30 ಚಿತ್ರಗಳಲ್ಲಿ ನಟಿಸಿರುವ ಬಾಲ ನಟಿ ಆರಾಧ್ಯ!

Published : May 19, 2022, 10:18 AM IST

ಬಾಲ ನಟಿ ಆರಾಧ್ಯ ಬಗ್ಗೆ ಇಲ್ಲಿದೆ ಸಣ್ಣ ಮಾಹಿತಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳಿದು.  

PREV
17
30 ಚಿತ್ರಗಳಲ್ಲಿ ನಟಿಸಿರುವ ಬಾಲ ನಟಿ ಆರಾಧ್ಯ!

ಸದ್ಯಕ್ಕೆ ಕನ್ನಡದಲ್ಲಿ (Sandalwood) ಬಹು ಬೇಡಿಕೆಯ ಬಾಲ ನಟಿ ಎನಿಸಿಕೊಂಡಿರುವುದು ಆರಾಧ್ಯ ಎನ್‌ ಚಂದ್ರ (Aaradhya N Chandru).

27

ಹೇಮಂತ್‌ ರಾವ್‌ ನಿರ್ದೇಶನದ ‘ಕವಲುದಾರಿ’ ಚಿತ್ರದಲ್ಲಿ ಅನಂತ್‌ನಾಗ್‌ ಅವರ ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟಈ ಬಾಲಪ್ರತಿಭೆ, ಇಲ್ಲಿಯವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

37

ಜತೆಗೆ ನಾಲ್ಕು ಕಿರು ಚಿತ್ರಗಳು, ನಾಲ್ಕು ಧಾರಾವಾಹಿಗಳು, 30 ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯಲ್ಲಿ ಅಂಥೋನಿ ಕ್ಲಾರೆಟ್‌ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಆರಾಧ್ಯ, ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ನಲ್ಲಿ ಗುಮ್ಮನ ಕತೆ ಹೇಳುವ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

47

ಕವಲುದಾರಿ ಚಿತ್ರಕ್ಕೆ ಬಾಲ ನಟಿಯರು ಬೇಕು ಎನ್ನುವ ಜಾಹೀರಾತು ನೋಡಿ ಕುತೂಹಲಕ್ಕೆ ತಮ್ಮ ಮಗಳನ್ನು ಆಡಿಷನ್‌ಗೆ ಕರೆದುಕೊಂಡು ಹೋಗಿದ್ದ ನಿತಾನ್‌ ಚಂದ್ರ ಹಾಗೂ ನಂದಿನಿ ದಂಪತಿ ಪುತ್ರಿ ಮೊದಲ ಆಡಿಷನ್‌ನಲ್ಲೇ ಗೆದ್ದಳು. 

57

ಅಲ್ಲಿಂದ ತನ್ನ ಮುಗ್ಧತೆಯಿಂದಲೇ ಸೆಳೆಯುವ ಆರಾಧ್ಯಳಿಗೆ ಎರಡು ಬಾರಿ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಮುಡಿಗೇರಿದೆ. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಬಾಲ್ಯದ ದಿನಗಳ ಪಾತ್ರದಲ್ಲಿ ಈಕೆ ನಟಿಸಿದ್ದಾಳೆ.

67

ಆರಾಧ್ಯ ನಟನೆಯ ಹೋಪ್‌ (Hope), ಪೆಂಟಗಾನ್‌(Pentagon), ಬೈರಾಗಿ,ಅಹಲ್ಯಾ, ಕದ್ದ ಚಿತ್ರ, ಮಿ.ಬ್ಯಾಚುಲರ್‌ ಚಿತ್ರಗಳು ಬಿಡುಗಡೆ ಆಗಬೇಕಿದೆ.

77

ಈ ನಡುವೆ ತೆಲುಗಿನ (Telugu Serial) ‘ಪಾಪೆ ಮಾ ಜೀವನಜ್ಯೋತಿ’ ಎನ್ನುವ ಧಾರಾವಾಹಿಯಲ್ಲಿ ಆರಾಧ್ಯ ಬಾಲ ಖಳನಾಯಕಿ ಪಾತ್ರ ಮಾಡುತ್ತಿದ್ದಾರೆ.

Read more Photos on
click me!

Recommended Stories