ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರದ ‘ಸೆಲ್ಫಿ ಸರೋಜಾ’ ಹಾಡು ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ.
ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರದ ‘ಸೆಲ್ಫಿ ಸರೋಜಾ’ ಹಾಡು ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮ ಸಾಹಿತ್ಯದ ಈ ಹಾಡಿಗೆ ವಿನೋದ್ ಯಜಮಾನ್ಯ ಸಂಗೀತ ನೀಡಿದ್ದು, ಕಿರಣ್ ರಾಜ್, ಮುಂಬೈ ಬೆಡಗಿ ಕೃತಿ ವರ್ಮ ಹಾಗೂ ಭೂಷಣ್ ಮಾಸ್ಟರ್ ಹೆಜ್ಜೆ ಹಾಕಿದ್ದಾರೆ. ಸತ್ಯನಾರಾಯಣ್ ಮತ್ತು ಭಾರತಿ ಸತ್ಯನಾರಾಯಣ್ ನಿರ್ಮಿಸಿರುವ ಈ ಚಿತ್ರ ಡಿ. 18ರಂದು ತೆರೆಗೆ ಬರಲಿದೆ.
23
ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು
ಹಾಡು ಬಿಡುಗಡೆ ವೇಳೆ ಭಾವುಕರಾಗಿ ಮಾತನಾಡಿದ ನಾಯಕ ಕಿರಣ್ ರಾಜ್, ‘ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈಗ ಬೆಳ್ಳಿತೆರೆಯಲ್ಲೂ ನನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ‘ಜಾಕಿ 42’ ನನ್ನ ಜೀವನದ ದೊಡ್ಡ ಪಣ. ಕಲ್ಲಿಗೆ ಏಟು ಬಿದ್ದಾಗಲೇ ಅದು ಶಿಲೆಯಾಗುತ್ತದೆ, ಆದರೆ ನಿರಂತರ ಏಟು ಬಿದ್ದರೆ ಕಲ್ಲೂ ಮಣ್ಣಾಗುತ್ತದೆ. ಮಣ್ಣಾಗುವ ಮುನ್ನ ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು ಎಂಬ ಆಸೆ ನನ್ನದು’ ಎಂದರು.
33
ರೇಸ್ ಕುರಿತ ಸಿನಿಮಾವಲ್ಲ
ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡಿ, ‘15 ವರ್ಷಗಳ ಹಿಂದೆ ರೇಸ್‌ಕೋರ್ಸ್ ಬಗ್ಗೆ ಮೂಡಿದ್ದ ಕುತೂಹಲವೇ ಈ ಕಥೆಗೆ ಪ್ರೇರಣೆ. ಇದು ಕೇವಲ ರೇಸ್ ಕುರಿತ ಸಿನಿಮಾವಲ್ಲ; ಪ್ರೀತಿ, ಕುಟುಂಬದ ಭಾವನೆ ಹಾಗೂ ಮನರಂಜನೆಯ ಅಂಶಗಳೂ ಇದರಲ್ಲಿವೆ’ ಎಂದರು. ನಿರ್ಮಾಪಕರಾದ ಸತ್ಯನಾರಾಯಣ್ ಮತ್ತು ಭಾರತಿ ಸತ್ಯನಾರಾಯಣ್, ನಾಯಕಿ ಹೃತಿಕಾ ಶ್ರೀನಿವಾಸ್, ಕೃತಿ ವರ್ಮ, ಭೂಷಣ್ ಮಾಸ್ಟರ್ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.