ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. 2016ರಲ್ಲಿ ಕ್ರೇಸಿ ಬಾಯ್ ಸಿನಿಮಾ ಮೂಲಕ ಆಶಿಕಾ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ರಾಜು ಕನ್ನಡ ಮೀಡಿಯಮ್, ಮುಗುಳು ನಗೆ, ರೆಂಬೋ-2 ಸಿನಿಮಾಗಳು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಆಶಿಕಾ ಮಿಂಚಿದರು.