₹25 ಲಕ್ಷ ಬಜೆಟ್‌ನಲ್ಲಿ 8 ಕೋಟಿ ಗಳಿಕೆ, ಆತಂಕದ ಘಟನೆಯಿಂದ ಹುಟ್ಟಿದ ರಾಜ್ ಈ ಸಿನಿಮಾ ಸೂಪರ್ ಹಿಟ್

Published : Nov 17, 2026, 04:55 PM IST

ಡಾ.ರಾಜ್ ಕುಮಾರ್ ಜೀವನ ಚೈತ್ರ ಸಿನಿಮಾ ಸೂಪರ್ ಹಿಟ್ ಮೂವಿ. ಉದಯಶಂಕರ್ ಬರೆದ 30 ಕತೆಗಳನ್ನು ಡಾ.ರಾಜ್ ತಿರಸ್ಕರಿಸಿದ್ದರು. ದೇವಸ್ಥಾನದಲ್ಲಿ ನಡೆದ ಒಂದು ಘಟನೆಯಿಂದ ಜೀವನ ಚೈತ್ರಿ ಸಿನಿಮಾ ಹುಟ್ಟಿಕೊಂಡಿತು. ಬಳಿಕ ಇತಿಹಾಸ ನಿರ್ಮಿಸಿದೆ.

PREV
16
ಜೀವನ ಚೈತ್ರ ಸಿನಿಮಾ ರೋಚಕ ಘಟನೆ

ಸ್ಯಾಂಡಲ್‌ವುಡ್ ಸಿನಿಮಾ ಪೈಕಿ ಜೀವನ ಚೈತ್ರ ಅತ್ಯಂತ ಯಶಸ್ವಿ ಹಾಗೂ ಕನ್ನಡಿಗರ ಮನಮುಟ್ಟಿದ ಕತೆ. ಬಾಕ್ಸ್‌ ಆಫೀಸ್‌ನಲ್ಲೂ ಹಲವು ದಾಖಲೆ ಬರದ ಸಿನಿಮಾ ಇದು. ಈ ಸಿನಿಮಾದ ಹಾಡುಗಳು ಈಗಲೂ ಸೂಪರ್ ಹಿಟ್. ಕೇವಲ 25 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿತ್ತು. ವಿಶೇಷ ಅಂದರೆ 8 ರಿಂದ 9 ಕೋಟಿ ರೂಪಾಯಿ ಬಾಚಿಕೊಂಡಿತು. 1992ರಲ್ಲಿ ಬಿಡುಗಡೆಯಾದ ಈ ಸಿನಿಮಾ ಹುಟ್ಟಿದ್ದೇ ಒಂದು ರೋಚಕ.

26
30 ಕತೆ ತಿರಸ್ಕರಿಸಿದ್ದ ಡಾ.ರಾಜ್ ಕುಮಾರ್

ಡಾ.ರಾಜ್ ಕುಮಾರ್ ಹಾಗೂ ಚಿ ಉದಯಶಂಕರ್ ಯಶಸ್ವಿ ಜೋಡಿ. 90ರ ದಶಕದಲ್ಲಿ ಉದಯಶಂಕರ್ ಬರೆದ 30 ಕತೆಗಳನ್ನು ಡಾ.ರಾಜ್ ಕುಮಾರ್ ತಿರಸ್ಕರಿಸಿದ್ದರು. ಇತ್ತ ಡಾ.ರಾಜ್ ಕುಮಾರ್ ಕಾಲ್‌ಶೀಟ್ ಸಿಗುತ್ತಿರಲಿಲ್ಲ. ಕಾರಣ ಇತರ ನಿರ್ದೇಶಕರ ಸಾಲು ಸಾಲು ಸಿನಿಮಾಗಳಲ್ಲಿ ಡಾ.ರಾಜ್ ತೊಡಗಿದ್ದರು. ಉದಶಂಕರ್ ಬರೆದ ಬಹುತೇಕ ಕತೆಗಳು ಕಸದ ಬುಟ್ಟಿ ಸೇರಿತ್ತು. ದೇವಸ್ಥಾನದ ಒಂದು ಘಟನೆ ಭರ್ಜರಿ ಯಸಸ್ವಿಯ ಜೀವನ ಚೈತ್ರಾ ಸಿನಿಮಾ ಹುಟ್ಟಿಗೆ ಕಾರಣವಾಯಿತು.

36
ಗವಿಗಂಗಾಧೇಶ್ವರ ದೇವಸ್ಥಾನದಲ್ಲಿ ನಡೆದಿದ್ದೇನು?

