ಕೋಟಿ ಕೋಟಿ ಹಣ ಇದ್ರೂ ಎಷ್ಟು ಕಡಿಮೆ ಬೆಲೆಯ ಶರ್ಟ್‌ ಧರಿಸಿದ್ದಾರೆ ನೋಡಿ ನಮ್ಮ ಶಿವಣ್ಣ!

Published : Apr 04, 2025, 12:59 PM IST

ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಂಡ ನೆಟ್ಟಿಗರು. ಎಷ್ಟು ಕಡಿಮೆ ಬೆಲೆಯ ಬಟ್ಟೆ ಹಾಕಿಕೊಂಡಿದ್ದಾರಾ?  

PREV
16
ಕೋಟಿ ಕೋಟಿ ಹಣ ಇದ್ರೂ ಎಷ್ಟು ಕಡಿಮೆ ಬೆಲೆಯ ಶರ್ಟ್‌ ಧರಿಸಿದ್ದಾರೆ ನೋಡಿ ನಮ್ಮ ಶಿವಣ್ಣ!

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 45 ಸಿನಿಮಾದ ಪ್ರೆಸ್‌ಮೀಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಚಿತ್ರತಂಡಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಾಥ್ ಕೊಟ್ಟಿದ್ದಾರೆ. 

26

ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಮಾತ್ರ ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಎನ್ ಗುರು ಅಣ್ಣ ಹಾಕಿರು ಶರ್ಟ್ ಡಿಸೈನ್ ಎಂದು ಫ್ಯಾನ್ಸ್ ಯೋಚನೆ ಮಾಡುತ್ತಿರುವ ಅದರ ಬೆಲೆ ಕೇಳಿ ಕೊಂಡ ಶಾಕ್ ಆಗಿಬಿಟ್ಟಿದ್ದಾರೆ. 

36

ಹೌದು. ಕಾರ್ಯಕ್ರಮಕ್ಕೆ ಶಿವಣ್ಣ ಧರಿಸಿರುವ ಶರ್ಟ್‌ ಲಿವೈಸ್‌ ಬ್ರ್ಯಾಂಡ್‌ ಆಗಿದ್ದು ಇದರ ಬೆಲೆ ಕೇವಲ 2,999 ರೂಪಾಯಿ ಎನ್ನಲಾಗಿದೆ. ಈ ಬೆಲೆಯನ್ನು ಗೂಗಲ್‌ ತೋರಿಸುತ್ತಿದೆ.

46

ಕೋಟಿ ಕೋಟಿ ಹಣ ಇದ್ರೂ ಕೂಡ ನಮ್ಮ ಶಿವಣ್ಣ ಎಷ್ಟು ಸಿಂಪಲ್ ನೋಡಿ ಬೇರೆ ಸ್ಟಾರ್‌ಗಳ ತರ ಶೋ ಆಫ್ ಮಾಡುವುದಕ್ಕೆ ಡಿಸೈನರ್ ಅಥವಾ ದುಬಾರಿ ಬಟ್ಟೆಗಳನ್ನು ಧರಿಸುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

56

ಶಿವರಾಜ್‌ಕುಮಾರ್ ಸಖತ್ ಸಿಂಪಲ್ ಎಂದು ಎಲ್ಲರಿಗೂ ಗೊತ್ತಿದೆ. ಈಗ ಮಾತ್ರವಲ್ಲ ಈ ಹಿಂದೆ ಕೂಡ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣಬೇಕು ಎಂದು ಸಿಂಪಲ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. 

66

ಚಿತ್ರದ ಹೆಸರು 45, ನಿರ್ಮಾಣ ಮಾಡುತ್ತಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಚಿಕಿತ್ಸೆ ನಂತರ ಸಿನಿಮಾ ಮುಗಿಸಿಕೊಡುವುದಾಗಿ ಶಿವಣ್ಣ ಮಾತು ಕೊಟ್ಟಿದ್ದಂತೆ. ಅದರ ಪ್ರಕಾರವೇ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. 

Read more Photos on
click me!

Recommended Stories