‘ಬಿಲ್ಲ ರಂಗ ಬಾಷಾ’ಗೆ ಕಿಚ್ಚ ಸುದೀಪ್‌ ಹೊಸ ಅವತಾರ: ಅನೂಪ್‌ ಭಂಡಾರಿ ಪ್ಲಾನ್ ಏನು?

ಅನೂಪ್‌ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್‌ ನಟನೆಯ ‘ಬಿಲ್ಲ ರಂಗ ಭಾಷ’ ಸಿನಿಮಾ ಚಿತ್ರೀಕರಣ ಏ.16ಕ್ಕೆ ಅರಂಭ ಸಾಧ್ಯತೆ. ಇದು ಕ್ರಿ.ಶ. 2209ರ ಕಾಲಘಟ್ಟದ ಕತೆ ಇರುವ ಫ್ಯಾಂಟಸಿ ಫಿಲಂ. ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಹಲವು ತಿಂಗಳಿಂದ ಸುದೀಪ್‌ ವರ್ಕೌಟ್‌. ಬಾಡಿ ಬಿಲ್ಡ್‌ ಮಾಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ರಿಲೀಸ್‌.
 

Kichcha Sudeep Billa Ranga Baasha Movie Shooting Update gvd

ಅನೂಪ್‌ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್‌ ನಟನೆಯ ‘ಬಿಲ್ಲ ರಂಗ ಭಾಷ’ ಸಿನಿಮಾ ಶೀಘ್ರ ಸೆಟ್ಟೇರುವ ಸೂಚನೆ ಸಿಕ್ಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಕಳೆದ ಕೆಲವು ತಿಂಗಳಿಂದ ವರ್ಕೌಟ್‌ ಮಾಡುತ್ತಿದ್ದಾರೆ ಸುದೀಪ್‌.

Kichcha Sudeep Billa Ranga Baasha Movie Shooting Update gvd

ಇದೀಗ ಬಾಡಿ ಬಿಲ್ಡ್‌ ಮಾಡಿರುವ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್ ಪೋಸ್ಟ್ ಮಾಡಿದ್ದಾರೆ. ‘ಏ.16’ ಎಂಬ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಆ ದಿನ ‘ಬಿಲ್ಲ ರಂಗ ಭಾಷ’ ಸೆಟ್ಟೇರಲಿದೆ ಎಂಬುದು ಸದ್ಯದ ನಂಬಿಕೆ.


ಕಟ್ಟುಮಸ್ತಾದ ಮೈಕಟ್ಟಿನ ಫೋಟೋಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬಿಲ್ಲ ರಂಗ ಭಾಷ ಸಿನಿಮಾದ ಪಾತ್ರಕ್ಕೆ ಆಲ್‌ಮೋಸ್ಟ್ ರೆಡಿಯಾಗಿದ್ದೀನಿ’ ಎಂದು ಸುದೀಪ್‌ ಹೇಳಿದ್ದಾರೆ.

ಈ ಸಿನಿಮಾವನ್ನು ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ಕ್ರಿ.ಶ 2209ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವೈಜ್ಞಾನಿಕತೆ ಬೆರೆಸಿದ ಫ್ಯಾಂಟಸಿ ಕಥೆಯನ್ನು ಅನೂಪ್‌ ಭಂಡಾರಿ ಈ ಸಿನಿಮಾದಲ್ಲಿ ನಿರೂಪಿಸಲಿದ್ದಾರೆ.

'ಪ್ರೈಂ ಶೋ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ನಿರಂಜನ್ ರೆಡ್ಡಿ 'ಬಿಲ್ಲ ರಂಗ ಬಾಷ' ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 

ಈ ಹಿಂದೆ ಈ ಸಂಸ್ಥೆ ತೆಲುಗಿನ 'ಹನುಮಾನ್' ಚಿತ್ರವನ್ನು ನಿರ್ಮಿಸಿತ್ತು. 200 ಕೋಟಿ ರೂ. ಅಂದಾಜು ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಬಿಲ್ಲ ರಂಗ ಭಾಷ' ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

Latest Videos

vuukle one pixel image
click me!