‘ಮ್ಯಾಕ್ಸ್ ಹೈ ವೋಲ್ಟೇಜ್ ಸಿನಿಮಾ. ನಿಷ್ಠಾವಂತ ಪೊಲೀಸ್ ಅಧಿಕಾರಿ ಅರ್ಜುನ್ ಮಹಾಕ್ಷಯ್ ಆಗಿ ಕಾಣಿಸಿಕೊಂಡಿದ್ದೇನೆ. ಆತನನ್ನ ಎಲ್ಲರೂ ಮ್ಯಾಕ್ಸ್ ಅಂತ ಕರೆಯುತ್ತಾರೆ. ನಿರ್ದೇಶಕ ವಿಜಯ್ ಅವರ ಸ್ಕ್ರಿಪ್ಟ್‌ನಲ್ಲಿನ ಪ್ರಾಮಾಣಿಕತೆ ಇಷ್ಟ ಆಯ್ತು. ಅವರ ವಿಷನ್ ಚೆನ್ನಾಗಿತ್ತು, ಹೀಗಾಗಿ ಸಿನಿಮಾ ಒಪ್ಪಿಕೊಂಡಿದ್ದೆ. ಟ್ರೇಲರ್ ನೋಡಿದಾಗ ಆ್ಯಕ್ಷನ್, ರಕ್ತ ಕಾಣಬಹುದು, ಆದರೆ ಅದೇ ಸಿನಿಮಾ ಅಲ್ಲ.