ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಜುಕೇಶನ್ ಕ್ವಾಲಿಫಿಕೇಶನ್ ಗೊತ್ತಾ?

Published : Sep 01, 2023, 05:37 PM IST

ಕರ್ನಾಟಕ ಕ್ರಶ್ ಆಗಿ, ನಂತರ ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟು ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ವಿದ್ಯಾಭ್ಯಾಸದ ಬಗ್ಗೆ ಗೊತ್ತಾ? ನಿಮಗೆ…  

PREV
18
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಜುಕೇಶನ್ ಕ್ವಾಲಿಫಿಕೇಶನ್ ಗೊತ್ತಾ?

ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ಕರ್ನಾಟಕ ಕ್ರಶ್ ಆಗಿ ಮಿಂಚಿ, ನಂತರ ಟಾಲಿವುಡ್, ಬಾಲಿವುಡ್ ನಲ್ಲೂ ಮಿಂಚಿ ನ್ಯಾಷನಲ್ ಕ್ರಶ್ ಆಗಿ ಮೆರೆಯುತ್ತಿರುವ ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ (Rashmika Mandanna). 
 

28

ಕೊಡಗಿನ ಬೆಡಗಿಯಾಗಿರುವ ರಶ್ಮಿಕಾ ಮಂದಣ್ಣ ತಂದೆ ಸುಮನ್ ಮಂದಣ್ಣ ಮತ್ತು ತಾಯಿ ಮದನ್ ಮಂದಣ್ಣ. ಇವರಿಗೊಬ್ಬ ಪುಟಾಣಿ ತಂಗಿ ಇದ್ದಾರೆ, ಅವರ ಹೆಸರು ಶಿಮನ್ ಮಂದಣ್ಣ. ಇವರು ವಿರಾಜ್‌ಪೇಟೆಯವರು. 
 

38

ನ್ಯಾಷನಲ್ ಕ್ರಶ್ (National Crush) ಅಗಿರುವ ಈ ನಟಿ ಸದ್ಯ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ. ಇವರನ್ನು ಬ್ಯೂಟಿ ವಿತ್ ಬ್ರೈನ್ ಅಂತಾನೂ ಹೇಳಬಹುದು. ಸೈಕಾಲಜಿ ಸ್ಟಡಿ ಮಾಡಿರುವ ಈ ಬೆಡಗಿಯ ವಿದ್ಯಾಭ್ಯಾಸದ ಬಗ್ಗೆ ತಿಳಿಯೋಣ. 
 

48

ರಶ್ಮಿಕಾ ವಿದ್ಯಾಭ್ಯಾಸ
ರಶ್ಮಿಕಾ ಮಂದಣ್ಣ ಆರಂಭಿಕ ಶಿಕ್ಷಣ (education) ಕೊಡಗಿನಲ್ಲೇ ಆಗಿದೆ. ಇವರು ಕೊಡಗಿನ ಕೂರ್ಗ್ ಪಬ್ಲಿಕ್ ಸ್ಕೂಲ್ (Coorg public school) ನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. 

58

ಹೈಯರ್ ಸೆಕೆಂಡರಿ
ರಶ್ಮಿಕಾ ಮಂದಣ್ಣ ತಮ್ಮ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಮೈಸೂರಿನ ಮೈಸೂರ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ನಲ್ಲಿ (Mysore Institute of Commerce) ಪಿಯುಸಿ ಶಿಕ್ಷಣವನ್ನು ಪಡೆದರು. ಇವರು ಡಿಗ್ರಿ ಕೂಡ ಮುಗಿಸಿದ್ದು, ಅದರ ಬಗ್ಗೆ ತಿಳಿಯೋಣ. 

68

ಪದವಿ ಶಿಕ್ಷಣ 
ಹೈಯರ್ ಸೆಕೆಂಡರಿ ಶಿಕ್ಷಣದ ಬಳಿಕ ರಶ್ಮಿಕಾ ಮಂದಣ್ಣ ಎಂ ಎಸ್ ರಾಮಯ್ಯ ಆರ್ಟ್ಸ್, ಕಾಮರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ಇವರು ಸೈಕಾಲಜಿ ವಿದ್ಯಾರ್ಥಿನಿ ಆಗಿದ್ದರು. 

78

ಸೈಕಾಲಜಿ
ರಶ್ಮಿಕಾ ಸೈಕಾಲಜಿ, ಜರ್ನಲಿಸಂ ಮತ್ತು ಇಂಗ್ಲಿಷ್ ಲಿಟರೇಚರ್‌ನಲ್ಲಿ ಪದವಿಯನ್ನು ಎಂ ಎಸ್ ರಾಮಯ್ಯ ಆರ್ಟ್ಸ್, ಕಾಮರ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಇವರು ಬ್ರೀಲಿಯಂಟ್ ಸ್ಟೂಡೆಂಟ್ ಕೂಡ ಆಗಿದ್ದರು ಎನ್ನಲಾಗಿದೆ. 
 

88

ಅದೃಷ್ಟ ಖುಲಾಯಿಸಿದ್ದು ಹೀಗೆ
ರಶ್ಮಿಕಾ ಜೀವನ ಬದಲಾದದ್ದು, ಅವರು ಲಾ ಮೋಡ್ ಬೆಂಗಳೂರಿನ, ಟಾಪ್ ಮಾಡೆಲ್ ಹಂಟ್ 2015, ಸೀಸನ್ 2 ವಿನ್ನರ್ ಆದ ಬಳಿಕ. ಆಕೆಯ ಬ್ಯೂಟಿ ನೋಡಿ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಾಯಕಿಯಾಗಿ ಅವರಿಗೆ ಅವಕಾಶ ನೀಡಲಾಯಿತು. ಅಲ್ಲಿಂದ ಮತ್ತೆ ನಟಿ ಹಿಂದಿರುಗಿ ನೋಡೇ ಇಲ್ಲ.

Read more Photos on
click me!

Recommended Stories