ಪುನೀತ್ ರಾಜ್‌ಕುಮಾರ್- ಡಾರ್ಲಿಂಗ್ ಕೃಷ್ಣ Lucky man ಚಿತ್ರಕ್ಕೆ ಯು ಸರ್ಟಿಫಿಕೇಟ್‌

Published : Sep 05, 2022, 09:02 AM IST

ಸೆಪ್ಟೆಂಬರ್ 9 ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್. ಯು ಸರ್ಟಿಫಿಕೇಟ್ ಪಡೆದಿರುವುದಕ್ಕೆ ಸಂತಸ ವ್ಯಕ್ತ ಪಡಿಸಿರುವ ಚಿತ್ರತಂಡ ಮತ್ತು ಫ್ಯಾನ್ಸ್‌.

PREV
16
ಪುನೀತ್ ರಾಜ್‌ಕುಮಾರ್- ಡಾರ್ಲಿಂಗ್ ಕೃಷ್ಣ Lucky man ಚಿತ್ರಕ್ಕೆ ಯು ಸರ್ಟಿಫಿಕೇಟ್‌

ನಟ ಪುನೀತ್‌ರಾಜ್‌ಕುಮಾರ್‌ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್‌’ಗೆ ಸೆನ್ಸಾರ್‌ ಆಗಿದ್ದು, ‘ಯು’ ಸಟಿಫಿಕೇಟ್‌ ಬಂದಿದೆ. 

26

ಖ್ಯಾತ ನೃತ್ಯ ನಿರ್ದೇಶನಕ ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌ ಜೋಡಿಯಾಗಿ ನಟಿಸಿದ್ದಾರೆ. 

36

ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಪ್ರಭುದೇವ ಹಾಗೂ ಪುನೀತ್‌ ಅವರು ಒಂದು ಹಾಡಿಗೆ ಜತೆಯಾಗಿ ಹೆಜ್ಜೆ ಹಾಕಿದ್ದಾರೆ. ರಾಜ್ಯಾದ್ಯಾಂತ ಸೆ.9ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರವು ಈಗ ಯಶಸ್ವಿಯಾಗಿ ಸೆನ್ಸಾರ್‌ ಮುಗಿಸಿಕೊಂಡಿದೆ. 

46

ಇತ್ತೀಚೆಗಷ್ಟೆಚಿತ್ರದ ಟ್ರೇಲರ್‌ ಹಾಗೂ ಆಡಿಯೋ ಬಿಡುಗಡೆ ಆಯಿತು. ಈ ಚಿತ್ರವನ್ನು ಪಾರ್ಸಾ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಪಿಆರ್‌ ಮೀನಾಕ್ಷಿ ಸುಂದರಂ ಮತ್ತು ಆರ್‌ ಸುಂದರ ಕಾಮರಾಜ್‌ ಅವರು ನಿರ್ಮಿಸಿದ್ದಾರೆ.

56

ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿರುವ ಡೈಲಾಗ್ ವೈರಲ್ ಆಗಿದೆ. ನಿನ್ನ ಲೈಫ್‌ನಲ್ಲಿ ಆಗಿರುವ ಮಿಸ್ಟೇಕ್‌ಗಳನ್ನು ಸರಿಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡ್ತೀನಿ' ಎಂದು ಹೇಳಿರುವ ಡೈಲಾಗ್ ಅಭಿಮಾನಿಗಳ ಹೃದಯ ಗೆದ್ದಿದೆ. 

66

ಅಂದಹಾಗೆ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಹಾಡಿಗೆ ಸಖತ್ ಡಾನ್ಸ್ ಮಾಡಿದ್ದಾರೆ. ಡಾನ್ಸರ್ ಪ್ರಭುದೇವ ಜೊತೆ ಪುನೀತ್ ಹೆಜ್ಜೆ ಹಾಕಿದ್ದಾರೆ. ಇಬ್ಬರ ಮಸ್ತ್ ಡಾನ್ಸ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. 

Read more Photos on
click me!

Recommended Stories