ಬೆಂಗಳೂರಿನ ಗವಿಗಂಗಾಧೇಶ್ವರ ದೇವಸ್ಥಾನದಲ್ಲಿ ಚಿ ಉದಯಶಂಕರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಪೂಜೆ ಮುಗಿಸಿ ಹೊರಬಂದಿದ್ದಾರೆ.ಈ ವೇಳೆ ಆಟೋ, ಸ್ಕೂಟರ್ ಮೂಲಕ ಬಂದ ಅಭಿಮಾನಿಗಳು ಉದಶಂಕರ್ ಸುತ್ತುವರಿದಿದ್ದಾರೆ. ಸಾಹಿತಿ ಉದಯಶಂಕರ್ ಗಾಬರಿಯಾಗಿದ್ದಾರೆ. ಅಭಿಮಾನಿಗಳು ಡಾ.ರಾಜ್‌ಗೆ ಯಾಕೇ ನೀವು ಕತೆಗಳನ್ನು ಕೊಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಯಿಂದ ಉದಯಶಂಕರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಬೆಚ್ಚಿ ಬಿದ್ದಿದ್ದರು.

46
ಕಾರಿನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಮಹತ್ವದ ಸೂಚನೆ

ಕಾರಿನಲ್ಲಿ ಮರಳುವಾಗ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಉದಯಶಂಕರ್ ಈ ಕುರಿತು ಮಾತನಾಡುತ್ತಾ ಮರಳಿದ್ದಾರೆ. ಈ ವೇಳೆ ಹನುಮಂತನಗರದ ಲೇಖರಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ವ್ಯಾಪ್ತಿ ಪ್ರಾಪ್ತಿ ಕಾದಂಬರಿ ಬಗ್ಗೆ ನೀವು ಹೇಳಿದ್ದೀರಿ ಉದಯಶಂಕರ್ ಎಂದು ಪಾರ್ವತಮ್ಮ ಗಂಭೀರವಾಗಿ ಮಾತುಗಳನ್ನಾಡಿದ್ದರು. ಇದೇ ಕಾದಂಬರಿಯನ್ನು ಸಿನಿಮಾ ಮಾಡೋಣ ಎಂದು ಪಾರ್ವತಮ್ಮ ರಾಜ್‌ಕುಮಾರ್ ಸೂಚಿಸಿದ್ದಾರೆ.

56
ತಕ್ಷಣವೇ ಒಪ್ಪಿದ ಡಾ.ರಾಜ್

ದೇವಸ್ಥಾನದ ಘಟನೆಯಿಂದ ಆತಂಕಗೊಂಡಿದ್ದ ಉದಯ್ ಶಂಕರ್, ಪಾರ್ವತಮ್ಮ ಸೂಚನೆ ಬೆನ್ನಲ್ಲೇ ಎಲ್ಲಾ ತಯಾರಿಯೊಂದಿಗೆ ಅದೇ ದಿನ ರಾತ್ರಿ ಡಾ.ರಾಜ್ ಮನೆಗೆ ಬಂದಿದ್ದರು. ಎರಡು ವರ್ಷಗಳಿಂದ ಕತೆ ರಿಜೆಕ್ಟ್ ಮಾಡುತ್ತಿದ್ದ ಡಾ.ರಾಜ್ ಕುಮಾರ್ ಈ ಕತೆ ಕೇಳಿದ ತಕ್ಷಣವೇ ಒಪ್ಪಿಕೊಂಡರು. ಇದೇ ವ್ಯಾಪ್ತಿ ಪ್ರಾಪ್ತಿ ಕಾದಂಬರಿ ಕತೆ ಜೀವನ ಚೈತ್ರ ಸಿನಿಮಾ ಆಗಿ ತೆರೆಕಂಡಿತು.

66
ರಾಷ್ಟ್ರಪ್ರಶಸ್ತಿ ಗರಿ

ಮಾನವನಾಗಿ ಹುಟ್ಟಿದ ಮೇಲೆ, ನಾದಮಯ ಸೇರಿದಂತೆ ಜೀವನ ಚೈತ್ರಾ ಸಿನಿಮಾದ ಹಾಡುಗಳು ಸೂಪರ್ ಹಿಟ್. ಈ ಸಿನಿಮಾ ಹಾಗೂ ಹಾಡುಗಳು ಹಲವು ದಾಖಲೆ ಬರೆದಿತ್ತು. ವಿಶೇಷ ಅಂದರೆ ಈ ಸಿನಿಮಾ ಡಾ.ರಾಜ್‌ಕುಮಾರ್‌ಗೆ ರಾಷ್ಟ್ರಪ್ರಶಸ್ತಿ ಗರಿ ನೀಡಿತು. ನಾದಮಯ ಹಾಡಿಗೆ ಅತ್ಯುತ್ತಮ ಪ್ಲೈಬ್ಯಾಕ್ ಸಿಂಗರ್ ರಾಷ್ಟ್ರಪ್ರಶಸ್ತಿ ಡಾ.ರಾಜ್ ಹುಡುಕಿಕೊಂಡು ಬಂದಿತ್ತು. ಡಾ.ರಾಜ್ ಕುಮಾರ್ ಸಿನಿಮಾ ನಿರೀಕ್ಷಿತ ದಾಖಲೆ ಬರೆಯದಿದ್ದ ಸಮಯದಲ್ಲಿ ಜೈವನ ಚೈತ್ರಿ ಸಿನಿಮಾ ಭರ್ಜರಿ ಕಮ್‌ಬ್ಯಾಕ್ ಕೊಟ್ಟಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories