ಕನ್ನಡ ಚಿತ್ರರಂಗದ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಹಾಸನದ ತೋಟದ ಮನೆಯಲ್ಲಿ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
27
ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಂಚಿಕೊಂಡ ಯಶ್, ಮಕ್ಕಳು ತಾತ- ಅಜ್ಜಿ ಜೊತೆ ಹಬ್ಬ ಆಚರಿಸುತ್ತಿರುವುದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
37
'ಪ್ರತಿಯೊಬ್ಬರಿಗೂ ಮಕರ ಸಂಕ್ರಾಂತಿ , ಪೊಂಗಲ್, ಉತ್ತರಾಯಣ, ಮಾಘ ಬಿಹು ಹಬ್ಬದ ಶುಭಾಶಯಗಳು. ಸುಗ್ಗಿಯ ಹಬ್ಬವು ನಿಮಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ' ಎಂದು ಬರೆದುಕೊಂಡಿದ್ದಾರೆ.
47
ಯಶ್ ತಂದೆ ಟ್ರ್ಯಾಕ್ಟರ್ ಓಡಿಸುತ್ತಿದ್ದಾರೆ. ಪಕ್ಕದಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ಮಕ್ಕಳ ಜೊತೆ ಕುಳಿತುಕೊಂಡಿದ್ದಾರೆ, ಹಿಂದೆ ಯಶ್ ತಾಯಿ ಫೋಟೋಗೆ ಸ್ಮೈಲ್ ಮಾಡಿದ್ದಾರೆ.
57
ತಾತ- ಅಜ್ಜಿ ಜೊತೆ ಐರಾ ಮತ್ತು ಅಥರ್ವ್ ಅಡುಗೆ ಮಾಡುತ್ತಿರುವ ಫೋಟೋ ಇದು. ಮತ್ತೊಂದರಲ್ಲಿ ದೇವರ ಪೂಜೆ ಸಲ್ಲಿಸುತ್ತಿದ್ದಾರೆ.
67
ಹಲವು ವರ್ಷಗಳಿಂದ ಯಶ್ ತೋಟದ ಮನೆ ನಿರ್ಮಾಣವಾಗುತ್ತಿದೆ. ಪೋಷಕರಿಬ್ಬರು ಅಲ್ಲಿನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಫೋಟೋ ನೋಡಿ ಅಭಿಮಾನಿಗಳು ಒಂದು ವಿಚಾರ ಗೆಸ್ ಮಾಡಿದ್ದಾರೆ.
77
ಹೌದು! ಯಶ್ ಹಾಸನದಲ್ಲಿ ಮನೆ ಕಟ್ಟಿಸುತ್ತಿದ್ದಾರೆ ಎಂದು ಈ ಫೋಟೋಗಳು ಸುಳಿವು ನೀಡುತ್ತಿದೆ. ಒಂದು ಫೋಟೋದಲ್ಲಿ ಅಡುಗೆ ಮನೆ ತೋರಿಸಿದ್ದಾರೆ. ಇದೆಲ್ಲವೂ ಹೊಸ ಮನೆ ರೀತಿಯೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.