೊತೆಗಿನ ಫೋಟೊ ಪೋಸ್ಟ್ ಮಾಡಿ, ‘57 never looked younger’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೂ ಸಹ ರಾಮ್ ಕುಮಾರ್ ಅವರಿಗೆ 57 ಆದರೂ ಇನ್ನೂ ಕೂಡ ಎವರ್‌ಗ್ರೀನ್ ಆಗಿದ್ದಾರೆ ಎಂದೇ ಅನಿಸುತ್ತಿದೆ.
36
ಸಿನಿಮಾ ರಂಗಕ್ಕೆ ಎಂಟ್ರಿ
ನಟರಾಗಿರುವ ಶ್ರೀನಗರ ನಾಗರಾಜ್ ಅವರ ಪುತ್ರರಾದ ರಾಮ್ ಕುಮಾರ್ ಅವರಿಗೆ ನಟನೆ ಜೀನ್ಸ್ ನಲ್ಲೇ ಬಂದಿತ್ತು. ಇವರು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಆವೇಶ ಸಿನಿಮಾ ಮೂಲಕ. ಬಳಿಕ ಮುತ್ತಿನಹಾರದ ಮೂಲಕ ಜನಪ್ರಿಯತೆ ಪಡೆದರು.
ರಾಮ್ ಕುಮಾರ್ ಸಿನಿಮಾಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದು, ಗೆಜ್ಜೆ ನಾದ ಸಿನಿಮಾ ಮೂಲಕ. ಈ ಚಿತ್ರದಲ್ಲಿ ನಟಿ ಶ್ವೇತಾ ಅವರು ನಾಯಕಿಯಾಗಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲದೇ ರಾಮ್ ಕುಮಾರ್ ಲುಕ್ ಗೆ ಜನ ಮನ ಸೋತಿದ್ದರು.
56
ರಾಮ್ ಕುಮಾರ್ ಅಭಿನಯದ ಜನಪ್ರಿಯ ಸಿನಿಮಾಗಳು
ಮಹಾ ಕ್ಷತ್ರೀಯ, ಕಾವ್ಯಾ, ತಾಳಿಯ ಸೌಭಾಗ್ಯ, ತಾಯಿ ಇಲ್ಲದ ತಬ್ಬಲಿ, ತವರಿನ ತೊಟ್ಟಿಲು, ಗುಲಾಬಿ, ಪೂಜಾ, ಹಬ್ಬ, ಸ್ನೇಹ ಲೋಕ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ, ನವಶಕ್ತಿ ವೈಭವ ಇವೆಲ್ಲಾ ರಾಮ್ ಕುಮಾರ್ ನಟಿಸಿರುವ ಜನಪ್ರಿಯ ಸಿನಿಮಾಗಳು.
66
ರಾಮ್ ಕುಮಾರ್ ಕುಟುಂಬ
ರಾಮ್ ಕುಮಾರ್ ಅವರು ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಬ್ಬರು ಮಕ್ಕಳು. ಧನ್ಯಾ ರಾಮ್ ಕುಮಾರ್ ಮತ್ತು ಧೀರೇನ್ ರಾಮ್ ಕುಮಾರ್. ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.