ನಟಿ ಜಯಸುಧಾ 3ನೇ ಮದುವೆ! 2 ವರ್ಷ ಹಿಂದೆ ಮಗನ ಮದುವೆ ಮಾಡಿ ಈಗ ನಿಮ್ದಾ? ಎಂದು ಕಾಲೆಳೆದ ನೆಟ್ಟಿಗರು

Published : Jan 14, 2023, 03:49 PM IST

ವಜ್ರಕಾಯ ಚಿತ್ರ ನಟಿ ಮದುವೆ ವದಂತಿ ಕೇಳಿ ನೆಟ್ಟಿಗರು ಶಾಕ್.  ಮೂರನೇ ಮದುವೆ ಆಗಲು ಕಾರಣವೇನು? 

PREV
16
ನಟಿ ಜಯಸುಧಾ 3ನೇ ಮದುವೆ! 2 ವರ್ಷ ಹಿಂದೆ ಮಗನ ಮದುವೆ ಮಾಡಿ ಈಗ ನಿಮ್ದಾ? ಎಂದು ಕಾಲೆಳೆದ ನೆಟ್ಟಿಗರು

ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಜಯಸುಧಾ ಮೂರನೇ ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಸಿನಿಮಾ ಮತ್ತು ರಾಜಕೀಯ ಗಣ್ಯರನ್ನು ಆಹ್ವಾನಿಸಿ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. 

26

ಜಯಸುಧಾ ಮೂರನೇ ಮದುವೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ ಅಲ್ಲದೆ ನೆಟ್ಟಿಗರು ಕೇಳುತ್ತಿರುವ ಪ್ರಶ್ನೆಗೆ ಜಯ ಮೌನ ಮುರಿದಿದ್ದಾರೆ.  

36

ಕೆಲವು ದಿನಗಳ ಹಿಂದೆ ಉದ್ಯಮಿಯೊಬ್ಬರ ಜೊತೆ ಜಯಸುಧಾ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು. ಜಯಸುಧಾ ಮದುವೆ ಆಗುತ್ತಿರುವ ವ್ಯಕ್ತಿ ಇವರೇ ಎಂದು ಕೆಲದು ಕಾಮೆಂಟ್ ಮಾಡಿದ್ದರು. 

46

ಫೋಟೋದಲ್ಲಿರುವ ವ್ಯಕ್ತಿ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟವರಲ್ಲ ಅಂದ್ಮೇಲೆ ಯಾರು ಇರಬಹುದು? ಉತ್ತರ ಗೊತ್ತಿಲ್ಲದೆ ಮದುವೆ ಎನ್ನುವವರೂ ಇದ್ದಾರೆ. 

56

'ಜಯಸುಧಾ ಅವರ ಬಗ್ಗೆ ಜೀವನಚರಿತ್ರೆ ಮಾಡಬೇಕು ಎಂದು ಅಮೆರಿಕದಿಂದ ಉದ್ಯಮಿ ಫೆಲಿಪ್ ರೂಲ್ಸ್‌ ಎಂಬುವವರು ಭಾರತಕ್ಕೆ ಬಂದಿದ್ದಾರೆ. ಇಂಡಸ್ಟ್ರಿಯಲ್ಲಿ ನನ್ನ ಪ್ರಮುಖ್ಯತೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಪ್ರತಿಯೊಂದು ಕಾರ್ಯಕ್ರಮಕ್ಕೆ ಜೊತೆಯಾಗಿ ಬರುತ್ತಿದ್ದಾರೆ.'

66

'ಫೆಲಿಪ್‌ ಅವರ ಸ್ವಂತ ನಿರ್ಧಾರ ನನ್ನ ಬಗ್ಗೆ ಸಿನಿಮಾ ಮಾಡುವುದು. ಸಂಶೋಧನೆ ಮಾಡುವಾಗ ಇಂಟರ್‌ನೆಟ್‌ನಲ್ಲಿ ನನ್ನ ಬಗ್ಗೆ ತಿಳಿದುಕೊಂಡಿದ್ದಾರೆ ಆದರೆ ಇಲ್ಲಿ ನಾನು ಹೇಗೆ ನನ್ನ ವ್ಯಕ್ತಿತ್ವ ಏನು ನನ್ನ ಸಿನಿಮಾ ಕೆಲಸಗಳು ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಬಂದಿದ್ದಾರೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ಇತ್ತೀಚಿಗೆ ನಾನು ಅಮೆರಿಕಗೆ ತೆರಳಿ ಅವರನ್ನು ಭೇಟಿ ಮಾಡಿದ್ದೆ' ಎಂದು ಜಯಸುಧಾ ಸ್ಪಷ್ಟನೆ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories