ಅಬ್ಬಬ್ಬಾ! ನಟಿ ಖುಷ್ಬೂ ಹೇರ್‌ಸ್ಟೈಲ್ ನೋಡಿ...ಆದ್ರೆ ಕಾಮೆಂಟ್‌ ಮಾತ್ರ ನೋಡ್ಬೇಡಿ

First Published | Aug 31, 2023, 11:12 AM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಟಿ ಖುಷ್ಬೂ ಹೊಸ ಹೇರ್‌ಸ್ಟೈಲ್. ಕಾಮೆಂಟ್‌ ನೋಡಿ ಗಾಬರಿಯಾಗಿ ಸ್ಪಷ್ಟನೆ ಕೊಟ್ಟ ನಟಿ....
 

 ಶಾಂತಿ ಕ್ರಾಂತಿ, ರಣಧೀರ, ಜೀವನನದಿ, ಹೃದಯ ಗೀತೆ, ಕಲಿಯುಗ ಭೀಮಾ ಸೇರಿದಂತೆ ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ನೀಡಿರುವ ನಟಿ ಖುಷ್ಬೂ ಸುಂದರ್.

ಸಿನಿಮಾ ಜೊತೆಯಲ್ಲಿ ರಾಜಕೀಯದಲ್ಲಿ ಬ್ಯುಸಿಯಾಗಿರುವ ಖುಷ್ಬೂ ಈಗ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. 

Tap to resize

ಸಿಕ್ಕಾಪಟ್ಟೆ ಶಾರ್ಟ್ ಆಗಿ ಹೇರ್‌ಸ್ಟೈಲ್ ಮಾಡಿಸಿಕೊಂಡ ನಟಿ 'ಬದಲಾವಣೆ ಜಗದ ನಿಯಮ ಮತ್ತು ನಿರಂತರ' ಎಂದು ಬರೆದುಕೊಂಡಿದ್ದಾರೆ.

ಖುಷ್ಬೂ ಹೇರ್‌ಸ್ಟೈಲ್ ನೋಡಿ ಜನರು ಗಾಬರಿ ಆಗಿದ್ದಾರೆ. ಸಿನಿಮಾದಲ್ಲಿ ಓಕೆ ಆದರೆ ರಾಜಕೀಯದಲ್ಲಿ ಇದೆಲ್ಲಾ ವರ್ಕೌಟ್ ಆಗಲ್ಲ ಎಂದು ಕಾಲೆಳೆದಿದ್ದಾರೆ. 

'ನನ್ನ ಹೇರ್‌ಸ್ಟೈಲ್‌ಗೆ ಪ್ರತಿಕ್ರಿಯೆ ನೀಡುತ್ತಿರುವ ಪ್ರತಿಯೊಬ್ಬರಿಗೂ ವಂದನೆಗಳು. ಆದರೆ ನಿಜ ನಿಮಗೆ ಗೊತ್ತಿಲ್ಲ' ಎಂದು ಸತ್ಯ ಹೇಳಿ ಸ್ಪಷ್ಟನೆ ಕೊಟ್ಟಿದ್ದಾರೆ.

'ನನ್ನ ಸುಂದರವಾದ ಕೂದಲನ್ನು ನಾನು ಕಟ್ ಮಾಡಿಲ್ಲ. ಖಂಡಿತಾ ನನ್ನ ಕೂದಲು ಕಟ್ ಮಾಡುವುದಿಲ್ಲ. ಅಷ್ಟು ಚಿಕ್ಕ ಕಟ್ ಮಾಡುತ್ತೀನಿ ಎಂದು ಕಲ್ಪನೆ ಕೂಡ ಮಾಡಿಕೊಳ್ಳಬೇಡಿ' 

'ನನ್ನ ಹೊಸ ಚಿತ್ರಕ್ಕೆ ಮಾಡಿಸಿಕೊಂಡಿರುವ ಹೇರ್‌ ಟ್ರಯಲ್. ನನ್ನ ಕೂದಲು ಬಗ್ಗೆ ಹೆಚ್ಚಿನ ಕಾಳಜಿ ವಜಿಸುತ್ತೀನಿ ಹೀಗಾಗಿ ಇಷ್ಟು ತುಂಡು ಕಟ್ ಮಾಡುವುದಿಲ್ಲ' ಎಂದು ಮತ್ತೊಮ್ಮೆ ಬರೆದುಕೊಂಡಿದ್ದಾರೆ.

Latest Videos

click me!