ಮಾಡಲ್ ಕಮ್ ನಟಿ ನಿಶ್ವಿಕಾ ನಾಯ್ಡು (Nishvika Naidu) 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಣ್ಣದ ಜರ್ನಿ ಆರಂಭಿಸಿದ್ದರು.
ಚಿರಂಜೀವಿ ಸರ್ಜಾ ಜೊತೆ 'ಅಮ್ಮ ಐ ಲವ್ ಯು' ನಟಿಸಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ (simple suni) ಅವರ ಕಾಂಬಿನೇಷನ್ ಸಿನಿಮಾ ಸಖತ್‌ನಲ್ಲಿ ನಟಿಸಿದ್ದರು.
ನಿಶ್ವಿತಾ ಮೂಲತಃ ಬೆಂಗಳೂರಿನವರಾಗಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃ ಶಾಸ್ತ್ರದಲ್ಲಿ ಪದವಿ ಮಾಡಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲೂ ನಿಶ್ವಿಕಾ ಬ್ಯುಸಿಯಾಗಿದ್ದರು.
ಅನೀಶ್ ನಟನೆಯ ರಾಮಾರ್ಜುನ್, ಕಾಳಿದಾಸ ಕನ್ನಡ ಮೇಷ್ಟ್ರು, ಪಡ್ಡೆಹುಲಿ,ಗಾಳಿಪಟ 2, ಗುರು ಶಿಷ್ಯರು, ದಿಲ್ ಪಸಂದ್ ಸೇರಿಂದ ಮೂರ್ನಾಲ್ಕು ಸಿನಿಮಾಗಳಲ್ಲಿ ನಿಶ್ವಿಕಾ ಅಭಿನಯಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಅಗಿರುವ ನಿಶ್ವಿಕಾ ಸುಮಾರು ನಾಲ್ಕು ಲಕ್ಷ ಮೂವತ್ತು ಎರಡು ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ.
ಇತ್ತೀಚಿಗೆ ಯುಟ್ಯೂಬ್ ಲೋಕಕ್ಕೆ ಕಾಲಿಟ್ಟ ನಿಶ್ವಿಕಾ ಅವರು ಸ್ಕಿನ್ ಕೇರ್, ಹೇರ್ ಕೇರ್ ಮತ್ತು ತಮ್ಮ ಶೂಟಿಂಗ್ ದಿನಗಳು ಹೇಗಿರುತ್ತದೆ ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
Suvarna News