ಹಳದಿ ಸೀರೆಯಲ್ಲಿ ಮಿಂಚಿದ ನಟಿ ಪ್ರಣೀತಾ ಸುಭಾಷ್‌; ಸೀಮಂತ ಫೋಟೋ ವೈರಲ್!

Published : May 16, 2022, 04:42 PM IST

ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತ್ತು ನಟಿ ಪ್ರಣೀತಾ ಸುಭಾಷ್ ಅದ್ಧೂರಿ ಸೀಮಂತ ಕಾರ್ಯಕ್ರಮ. 

PREV
16
ಹಳದಿ ಸೀರೆಯಲ್ಲಿ ಮಿಂಚಿದ ನಟಿ ಪ್ರಣೀತಾ ಸುಭಾಷ್‌; ಸೀಮಂತ ಫೋಟೋ ವೈರಲ್!

ಕನ್ನಡ ಚಿತ್ರರಂಗದ ಬಟ್ಟಲು ಕಣ್ಣಿನ ಸುಂದರಿ ಪ್ರಣೀತಾ ಸುಭಾಷ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ತಮ್ಮ ಪರ್ಸನಲ್ ಲೈಫ್‌ ಬಗ್ಗೆ ಹಂಚಿಕೊಳ್ಳುತ್ತಾರೆ. 

26

ಇಂದು ಪ್ರಣೀತಾ ಸುಭಾಷ್‌ಗೆ ಆಪ್ತ ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಸೀಮಂತ ಎಂದು ಬರೆದುಕೊಂಡು ಪ್ರಣೀತಾ ಫೋಟೋ ಅಪ್ಲೋಡ್ ಮಾಡಿದ್ದಾರೆ.

36

ಹಳದಿ ಮತ್ತು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಪ್ರಣೀತಾ ಮಿಂಚಿದ್ದಾರೆ. ಹಿಂದೆ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದೆ. 

46

ಕೈ ತುಂಬಾ ಮೆಹೆಂದಿ ಹಾಕಿಸಿಕೊಂಡಿರುವ ಪ್ರಣೀತಾ ಡಿಫರೆಂಟ್ ಆಗಿರುವ ಜೆಡೆ ಬಿಲ್ಲೆ ಹಾಕಿಸಿಕೊಂಡಿದ್ದಾರೆ. ಹೇರ್‌ಸ್ಟೈಲ್‌ ಫೋಟೋ ಕೂಡ ಹಂಚಿಕೊಂಡಿದ್ದಾರೆ.

56

 ಪತಿ ನಿತಿನ್ ರಾಜು ಹುಟ್ಟು ಹಬ್ಬದ ದಿನ ಪ್ರಣೀತಾ ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡು, ಹೊಸ ಅತಿಥಿ ಆಗಮನದ ಬಗ್ಗೆ ರಿವೀಲ್ ಮಾಡಿದ್ದರು.

66

ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಜೊತೆ ಕಳೆದ ವರ್ಷ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಮದುವೆ ವಿಚಾರ ರಿವೀಲ್ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories