ಚೈತ್ರದ ಚಂದ್ರಮ ಸಿನಿಮಾ ಟ್ರೋಲ್‌ಗಳ ಬಗ್ಗೆ ಎಸ್.ನಾರಾಯಣ್ ಪುತ್ರ ಪಂಕಜ್ ಓಪನ್ ಮಾತು

Published : Sep 30, 2026, 12:45 PM IST

'ಚೈತ್ರದ ಚಂದ್ರಮ' ಸಿನಿಮಾದ ದೃಶ್ಯಗಳನ್ನು ಬಳಸಿ ಐಪಿಎಲ್ ವೇಳೆ ಮಾಡಲಾಗುವ ಟ್ರೋಲ್‌ಗಳ ಬಗ್ಗೆ ನಟ ಪಂಕಜ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿರುವ ಅವರು, ಟ್ರೋಲ್‌ಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದಾರೆ.

PREV
15
ಚೈತ್ರದ ಚಂದ್ರಮ

ಸ್ಯಾಂಡಲ್‌ವುಡ್ ನಟ, ಪಂಕಜ್ ನಾರಾಯಣ್ ಸಂದರ್ಶನವೊಂದರಲ್ಲಿ ಟ್ರೋಲ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೌದು, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ವೇಳೆ 'ಚೈತ್ರದ ಚಂದ್ರಮ' ಸಿನಿಮಾದ ತುಣುಕಗಳನ್ನ ಬಳಸಿ ಮೀಮ್ಸ್ ಕ್ರಿಯೇಟ್ ಮಾಡಲಾಗುತ್ತಿತ್ತು. ಈ ಬಗ್ಗೆ ಪಂಕಜ್ ಮಾತನಾಡಿದ್ದಾರೆ.

25
ಶೂಟಿಂಗ್‌ಗೆ ಹೋದಾಗ್ಲೇ ಗೊತ್ತಾಯ್ತು

2008ರಲ್ಲಿ ಬಿಡುಗಡೆಯಾದ ಚೈತ್ರ ಚಂದ್ರಮ ಸಿನಿಮಾ ಪಂಕಜ್ ಎಸ್. ನಾರಯಣ್ ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅಮೂಲ್ಯ ನಟಿಯಾಗಿ ನಟಿಸಿದ್ದರು. ಸಮ್ಮರ್ ಹಾಲಿಡೇ ಅಂತ ತಂದೆಯೊಂದಿಗೆ ಶೂಟಿಂಗ್‌ಗೆ ಹೋದಾಗಲೇ ನಾನೇ ಚೈತ್ರ ಚಂದ್ರಮ ಸಿನಿಮಾದ ನಾಯಕ ಅನ್ನೋದು ಗೊತ್ತಾಯ್ತು. 30-35 ದಿನಗಳವರೆಗೆ ಶೂಟಿಂಗ್ ನಡೀತು ಎಂದರು.

35
ಊಟ-ತಿಂಡಿ ಬಗ್ಗೆ ಮಾತು

ಚೈತ್ರ ಚಂದ್ರಮ ಸಿನಿಮಾ ನನಗೆ ಒಳ್ಳೆಯ ಅನುಭವ ನೀಡಿದೆ. ಸೀನಿಯರ್ ಕಲಾವಿದರೊಂದಿಗೆ ನಟಿಸಿದಾಗ ನನಗೆ ಹಲವು ಪಾಠಗಳನ್ನು ಕಲಿಸಿದೆ. ನಾನು ಆಗ ತಾನೇ ಹೈಸ್ಕೂಲ್ ಮುಗಿಸಿದ್ದೆ. ಆಮೂಲ್ಯ ಇನ್ನು ಸ್ಕೂಲ್‌ನಲ್ಲಿದ್ರು. ಆಗ ನಾವಿಬ್ಬರು ಊಟ-ತಿಂಡಿ ಬಗ್ಗೆಯೇ ಮಾತನಾಡುತ್ತಿದ್ದೇವು. ಶೋಭರಾಜ್, ವೀಣಾ ಸುಂದರ ಅವರೊಂದಿಗೆ ಕೆಲಸ ಮಾಡಿದ್ದು ಖುಷಿಯಿದೆ ಎಂದರು.

45
ಟ್ರೋಲ್ ಬಗ್ಗೆ ಮಾತು

ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾದಾಗ ಪಂಕು ಅವರನ್ನು ಸೆಲೆಕ್ಟ್ ಮಾಡಿ ಅನ್ನೋ ಪೋಸ್ಟ್‌ಗಳು ಬರುತ್ತಿರುತ್ತವೆ. ಸಿನಿಮಾವೊಂದರ ಪಾತ್ರವನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಾರೆಯೇ ವಿನಃ ವೈಯಕ್ತಿಕ ವಿಚಾರಗಳನ್ನು ಬಳಸಿ ಟ್ರೋಲ್ ಮಾಡಿಲ್ಲ. ಹಾಗಾಗಿ ಟ್ರೋಲಿಗರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಚೈತ್ರದ ಚಂದ್ರಮ ಸಿನಿಮಾದ ಟ್ರೋಲ್‌ ನೋಡಿದಾಗ ನನಗೂ ಖುಷಿಯಾಗುತ್ತೆ ಎಂದು ಪಂಕಜ್ ಎಸ್. ನಾರಾಯಣ್ ಹೇಳಿದ್ದಾರೆ.

55
ಪಾಸಿಟಿವ್ ಆಗಿ ಸ್ವೀಕರಿಸಿ

ಚೈತ್ರದ ಚಂದ್ರಮ ಸಿನಿಮಾ ಬಿಡುಗಡೆಯಾಗಿ ಸುಮಾರು 20 ವರ್ಷಗಳು ಕಳೆದಿವೆ. ಇಂದಿಗೂ ಸಿನಿಮಾದ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುತ್ತೆ ಅಂದ್ರೆ ಅದಕ್ಕೆ ಟ್ರೋಲ್ ಪೇಜ್‌ಗಳೇ ಕಾರಣ. ಇಂದಿಗೂ ಜನರಿಗೆ ಆ ಪಾತ್ರ ನೆನಪಿನಲ್ಲಿದೆ ಅನ್ನೋದು ನಮ್ಮ ಖುಷಿ. ಟ್ರೋಲ್ ಹಾಗೂ ಮೀಮ್ಸ್‌ಗಳನ್ನು ಪಾಸಿಟಿವ್ ಆಗಿ ಸ್ವೀಕರಿಸಿ ಪಂಕಜ್ ನಾರಾಯಣ್ ಹೇಳುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories