ಮದುವೆ ಆಮಂತ್ರಣ ಕೋರಲೂ ಮ್ಯಾಚಿಂಗ್ ಬಟ್ಟೆ; ಹರಿಪ್ರಿಯಾ-ವಸಿಷ್ಠ ಜೋಡಿಯ ಸುಂದರ ಫೋಟೋಗಳು

Published : Jan 15, 2023, 02:09 PM ISTUpdated : Jan 15, 2023, 02:12 PM IST

ಮದುವೆ ಆಮಂತ್ರಣ ಕೋರಲೂ ಮ್ಯಾಚಿಂಗ್ ಬಟ್ಟೆ ಧರಿಸಿ ಗಮನ ಸೆಳೆಯುತ್ತಿದ್ದಾರೆ ಹರಿಪ್ರಿಯಾ-ವಸಿಷ್ಠ ಜೋಡಿ.

PREV
16
ಮದುವೆ ಆಮಂತ್ರಣ ಕೋರಲೂ ಮ್ಯಾಚಿಂಗ್ ಬಟ್ಟೆ; ಹರಿಪ್ರಿಯಾ-ವಸಿಷ್ಠ ಜೋಡಿಯ ಸುಂದರ ಫೋಟೋಗಳು

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠಿ ಸಿಂಹ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಬ್ಬರೂ ಸರಳವಾಗಿ ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜನವರಿ 26ರಂದು ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗುತ್ತಿದ್ದಾರೆ. 

26

ಈಗಾಗಲೇ ಹರಿಪ್ರಿಯಾ ಮತ್ತು ವಸಿಷ್ಠ ಜೋಡಿ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಸ್ಯಾಂಡಲ್ ವುಡ್‌ನ ಅನೇಕ ಗಣ್ಯರಿಗೆ ಮದುವೆ ಮಮತೆಯ ಕರೆಯೋಲೆ ಮಾಡುತ್ತಿದ್ದಾರೆ.  ವಸಿಷ್ಠ ಗೆಳೆಯ ಧನಂಜಯ್, ಜಗ್ಗೇಶ್, ಕುಮಾರ್ ಬಂಗಾರಪ್ಪ, ಧ್ರುವ ಸರ್ಜಾ ಸೇರಿದಂತೆ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. 

36

ವಸಿಷ್ಠ ಮತ್ತ ಹರಿಪ್ರಿಯಾ ಜೋಡಿ ಮದುವೆ ಆಮಂತ್ರಣ ನೀಡಲು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಯಾರಿಗೆಲ್ಲ ಮದುವೆ ಆಮಂತ್ರಣ ಕೊಡಲು ಹೋಗುತ್ತಿದ್ದರೂ ಎಲ್ಲಾ ಕಡೆ ಒಂದೇ ಬಣ್ಣದ ಬಟ್ಟೆ ಧರಿಸಿ ಹೋಗುತ್ತಿದ್ದಾರೆ. ಸಿಂಹಪ್ರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.    

46

ಇತ್ತೀಚಿಗಷ್ಟೆ ನಡೆದ ಪ್ರೆಸ್ ಮೀಟ್‌ನಲ್ಲೂ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದರು. ಹಸಿರು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಪ್ರೆಸ್ ಮೀಟ್ ಮೂಲಕ ಸಿಂಹಪ್ರಿಯಾ ಜೋಡಿ ಮದುವೆ ಆಮಂತ್ರಣ ಪತ್ರಿಕೆ ರಿವೀಲ್ ಮಾಡಿ ಪ್ರಿತಿಯ ಕರೆಯೋಲೆ ಮಾಡಿದ್ದರು. ಜೊತೆಗೆ ನಮ್ಮ ಲವ್ ಸ್ಟೋರಿ ಕೂಡ ರಿವೀಲ್ ಮಾಡಿದ್ದರು.  
 

56

2016ರಲ್ಲಿ ಸಿನಿಮಾ ಪ್ರೀಮಿಯರ್‌ ಶೋನಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಮೊದಲು ಭೇಟಿಯಾಗಿದ್ದು ಎಂದು ಹೇಳಿದ್ದಾರೆ. ಸ್ನೇಹಿತರಾಗಿ ಇಬ್ಬರೂ ಬಳಿಕ ಪ್ರೇಮಿಗಳಾದರು. ವಸಿಷ್ಠ ಅವರೇ ಮೊದಲು ಪ್ರಪೋಸ್ ಮಾಡಿದ್ದು ಎಂದು ಹೇಳಿದ್ದಾರೆ.  ಹರಿಪ್ರಿಯಾ ಅವರ ತಂದೆಯ ಪುಣ್ಯಪೂಜೆ ದಿನದಂತೆ ಪ್ರಪೋಸ್ ಮಾಡಿದ್ದು ಎಂದು ಹೇಳಿದ್ದಾರೆ. ನನ್ನ ತಂದೆಯಲ್ಲಿರುವ ನೂರಾರು ಕ್ವಾಲಿಟಿಯನ್ನು ವಸಿಷ್ಠ ಅವರಲ್ಲಿ ಕಾಣುತ್ತಿರುವೆ ಎಂದು ಹರಿಪ್ರಿಯಾ ಹೇಳಿದರು. 

66

ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿಯ ಒಂದಷ್ಟು ವಿಷಯವನ್ನು ಹಂಚಿಕೊಂಡಿದ್ದಾರೆ. ಹರಿಪ್ರಿಯಾಗೆ ತಂದೆ ಇಲ್ಲ, ವಸಿಷ್ಠ ಸಿಂಹಾಗೆ ತಾಯಿ ಇಲ್ಲ. ಇವರಿಬ್ಬರ ಮಧ್ಯೆ ಪ್ರೀತಿ ಮೊಳಕೆ ಒಡೆಯಲು ಇದು ಕೂಡ ಒಂದು ಕಾರಣವಂತೆ. ಹರಿಪ್ರಿಯಾಗೆ ವಸಿಷ್ಠ ಸಿಂಹರಿಂದ ತಂದೆಯ ಪ್ರೀತಿಯೂ ಸಿಕ್ತಂತೆ, ಇನ್ನು ವಸಿಷ್ಠಾಗೆ ಹರಿಪ್ರಿಯಾರಿಂದ ತಾಯಿಯ ಮಮತೆಯೂ ಸಿಕ್ಕಿದೆಯಂತೆ. 
 

Read more Photos on
click me!

Recommended Stories