'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

Published : Mar 19, 2026, 07:40 PM IST

ಕೆಡಿ ಚಿತ್ರದ 'ಸೆರಗ ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿದ್ದರೆ, ನಟಿ ನೋರಾ ಫತೇಹಿ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದಿದ್ದಾರೆ. ಈ ನಡುವೆ, ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.

PREV
16
ಸೆರಗ ಸರ್ಸು ವಿವಾದ

ಕೆಡಿ ಚಿತ್ರದ ಸೆರಗ ಸರ್ಸು ಹಾಡಿನ ವಿವಾದ ಭುಗಿಲೆದ್ದಿದೆ. ಇದರಲ್ಲಿನ ಅಶ್ಲೀಲ ಸಾಹಿತ್ಯದ ವಿರುದ್ಧ ಭಾರಿ ದೂರು ದಾಖಲಾಗಿದ್ದು, ಹಾಡುಗಳನ್ನೆಲ್ಲಾ ಸೋಷಿಯಲ್​ ಮೀಡಿಯಾದಿಂದಲೂ ಡಿಲೀಟ್​ ಮಾಡಲಾಗಿದೆ.

26
ಜನರಲ್ಲಿ ಕ್ಷಮೆ

ಇದಾಗಲೇ ಪ್ರೇಮ್​ ಅವರು ಜನರ ಕ್ಷಮೆ ಕೋರಿದ್ದಾರೆ. ತಮ್ಮಿಂದ ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

36
ನುಣುಚಿಕೊಂಡ ನಟಿ

ಹಾಡಿಗೆ ಸೆರಗನ್ನು ಸರಿಸಿ ಸೊಂಟ ಬಳುಕಿಸಿದ್ದ ಬಾಲಿವುಡ್​ ನಟಿ ನೋರಾ ಫತೇಹಿ, ನನಗೆ ಈ ಸಾಹಿತ್ಯದ ಅರ್ಥವೇ ಗೊತ್ತಿರಲಿಲ್ಲ, ಸೆರನ್ನು ಸರಿಸಿಬಿಟ್ಟೆ ಎಂದು ನುಣುಚಿಕೊಂಡು, ತಮ್ಮ ಬಳಿ ವಿವಾದ ಸುಳಿಯದಂತೆ ನೋಡಿಕೊಂಡಿದ್ದಾರೆ.

46
ಪ್ರೇಮ್​ ಪ್ರತಿಕ್ರಿಯೆ

ಇವರಿಗೆ ಎಲ್ಲವನ್ನು ಅರ್ಥ ಮಾಡಿಸಿಯೇ ಡಾನ್ಸ್​ ಮಾಡಿಸಲಾಗಿತ್ತು. ಅಷ್ಟಕ್ಕೂ ಅರ್ಥ ಗೊತ್ತಿಲ್ಲದೇ ನಟನೆ ಮಾಡುವುದು ಆಗುವುದಿಲ್ಲ, ಆದರೂ ನಟಿ ಹೀಗೆ ಏಕೆ ಹೇಳಿದ್ರೋ ಎಂದು ಪ್ರೇಮ್​ ಉತ್ತರ ಕೊಟ್ಟಾಗಿದೆ.

56
ಖಾತೆ ಡಿಲೀಟ್​

ಇದರ ನಡುವೆಯೇ, ಇದೀಗ ಈ ಹಾಡನ್ನು ಹಾಡಿದ ಗಾಯಕಿ ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯನ್ನೇ ಡಿಲೀಟ್​ ಮಾಡಿಬಿಟ್ಟಿದ್ದಾರೆ.

66
ಸ್ವಲ್ಪ ದಿನ ದೂರ

ಈ ವಿವಾದದ ಬೆನ್ನಲ್ಲೇ ಡಿಲೀಟ್​ ಆಗಿರುವ ಕಾರಣ, ಈ ವಿವಾದದಿಂದ ಸ್ವಲ್ಪ ದಿನ ದೂರ ಉಳಿಯಲು ನಟಿ ನಿರ್ಧರಿಸಿರಬಹುದು ಎನ್ನಲಾಗಿದೆ. ಅಷ್ಟಕ್ಕೂ ಐಶ್ವರ್ಯ ಅವರು ತಮ್ಮ ಕಂಚಿನ ಕಂಠದಿಂದ ಇದಾಗಲೇ ಹಲವಾರು ಹಿನ್ನೆಲೆ ಗಾಯಕಿಯಾಗಿ ದನಿಯಾಗಿದ್ದಾರೆ. ಆದರೆ ಈ ಹಾಡು ಅವರನ್ನೂ ಫಜೀತಿಗೆ ತಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories