ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ನಾಯಕಿಯಾಗಿ ರೀನಾ ಆಗಿ ಮಿಂಚಿದ ನಟಿ ಶ್ರೀನಿಧಿ ಶೆಟ್ಟಿ (Shrinidhi Shetty) ಸದ್ಯ ಆ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಆದಾದ ನಂತರ ವಿಕ್ರಮ್ ಜೊತೆಗೆ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು.
ಇದೀಗ ಸದ್ಯದ ಬ್ಯುಸಿ ನಟಿ ಶ್ರೀನಿಧಿ. ಈ ನಟಿ ಸದ್ಯ ಎರಡು ತೆಲುಗು ಸಿನಿಮಾ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಸು ಕಾದ, ಹಿಟ್ -ದ ಥರ್ಡ್ ಕೇಸ್ ಎನ್ನುವ ತೆಲುಗು ಸಿನಿಮಾಗಳಲ್ಲಿ ಹಾಗೂ ಕಿಚ್ಚ ಸುದೀಪ್ ನ ಹೊಸ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಶ್ರೀನಿಧಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಸಿಂಪಲ್ ವಿತ್ ಔಟ್ ಮೇಕಪ್ ಲುಕ್ ನಲ್ಲಿ ಶ್ರೀನಿಧಿ ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಓವರ್ ಸೈಜ್ ಟೀಶರ್ಟ್ ಜೊತೆಗೆ ಮೆಸ್ಸಿ ಹೇರ್ ಸ್ಟೈಲ್ ಮಾಡಿಕೊಂಡಿರುವ ಶ್ರೀನಿಧಿ ಶೆಟ್ಟಿ ತುಂಬಾನೆ ಕ್ಯೂಟ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸಿಂಪಲ್ ಆಗಿ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ.
ಶ್ರೀನಿಧಿ ಶೆಟ್ಟಿ ಫೋಟೊಗೆ ಅಭಿಮಾನಿಗಳು ಕೂಡಲು ಮೆಸ್ಸಿಯಾಗಿದ್ರೂ ನೀವು ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದೀರಿ. ಕ್ಯೂಟ್ ಆಗಿ ಕಾಣಿಸುತ್ತೀರಿ ಎಂದಿದ್ದಾರೆ. ಒಳ್ಳೆ ಹೃದಯದಿಂದ ಮಾತ್ರ ಸಂತೋಷ ನೋಡೋದಕ್ಕೆ ಸಾಧ್ಯವಾಗುತ್ತೆ. ನಿಮ್ಮ ನಗುವಿಗೆ ಎಂತಹ ದೊಡ್ಡ ಸಮಸ್ಯೆಯನ್ನು ಸಹ ಫಿಕ್ಸ್ ಮಾಡುವ ಶಕ್ತಿ ಇದೆ ಎಂದು ಹೇಳಿದ್ದಾರೆ.