ಬಿಗ್ ಬಾಸ್ ಸೀಸನ್ 2 ಸ್ಪರ್ಧಿ, ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ಕಮ್ ನಟ ಅಕುಲ್ ಬಾಲಾಜಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆಗಿರುವ ಸ್ಪೆಷಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
26
'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ಥ್ಯಾಂಕ್ ಯು ಸೋ ಮಚ್ ಕಿಚ್ಚ ಬ್ರೋ ನನಗೆ ಬಿಎಂಡ್ಲ್ಯೂ ಬೈಕ್ ಗಿಫ್ಟ್ ಮಾಡಿರುವುದಕ್ಕೆ' ಎಂದು ಅಕುಲ್ ಬರೆದುಕೊಂಡಿದ್ದಾರೆ.
36
'ಹಾಯ್ ಸ್ನೇಹಿತರ ನಿನ್ನೆ ಮೊನ್ನೆ ಗಣೇಶೋತ್ಸವ ಆಯ್ತು ಇವತ್ತು ಕಿಚ್ಚೋತ್ಸವ ನಡೆಯುತ್ತಿದೆ. ನಮ್ಮ ಕಿಚ್ಚ ಬ್ರೋ ಅವರ ಹುಟ್ಟುಹಬ್ಬ' ಎಂದು ಮಾತು ಆರಂಭಿಸಿದ್ದಾರೆ.
46
'ಸಾಮಾನ್ಯವಾಗಿ ಅವರ ಹುಟ್ಟುಹಬ್ಬ ಅಂದ್ರೆ ನಾವು ಅವರಿಗೆ ಗಿಫ್ಟ್ ಕೊಡ್ತೀನಿ ಆದರೆ ಇವತ್ತು ಅವರು ನನಗೆ ರಿಟರ್ನ್ ಗಿಫ್ಟ್ ಕೊಟ್ಟಿದ್ದಾರೆ. ಅದು ಈ ಬೈಕ್' ಎಂದು ಹೇಳಿದ್ದಾರೆ.
56
ಮಧ್ಯರಾತ್ರಿ ಕಿಚ್ಚನ ನಿವಾಸಕ್ಕೆ ಭೇಟಿ ಕೊಟ್ಟು ಕೇಕ್ ಕಟ್ ಮಾಡಿಸಿ ವಿಶ್ ಮಾಡಿದ್ದಾರೆ. ಬಿಗ್ ಬಾಸ್ ಶೋ ನಂತರ ಇವರಿಬ್ಬರ ಸ್ನೇಹ ಬೆಳೆದಿದೆ.
66
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸುದೀಪ್ ಗುಣವನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. ಸುದೀಪ್ ಸರ್ ಈ ರೀತಿ ಅನೇಕರಿಗೆ ಸಹಾಯ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.