ಜೋಗಿ ಪ್ರೇಮ್ ಕಾರ್ ಹತ್ತಿಸಿದ್ದಾರೆ, ಮುಂದೆ ಏರೋಪ್ಲೇನ್ ಹತ್ತಿಸ್ತಾರೆ: ನಟ ಧ್ರುವ ಸರ್ಜಾ

First Published | Dec 25, 2024, 10:55 AM IST

ನಿರ್ದೇಶಕ ಪ್ರೇಮ್, ‘ನನ್ನ ಪ್ರತೀ ಸಿನಿಮಾದಲ್ಲಿಯೂ ಜಾನಪದ ಶೈಲಿಯ ಹಾಡೊಂದು ಇರುತ್ತದೆ. ಈ ಸಿನಿಮಾದ ಜಾನಪದ ಶೈಲಿಯ ಹಾಡು ಇದು. ಈ ಹಾಡು ಐದು ಭಾಷೆಯಲ್ಲಿಯೂ ಬಿಡುಗಡೆ ಆಗಿದೆ. 

‘ಶಿವ ಶಿವ ಹಾಡಿಗೆ ನಿರ್ದೇಶಕ ಪ್ರೇಮ್ ಅವರು ಕಾರ್‌ ಮೇಲೆ ಹತ್ತಿ ಡಾನ್ಸ್ ಮಾಡಲು ತಿಳಿಸಿದರು. ಆಮೇಲೆ ಕಾರು ಚಲಿಸುತ್ತಿರುತ್ತದೆ, ನೀನು ಡಾನ್ಸ್ ಮಾಡಬೇಕು ಅಂದ್ರು. ನಾನು ಆಗಲ್ಲ ಅಂದೆ. ನೀನು ಮಾಡೇ ಮಾಡ್ತೀಯಾ ಅಂತ ಹತ್ತಿಸಿ ಡಾನ್ಸ್ ಮಾಡಿಸಿದ್ದಾರೆ. ಈಗ ಕಾರ್ ಹತ್ತಿಸಿದ್ದಾರೆ, ಮುಂದೆ ಅವರು ಏರೋಪ್ಲೇನ್ ಕೂಡ ಹತ್ತಿಸಬಹುದು’.

ಹೀಗೆ ಹೇಳಿ ನಗಿಸಿದ್ದು ಧ್ರುವ ಸರ್ಜಾ. ಕೆಡಿ ಚಿತ್ರದ ‘ಶಿವ ಶಿವ’ ಹಾಡು ಬಿಡುಗಡೆ ಸಂದರ್ಭದಲ್ಲಿ ಅವರು ಪ್ರೇಮ್‌ ಅವರ ಕಾಲೆಳೆದು ಹೊಗಳಿದರು. ‘ಈ ಹಾಡು ವರ್ಷಾಂತ್ಯಕ್ಕೆ ಟ್ರೆಂಡ್ ಆಗುತ್ತದೆ’ ಎಂದು ಹೇಳಿದರು.

Tap to resize

ನಿರ್ದೇಶಕ ಪ್ರೇಮ್, ‘ನನ್ನ ಪ್ರತೀ ಸಿನಿಮಾದಲ್ಲಿಯೂ ಜಾನಪದ ಶೈಲಿಯ ಹಾಡೊಂದು ಇರುತ್ತದೆ. ಈ ಸಿನಿಮಾದ ಜಾನಪದ ಶೈಲಿಯ ಹಾಡು ಇದು. ಈ ಹಾಡು ಐದು ಭಾಷೆಯಲ್ಲಿಯೂ ಬಿಡುಗಡೆ ಆಗಿದೆ. 
 

ಹಿಂದಿಯಲ್ಲಿ ಅಜಯ್‌ ದೇವಗನ್‌, ತಮಿಳಲ್ಲಿ ಲೋಕೇಶ್ ಕನಗರಾಜ್, ತೆಲುಗಲ್ಲಿ ಶ್ರೀಹರಿ ಬಿಡುಗಡೆ ಮಾಡಿದ್ದಾರೆ. ಈ ಸಾಂಗ್‌ ನೋಡಿದವರೆಲ್ಲಾ ಅದ್ಬುತ ಮೇಕಿಂಗ್ ಎಂದು ಹೇಳಿದ್ದಾರೆ. ಅದಕ್ಕೆಲ್ಲಾ ಕಾರಣ ನನ್ನ ತಂಡ. ಕಾಂಪೀಟ್ ಮಾಡೋಕೆ ಸಾಧ್ಯವೇ ಆಗದಂತಹ ಒಂದು ಹಾಡು ಮಾಡಿದ್ದು ನಮ್ಮ ತಂಡದ ಹೆಮ್ಮೆ’ ಎಂದರು.

ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ‘70ರ ದಶಕದ ಬೆಂಗಳೂರನ್ನು ಕಟ್ಟಿಕೊಡುತ್ತಿದ್ದೇವೆ. 18 ಎಕರೆಯಲ್ಲಿ ಸೆಟ್ ಹಾಕಿದ್ದೇವೆ. ತಿಗಳರ ಪೇಟೆ, ಟೌನ್‌ಹಾಲ್‌, ಮಾರ್ಕೆಟ್‌ ಹೀಗೆ ಎಲ್ಲವನ್ನೂ ಇಲ್ಲಿ ನೋಡಬಹುದು. ಬಜೆಟ್‌ ಬಗ್ಗೆ ಯೋಚಿಸದೆ ಇಷ್ಟು ದೊಡ್ಡದಾಗಿ ಸೆಟ್‌ ಹಾಕಲು ಅವಕಾಶ ನೀಡಿದ ತಂಡಕ್ಕೆ ಧನ್ಯವಾದ’ ಎಂದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ‘ಕೆಡಿ ಚಿತ್ರದ ಸಂಗೀತಕ್ಕೆ ಹೂಡಿಕೆ ಮಾಡಿದ ಹಣದಿಂದ ಹೊಸ ಸಿನಿಮಾ ಮಾಡಬಹುದು. ಇಲ್ಲಿ ಎಲ್ಲವೂ ಬೆಸ್ಟ್‌ ಇದೆ. ವಿದೇಶದಲ್ಲಿ 264 ಪೀಸ್‌ ಆರ್ಕೆಸ್ಟ್ರಾ ಮಾಡಿಸಿದ್ದೇವೆ. 

ಒಬ್ಬೊಬ್ಬ ಗಾಯಕರಿಗೂ ಆರೇಳು ತಿಂಗಳು ಕಾದು ರೆಕಾರ್ಡಿಂಗ್ ಮಾಡಿಸಿದ್ದೇವೆ. ಇಲ್ಲಿನ ಎಲ್ಲಾ ಹಾಡುಗಳಿಗೂ ಪ್ರೇಮ್ ಅವರೊಬ್ಬರೇ ಓನರ್. ನಾನು ಅವರ ಹಾದಿಯಲಿ ನಡೆದಿದ್ದೇನಷ್ಟೇ’ ಎಂದು ಹೇಳಿದರು.
 

ಮೋಹನ್ ಮಾಸ್ಟರ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಆನಂದ್ ಆಡಿಯೋ ಶ್ಯಾಮ್, ರಕ್ಷಿತಾ, ನಾಯಕ ನಟಿ, ರೀಷ್ಮಾ ನಾಣಯ್ಯ, ಗೀತ ರಚನೆಕಾರ ಮಂಜುನಾಥ್ ಬಿ ಎಸ್, ನಿರ್ಮಾಪಕರಾದ ಸುಪ್ರೀತ್ ಇದ್ದರು.
 

Latest Videos

click me!