ಸಿಕ್ಸ್ ಪ್ಯಾಕ್, ಸ್ಟೈಲಿಶ್ ಲುಕ್ ಇಲ್ಲದೇ ಮಾಸ್ ಹೀರೋ ಆಗಿ ಗೆದ್ದ ರವಿ ಅಣ್ಣ… ಯಾರೀ ನಟ?

Published : Jul 28, 2025, 03:16 PM ISTUpdated : Jul 29, 2025, 03:13 PM IST

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡುತ್ತಿರುವ ಸಿನಿಮಾ ಅಂದ್ರೆ ಅದು SU from SO. ಅದರಲ್ಲೂ ಈ ಸಿನಿಮಾದ ರವಿ ಅಣ್ಣನ ಪಾತ್ರ ಜನಮನ ಗೆದ್ದಿದೆ. ಈ ನಟನ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. 

PREV
18

ಯಾವುದೇ ಪ್ರೊಮೋಷನ್ ಇಲ್ಲದೇ, ಪ್ರೀಮಿಯರ್ ಶೋಗಳನ್ನು ಮಾಡಿ, ದುಡ್ಡು ಕೊಟ್ಟು ನೋಡಿದ ಜನರ ಬಾಯಿ ಮಾತಿನಿಂದಲೇ ರಾಜ್ಯಾದ್ಯಂತ ಹೌಸು ಫುಲ್ ಪ್ರಮೋಷನ್ ಪಡೆದಿರುವಂತಹ ಚಿತ್ರ ಅಂದರೆ ಅದು SU from SO ಚಿತ್ರ. ಒಂದೊಳ್ಳೆ ಕಂಟೆಂಟ್ ಮೂಲಕ ಹೇಗೆ ಜನರನ್ನು ಸೆಳೆಯಬಹುದು ಅನ್ನೋದನ್ನು ಈ ಚಿತ್ರ ತೋರಿಸಿದೆ.

28

ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂತದ್ದು, ನಮ್ಮ ಹಳ್ಳಿಯಲ್ಲೇ ಇದೆಲ್ಲಾ ನಡಿತಿದಿಯೋ ಎನ್ನುವಂತಹ ಭಾವನೆ ನೀಡುವ ಸಿನಿಮಾ ಇದು. ಈ ಸಿನಿಮಾದಲ್ಲಿ ನಾಯಕ ಅಶೋಕ ಇರಲಿ, ನವೀನ, ಸತೀಶ, ಚಂದ್ರು, ನಳಿನಿ, ರವಿಯಣ್ಣನ ಕ್ಯಾರೆಕ್ಟರೇ ಇರಬಹುದು ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲೂ ರವಿ ಅಣ್ಣ ಮಾಸ್ ಹೀರೋ ಆಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

38

ಹೌದು, ಸಿನಿಮಾ ನೋಡಿದವರಿಗೆ ರವಿ ಅಣ್ಣನ (Ravi Anna) ಪಾತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸಿನಿಮಾ ಆರಂಭದಿಂದ ಕೊನೆಯವರೆಗೂ ಆವರಿಸಿಕೊಂಡಿರುವವರು ರವಿ ಅಣ್ಣ. ಅದು ಹಾಸ್ಯ ಇರಲಿ, ಜನಪರ ಕಾಳಜಿ ಇರಲಿ, ಭಯ, ಫೈಟ್, ಇಮೋಷನಲ್ ಸೀನ್ ಹೀಗೆ ಪ್ರತಿಯೊಂದು ದೃಶ್ಯದಲ್ಲೂ ಅದ್ಭುತವಾಗಿ ನಟಿಸಿದವರು ರವಿ ಅಣ್ಣ. ಅಂದ್ರೆ ಆ ಪಾತ್ರಕ್ಕೆ ಜೀವ ತುಂಬಿದ ಶನೀಲ್ ಗೌತಮ್.

48

ಒಬ್ಬ ನಟ ಮಾಸ್ ಹೀರೋ ಆಗಬೇಕು ಅಂದ್ರೆ ಅದಕ್ಕೆ ಸಿಕ್ಸ್ ಪ್ಯಾಕ್ ಬೇಕು, ರಗಡ್ ಲುಕ್ ಬೇಕು, ಅನ್ನೋದನ್ನೆಲ್ಲಾ ಸುಳ್ಳು ಮಾಡಿ, ತಮ್ಮ ನೈಜ್ಯ ಅಭಿನಯದ ಮೂಲಕವೇ ಮಾಸ್ ಹೀರೋ ಆಗಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದವರು ರವಿ ಅಣ್ಣ, ಅಂದ್ರೆ ಶನೀಲ್ ಗೌತಮ್ (Shaneel Gautam). ಈ ನಟನ ಕುರಿತು ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

58

ಶನೀಲ್ ಗೌತಮ್ ಅವರು ಕನ್ನಡಕ್ಕೆ ಹೊಸಬರೇನಲ್ಲ. ಈಗಾಗಲೇ ಹಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಹಲವು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ, ವಿಲನ್ ಆಗಿ ಅಬ್ಬರಿಸಿದ್ದಾರೆ. ಇವರ ಖಡಕ್ ನಟನೆಗೆ ಪ್ರಶಸ್ತಿಗಳು ಕೂಡ ಬಂದಿವೆ.

68

ಶನೀಲ್ ತುಳು ಸಿನಿಮಾಗಳದ ರಾಪಟ, ಅಬತರ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ರಿಷಭ್ ಶೆಟ್ಟಿ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಶನೀಲ್ ಗುರು. ಅದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರಬಹುದು, ಕಾಂತಾರ (Kantara), ಗರುಡ ಗಮನ ವೃಷಭ ವಾಹನ, ಟೋಬಿ, ಸೇರಿ ಹಲವು ಸಿನಿಮಾಗಳಲ್ಲಿ ಶನೀಲ್ ಮಿಂಚಿದ್ದಾರೆ.

78

ಮಂಗಳೂರಿನ ಬಂಟ್ವಾಳದವರಾದ ಶನೀಲ್ ಅವರಿಗೆ ಯಾವ ಪಾತ್ರ ಕೊಟ್ಟರು ಅದನ್ನು ಅಚ್ಚುಕಟ್ಟಾಗಿ ನಟಿಸುವ ಕಲೆ ಗೊತ್ತಿದೆ. ಇಲ್ಲಿವರೆಗೆ ಸಿಕ್ಕ ಪಾತ್ರಗಳು ಸಣ್ಣದಾಗಿದ್ದರು, ಅದನ್ನು ಅದ್ಭುತವಾಗಿ ಅನ್ನೋದಕ್ಕಿಂತ ನೈಜ್ಯವಾಗಿ ಅಭಿನಯಿಸಿ ಗೆದ್ದಿದ್ದಾರೆ. ಇನ್ನು ಸು ಫ್ರೊಮ್ ಸೋದಲ್ಲಿ ತಾವೇ ರವಿ ಅಣ್ಣನಾಗಿ ನಟಿಸುವ ಮೂಲಕ ಗೆದ್ದಿದ್ದಾರೆ.

88

SU from SO ಈ ಚಿತ್ರದಲ್ಲಿ ನಾಯಕ ಇಲ್ಲ, ಪ್ರತಿಯೊಂದು ಪಾತ್ರಗಳು ಕೂಡ ನಾಯಕನೇ, ಊರಿನ ಎಲ್ಲಾ ಸಮಸ್ಯೆಗೆ ಸ್ಪಂಧಿಸುವ, ರವಿ ಅಣ್ಣ ಇದ್ರೆ ಎಲ್ಲವೂ ಸಾಧ್ಯ ಎನ್ನುವ ಆ ಒಂದು ಪಾತ್ರ ಸಿನಿಮಾವನ್ನು ಹಾಗೂ ಜನರ ಮನಸನ್ನು ಹೇಗೆ ಆವರಿಸಿದೆ ಅಂದ್ರೆ ಸೋಶಿಯಲ್ ಮೀಡಿಯಾದ ಟ್ರೋಲ್ ಪೇಜ್ ಗಳ ತುಂಬಾ ರವಿಅಣ್ಣನ ಮೇಲಿನ ಅಭಿಮಾನ ಎದ್ದು ಕಾಣುತ್ತಿದೆ. ಒಂದು ಪಾತ್ರ ಗೆಲ್ಲೋದಕ್ಕೆ ಇಷ್ಟೇ ಸಾಕಲ್ವ?

Read more Photos on
click me!

Recommended Stories