ಸ್ಯಾಂಡಲ್‌ವುಡ್ ಚಾಲೆಂಜೀಂಗ್ ಸ್ಟಾರ್‌ ದರ್ಶನ್‌ಗೆ ರಾಖಿ ಕಟ್ಟಿದ ಈ ಚೆಲುವೆ ಯಾರು?

First Published | Aug 31, 2023, 10:51 AM IST

ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಸೋನಲ್ ಮೊಂಥೆರೋ, ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ನಟ ದರ್ಶನ್ ತೂಗುದೀಪ್ ಮನೆಗೆ ತೆರಳಿ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋ ಈ ಚೆಲುವೆಯ ಫೋಟೋಸ್ ಇಲ್ಲಿವೆ ನೋಡಿ. 
 

ಪಂಚತಂತ್ರ ಸಿನಿಮಾದ ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ, ನಾಚಿಗೆ ನಮ್ಮ ಜೊತೆ ಚೂ ಬಿಟ್ಟಿದೆ ಎಂಬ ರೊಮ್ಯಾಂಟಿಕ್ ಹಾಡು ನೀವು ನೋಡಿರಬಹುದು ಅಲ್ವಾ? ಈ ಹಾಡಿನ ಮೂಲಕ ಯುವಕರ ನಿದ್ದೆ ಕೆಡಿಸಿದ ನಟಿ ಸೋನಲ್ ಮೊಂಥೆರೋ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. 
 

ನಟಿ ಸೋನಲ್ ಮೊಂಥೆರೋ (Sonal Monterio) ತಮ್ಮ ರಾಬರ್ಟ್ ಚಿತ್ರದ ಸಹ ನಟ ದರ್ಶನ್ ತೂಗುದೀಪ ಅವರ ಜೊತೆ ಮತ್ತೆ ಕಾಣಿಸಿಕೊಂಡಿದ್ದಾರೆ. ರಕ್ಷಾಬಂಧನದ ಶುಭ ಮುಹೂರ್ತದಂದು ಸೋನಲ್ ದರ್ಶನ್ ಅವರ ನಿವಾಸಕ್ಕೆ ತೆರಳಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.
 

Tap to resize

ದರ್ಶನ್ ಗೆ (Darshan Thugudeepa) ರಾಖಿ ಕಟ್ಟಿದ ಸೋನಲ್ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಮಮತೆಯ ಸೌಗಂದವಿದು,  ಸವಿ ಮನಸುಗಳ ಸಂಭ್ರಮವಿದು , ಅಣ್ಣ ತಂಗಿಯರ ಹಬ್ಬ ಇದು, ಬಿಡಿಸಲಾಗದ ಸಂಬಂಧವಿದು, ನಿಮ್ಮ ಸಂತೋಷವೇ ನನ್ನ ಪ್ರಪಂಚ, ನಿಮ್ಮಿಂದಲೇ ನನ್ನ ಬದುಕು ಇಷ್ಟೊಂದು ಸುಂದರ, ಸದಾ ನಿಮ್ಮ ಖುಷಿಯನ್ನೆ ಬಯಸುತ್ತ, ಪ್ರೀತಿಯ ಅಣ್ಣನಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
 

ಮಂಗಳೂರಿನ ಹುಡುಗಿ ಸೋನಲ್ ಮೊಂಥೆರೋ ಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಇವರು 2013 ರಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ (Miss beautiful smile)ಮತ್ತು 2015 ರಲ್ಲಿ ಮಿಸ್ ಕೊಂಕಣ್ ಗರಿ ಮುಡಿಗೇರಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ಗೆ ಬರುವ ಮುನ್ನ ಇವರು ಕೊಂಕಣಿ ಮತ್ತು ತುಳು ಸಿನಿಮಾ, ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದರು.
 

2015ರಲ್ಲಿ ತುಳು ಸಿನಿಮಾ (Tulu film) ಎಕ್ಕ ಸಕ್ಕ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಪಿಲಿಬೈಲು ಯಮುನಕ್ಕ ಮತ್ತು ಜೈ ತುಳುನಾಡು ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ಇವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. 
 

ಸೋನಲ್ ಅಭಿಸಾರಿಕೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಇದಾದ ಬಳಿಕ ಎಂಎಲ್‌ಎ, ಮದುವೆ ದಿಬ್ಬಣ, ಪಂಚತಂತ್ರ, ಡೆಮೋಪೀಸ್, ರಾಬರ್ಟ್, ಬನಾರಸ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೇ ಬುದ್ಧಿವಂತ 2, ಶುಗರ್ ಫ್ಯಾಕ್ಟರಿ, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. 
 

ತನ್ನ ನಟನಾ ವೃತ್ತಿಜೀವನದ ಜೊತೆಗೆ, ಸೋನಾಲ್ ಸ್ಟೇಜ್ ಶೋಗಳಲ್ಲಿ ಭಾಗವಹಿಸುತ್ತಾರೆ, ಸೌಂದರ್ಯ ಸ್ಪರ್ಧೆಗಳ ತೀರ್ಪುಗಾರರಲ್ಲಿದ್ದಾರೆ ಮತ್ತು ಹಾಡುತ್ತಾರೆ. ಸೋನಾಲ್ ಫ್ಯಾಷನ್ ಈವೆಂಟ್ ಮತ್ತು ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯಾದ ಫ್ಯಾಶನ್ ಎಬಿಸಿಡಿಯ ನಿರ್ದೇಶಕರಾಗಿದ್ದಾರೆ.
 

Latest Videos

click me!